ಸ್ವಚ್ಛತೆ ಜೊತೆಗೆ ಬಡವರ ಬಗ್ಗೆ ಕಾಳಜಿ ವಹಿಸಲು ನ್ಯಾಯಾಧೀಶರ ಸಲಹೆ
1 min readಸ್ವಚ್ಛತೆ ಜೊತೆಗೆ ಬಡವರ ಬಗ್ಗೆ ಕಾಳಜಿ ವಹಿಸಲು ನ್ಯಾಯಾಧೀಶರ ಸಲಹೆ
ಮನೆ ಸ್ವಚ್ಛತೆ ಮಾತ್ರವಲ್ಲದೆ, ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಿ
ಬಡವರ ಬಗ್ಗೆ ಕರುಣೆ, ಕಾಳಜಿ ಇರಲಿ ಎಂದ ನ್ಯಾಯಾಧೀಶರು
ಸ್ವಚ್ಛತಾ ಕಾರ್ಯಕ್ರಮವೆಂದರೆ ಕಸಗುಡಿಸುವುದು ಮಾತ್ರವಲ್ಲ, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುವ ಜೊತೆಗೆ ಬಡ ಬಗ್ಗರ ಬಗ್ಗೆ ಕಾಳಜಿ ಇರಿಸಿಕೊಳ್ಳುವಂತೆ ಜಿಲ್ಲಾ ಸತ್ರ ನ್ಯಾಯಾಧೀಶೆ ನಾಗಮಣಿ ಅವರು ಸಲಹೆ ನೀಡಿದರು.
ಚಿಂತಾಮಣಿ ನಗರದ ನ್ಯಾಯಾಲಯ ಆವರಣದಲ್ಲಿ ಇಂದು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ನಗರಸಭೆೆ ಆಶ್ರಯದಲ್ಲಿ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶೆ ನಾಗಮಣಿ ಅವರು, ಕಳೆದ ಕೆಲ ದಿನಗಳಿಂದ ತಾಲೂಕಿನ ಶಾಲೆ. ಕಚೇರಿ. ಕಲ್ಯಾಣಿಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಿದ ವಕೀಲರ ಸಂಘ ಮತ್ತು ಪೌರಕಾರ್ಮಿಕರನ್ನು ನ್ಯಾಯಾಧೀಶರು ಅಭಿನಂದಿಸಿದರು.
ಸ್ವಚ್ಛತೆಯ ಬಗ್ಗೆ ಮಹತ್ವದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಕನಸು ನನಸಾಗಿಸಬೇಕೆಂದು ಅವರು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ಮಾತನಾಡಿ, ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2 ರವರೆಗೆ ಚಿಂತಾಮಣಿ ತಾಲೂಕಿನ ಕೆಲ ಶಾಲೆ. ಕಚೇರಿ. ಕಲ್ಯಾಣಿಗಳನ್ನು ಗುರುತಿಸಿ ಸ್ವಚ್ಛತಾ ಕಾರ್ಯಕ್ರಮಗಳು ನಡೆಸಿ ಜನರಲ್ಲಿ ಅರಿವು ಮೂಡಿಸಲಾಗಿದೆ. ಪ್ರತಿಯೊಬ್ಬರು ವಾಸಿಸುವ ಸ್ಥಳಗಳನ್ನು ಸ್ವಚ್ಛತೆಯಿಂದ ಇರಿಸಿಕೊಂಡು ಆರೋಗ್ಯವಂತರಾಗಿರಬೇಕು ಎಲ್ಲರೂ ಹೆಚ್ಚು ಸ್ವಚ್ಛತಾ ಕಾರ್ಯಕ್ರಮಗಳು ಮುಂದುವರಿಸಬೇಕೆ0ದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಚಲಪತಿ ಮಾತನಾಡಿ, ನ್ಯಾಯಾಧೀಶರಾದ ಪಿ. ಎಂ. ಪ್ರಕಾಶ್. ನಾಗಮಣಿ ಮೇಡಂ ಅವರು ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿ, ನಗರದಲ್ಲಿ ಕುಡಿಯವ ನೀರು ಯುಜಿಡಿ ಇನ್ನಿತರೆ ಸಮಸ್ಯೆಗಳು ಬಗೆಹರಿಸುವಂತೆ ಸೂಚನೆ ಕೊಟ್ಟಿದ್ದಾರೆ. ಅವರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಲಿದ್ದು, ಅವರ ಸಹಕಾರ ಹೀಗೇ ಮುಂದುವರಿಯಲಿ ಎಂದು ಅವರು ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆ ಎಂ ಎಫ್ ಸಿ ಅಧ್ಯಕ್ಷ ಪಿ. ಎಂ. ಪ್ರಕಾಶ್. ವಕೀಲರ ಸಂಘದ ಉಪಾಧ್ಯಕ್ಷ ಜಿ. ಶಿವಾನಂದ. ಕಾರ್ಯದರ್ಶಿ ಆರ್. ಎಸ್. ಶ್ರೀನಾಥ್. ಜಂಟಿ ಕಾರ್ಯದರ್ಶಿ ಕೆ.ಎನ್. ಮಂಜುನಾಥ್. ಖಜಾಂಚಿ ಎಂ.ಎಸ್. ಚೌಡಪ್ಪ. ಹಿರಿಯ ವಕೀಲ ಆರ್. ಚಂದ್ರಶೇಖರ್, ವಕೀಲ ಸಂಘದ ಮಾಜಿ ಅಧ್ಯಕ್ಷಮಂಜುನಾಥರೆಡ್ಡಿ, ಜೆ.ಎನ್. ವೆಂಕಟೇಶ್. ರಾಯಪಲ್ಲಿ ಮಂಜುನಾಥ್. ಮರವಪಲ್ಲಿ ಮಂಜು. ಕೋನಪ್ಪಲ್ಲಿ ರಮೇಶ್ ಇದ್ದರು