ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಜಂಟಿ ಸರ್ವೆ ಅಳತೆ ಪ್ರಗತಿ ಪರಿಶೀಲನೆ

1 min read

ಜಂಟಿ ಸರ್ವೆ ಅಳತೆ ಪ್ರಗತಿ ಪರಿಶೀಲನೆ

ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶಗಳ ಸರ್ವೆ ಎಂ.ಸಿ.ಸುಧಾಕರ್

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿಕೆ

ಚಿಕ್ಕಬಳ್ಳಾಪುರ ಜಿಲ್ಲಾಯಾದ್ಯಂತ ಕಂದಾಯ, ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಸಿ, ಜಿಲ್ಲೆಯಲ್ಲಿ ಈಗ 49.463 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶ ಸರ್ವೆ ಮೂಲಕ ವರದಿ ಪಡೆದು, ನಂತರ ಇತ್ಯರ್ಥ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶಗಳ ಜಂಟಿ ಸರ್ವೆ ಅಳತೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಜಿಲ್ಲೆಯ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಸರ್ಕಾರ 2022ರ ಮೇ ತಿಂಗಳಲ್ಲಿ ಘೋಷಿಸಿದೆ ಎಂದರು.

ದಾಖಲಿತ ಅರಣ್ಯ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಭೂಮಿಯ ನ್ಯೂನತೆ ಸರಿಪಡಿಸುವ ಸಂಬ0ಧ ತಜ್ಞರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ ಇತ್ಯರ್ಥ ಪಡಿಸಲಾಗುತ್ತದೆ. ಪ್ರತಿ ತಾಲ್ಲೂಕುವಾರು, ಗ್ರಾಮವಾರು, ಸರ್ವೆ ನಂಬರ್ ವಾರು ಸಮೀಕ್ಷೆ ಮತ್ತು ಸರ್ವೆ ಆಗಬೇಕು, ಈ ಕಾರ್ಯ ಕರಾರುವಕ್ಕಾಗಿ ನಿಯಮಾವಳಿ ರೀತಿ ಆಗಬೇಕು ಎಂದರು. ಜಿ¯್ಲÉಯಲ್ಲಿ ಹಿಡುವಳಿದಾರರಾಗಿರುವ ನಿಜವಾದ ರೈತರಿಗೆ ನ್ಯಾಯ ದೊರಕಿಸಿಕೊಡಬಹುದು. ಇಲ್ಲವಾದಲ್ಲಿ ಸಮಸ್ಯೆ ಹೀಗೆಯೇ ಜೀವಂತವಾಗಿರಲಿದೆ. ಸರ್ವೆ, ಸಮೀಕ್ಷೆ ಕಾರ್ಯ ಅತ್ಯಂತ ಜವಾಬ್ದಾರಿಯುತವಾಗಿ ತ್ವರಿತವಾಗಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದರು.

ಅರ್ಜಿದಾರರು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದು, ಸದರಿ ಪ್ರದೇಶವನ್ನು ಪರಿಭಾವಿತ ಅರಣ್ಯವೆಂದು ಘೋಷಿಸಿರುವುದು, ಅರ್ಜಿದಾರರಿಗೆ ಈಗಾಗಲೇ ಸರ್ಕಾರಿ ಜಮೀನು ಗುತ್ತಿಗೆಗೆ ನೀಡಿದ್ದು, ಅಂತಹ ಜಮೀನು ಪರಿಭಾವಿತ ಅರಣ್ಯವೆಂದು ಘೋಷಿಸಿರುವುದು ಆಕ್ಷೇಪಣೆಗಳಿಗೆ ಕಾರಣವಾಗಿದೆ. ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸಮಂಜಸವಲ್ಲ, ಅಂತಹ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಲು ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ, ಸಮಸ್ಯೆ ಬಗ್ಗೆ ಪರೀಶಿಲಿಸಿ, ಮುಂದಿನ 10 ದಿನಗಳಿಗೆ ಮರು ಪರೀಶಿಲನಾ ಪ್ರಗತಿ ವಿಚಾರಣೆ ನೆಡಸಲಾಗುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ಜಿ. ಟಿ ನಿಟಾಲಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಡಿ. ಎಚ್ ಆಶ್ವಿನ್, ಎಲ್ಲಾ ತಾಲ್ಲೂಕು ತಹಸೀಲ್ದಾರ್‌ಗಳು ಇದ್ದರು.

About The Author

Leave a Reply

Your email address will not be published. Required fields are marked *