ಕಳಪೆ ಗುಣಮಟ್ಟದಿಂದ ಕೂಡಿರುವ ಜೆಜೆಎಂ ಕಾಮಗಾರಿಗಳು
1 min readಕಳಪೆ ಗುಣಮಟ್ಟದಿಂದ ಕೂಡಿರುವ ಜೆಜೆಎಂ ಕಾಮಗಾರಿಗಳು
ಕೂಡಲೇ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ದೂರು
ಶಾಸಕ ಪ್ರಭು ಚವ್ಹಾಣ್‌ರಿಂದ ಮುಖ್ಯಮಂತ್ರಿಗಳಿಗೆ ದೂರು
ಬೀದರ್ ಜಿಲ್ಲೆಯ ಔರಾದ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆದ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಸಂಬ0ಧ ತನಿಖೆ ನಡೆಸುವ ವಂತೆ ಮುಖ್ಯ ಮಂತ್ರಿಗಳಿಗೆ ಕಾಮಗಾರಿ ಸಾಕ್ಷ ಚಿತ್ರದ ಮೂಲಕ ಶಾಸಕ ಪ್ರಭು ಚವ್ಹಾಣ್ ದೂರು ಸಲ್ಲಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ಕಳೆದ 25 ರಂದು ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ತೆರಳಿ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ದಲ್ಲಿ ಜೆಜೆಎಂ ಕಾಮಗಾರಿ ನಾಲ್ಕು ಹಂತದಲ್ಲಿ ನಡೆಯುತಿದ್ದು, ಕಾಮಗಾರಿಯಿಂದ ಜನರಿಗೆ ಅನೂಕೂಲಕ್ಕಿಂತ ಅನುಕೂಲವೇ ಹೆಚ್ಚಾಗುತ್ತಿದೆ. ಈ ಕುರಿತು ದೂರುಗಳು ಬಂದಿದ್ದು, ಕೆಲ ಗ್ರಾಮಗಳಲ್ಲಿ ಕಾಮಗಾರಿ ಮುಗಿಸಿ ಪಂಚಾಯತಿಗೆ ನೀಡಿದರು ಜನರಿಗೆ ನೀರು ಸಿಗುತ್ತಿಲ್ಲ ಎಂದು ದೂರು ಕೇಳಿಬರುತ್ತಿರುವುದಾಗಿ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಕೆಲ ಗ್ರಾಮಗಳಲ್ಲಿ ಭಾವಿ ನಿರ್ಮಿಸದೆ ಕೇವ ಪೈಪ್‌ಲೈನ್ ಮಾಡಿ ಪಂಚಾಯತಿಗಳಿಗೆ ನೀಡಿದ್ದಾರೆ. ಇನ್ನು ಕೆಲ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಅವು ಈಗಲೇ ನೀರು ಸೊರುತ್ತಿದೆ. ಅಲ್ಲದೆ ಕಾಮಗಾರಿ ಮಾಡಿರುವ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿಗಾಗಿ ರಸ್ತೆಯಲ್ಲಿ ಅಗೆಯಲಾದ ಗುಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟಿದಾರೆ. ಇದರಿಂದ ಗ್ರಾಮದ ರಸ್ತೆ ಗಳೆಲ್ಲೆ ಸಂಪೂರ್ಣ ಹಾಳಾಗಿ ಜನರು ಸಂಚಾರಿಸುವುದಕ್ಕೆ ತೊಂದರೆ ಯಾಗುತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಜೆಜೆಎಂ ಕಾಮಗಾರಿ ಪಡೆದ ಗುತ್ತಿಗೆದಾರರು ಉಪಗುತ್ತಿಗೆ ನೀಡಿರುವ ಕಾರಣ ಅವರು ತಮ್ಮ ಲಾಭಕ್ಕಾಗಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡುತ್ತಿದಾರೆ. ಹಾಗಾಗಿ ಮುಖ್ಯ ಮಂತ್ರಿಗಳು ಕೂಡಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ದಲ್ಲಿ ನಡೆದ ಜೆಜೆಎಂ ಕಾಮಗಾರಿಯ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಗುಣಮಟ್ಟದ ಕಾಮಗಾರಿ ಮಾಡಿ, ಜನರಿಗೆ ಕುಡಿಯುವ ನೀರು ಒದಗಿಸಲು ಅನೂಕಲ ಮಾಡುವಂತೆ ಶಾಸಕ ಪಭು ಚವ್ಹಾಣ ಮುಖ್ಯ ಮಂತ್ರಿಗಳಿಗೆ ಕಾಮಗಾರಿಗಳ ಸಾಕ್ಷ ಚಿತ್ರಗಳ ಮೂಲಕ ದೂರು ಸಲ್ಲಿಸಿದ್ದಾರೆ.