400 ವರ್ಷಗಳ ಇತಿಹಾಸದ ದೇವಾಲಯ ಜಿರ್ಣೋದ್ಧಾರ
1 min read400 ವರ್ಷಗಳ ಇತಿಹಾಸದ ದೇವಾಲಯ ಜಿರ್ಣೋದ್ಧಾರ
ಅಂಗರೇಖನಹಳ್ಳಿಯ ಭೂದೇವಿ ಸಮೇತ ಲಕ್ಷಿ ನರಸಿಂಹ ದೇವಾಲಯ
ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ, ಜಿರ್ಣಾವಸ್ಥೆಗೆ ತಲುಪಿದ್ದ ದೇವಾಲಯವೊಂದರ ಜೀರ್ಮೋದ್ಧಾರ ಕಾರ್ಯ ಇಂದು ನಡೆಯಿತು. ಹೋಮ, ಹವನ, ಯಜ್ಞಗಳನ್ನು ನೆರವೇರಿಸಿ ಜೀರ್ಣೋದ್ಧಾರ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿಯಲ್ಲಿ 400 ವರ್ಷಕ್ಕೂ ಪುರಾತನವಾದ ಭೂದೇವಿ ಸಮೇತ ಲಕ್ಷಿ ನರಸಿಂಹ ದೇವಾಲಯವೊಂದಿತ್ತು. ಈ ದೇವಾಲಯ ನಿರ್ವಹಣೆ ಇಲ್ಲದೆ ಜಿರ್ಣಾವಸ್ಥೆ ತಲುಪಿದ್ದು, ಇಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ದೇವಾಲಯ ಜೀರ್ಣೋದ್ಧಾರ ಕಾರ್ಯ ನೆರವೇರಿಸಲಾಯಿತು. ಈ ದೇವಾಲಯಕ್ಕೆ ಬಹಳಷ್ಟು ಇತಿಹಾಸವಿದೆ. ಇಲ್ಲಿಗೆ ಬಂದ್ರೆ ಕುಜದೋಷ ನಿವಾರಣೆಯಾಗುವ ಜೊತೆಗೆ ಸಂತಾನ ಭಾಗ್ಯ ಕರುಣಿಸುತ್ತಾರೆ ಎಂಬ ನಂಬಿಕೆ ಈಗಲೂ ಭಕ್ತರಲ್ಲಿದೆ.
ಆದರೆ ಸುಮಾರು ವರ್ಷಗಳಿಂದ ದೇವಾಲಯ ಜೀರ್ಣಾವಸ್ಥೆಗೆ ತಲುಪಿ ಪಾಳು ಬಿದ್ದಂತಾಗಿತ್ತು. ಈಗ ಮತ್ತೆ ದೇವಾಲಯಕ್ಕೆ ಗತ ವೈಭವ ಮರುಕಳಿಸುವಂತೆ ಮಡಾಉವಲ್ಲ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರು ದೇವಾಲಯದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಈ ವೇಳೆ ಮಾತನಾಡಿದ ಅರವಿಂದ ಶಾಸ್ತಿ, ದೇವಾಲಯದಲ್ಲಿ ಹೋಮ, ಹವನ, ಸಂಪ್ರೋಕ್ಷಣೆ, ನವಗ್ರಗ ಆರಾಭನೆ, ಸುಪ್ರಭಾತ ಸೇವೆ ನಡೆಸಲಾಗಿದೆ ಎಂದರು.
ಕಿರುಕಲ್ಯಾಣೋತ್ಸವ ಏರ್ಪಡಿಸಿ ವಿಶೇಷ ಪೂಜೆ ನಡೆಸಿ, ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಸಾಕಷ್ಟು ಸಹಕಾರ ನೀಡಿದ್ದು, ಇನ್ನು ಮುಂದೆ ಪ್ರತಿನಿತ್ಯ ದೇವರ ದರ್ಶನ ನಡೆಯುವಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.