ದೇಶದ ಮೊದಲ ಸ್ಯಾಟಲೈಟ್ ಇಂಟರ್ನೆಟ್‌ಗೆ ಚಾಲನೆ ನೀಡಿದ ಜಿಯೋ, ಗುಡ್ಡಗಾಡು ಪ್ರದೇಶಗಳಿಗೆ ವರದಾನ
1 min readಮೊಬೈಲ್ ಟವರ್, ಕೇಬಲ್ ಅಳವಡಿಕೆ ಸಾಧ್ಯವಾಗದ ಗುಡ್ಡಗಾಡು ಪ್ರದೇಶಗಳಲ್ಲಿ ಉಪಗ್ರಹದಿಂದ ನೇರ ವೈರ್‌ಲೆಸ್ ಇಂಟರ್ನೆಟ್ ಒದಗಿಸುವ ‘ಜಿಯೋ ಸ್ಪೇಸ್ ಫೈಬರ್’ ಸೇವೆಗೆ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಚಾಲನೆ ನೀಡಿದೆ. ಇದು ಭಾರತದ ಮೊಟ್ಟ ಮೊದಲ ‘ಸ್ಯಾಟಲೈಟ್ ಇಂಟರ್ನೆಟ್’ ಸೇವೆಯಾಗಿದ್ದು ದಿಲ್ಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ ಅಧಿವೇಶನದಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಮೊಬೈಲ್ ಟವರ್ ಅಥವಾ ಕೇಬಲ್ ಅಳವಡಿಕೆ ಸಾಧ್ಯವಾಗದ ಗುಡ್ಡಗಾಡು ಪ್ರದೇಶಗಳಲ್ಲಿ ಉಪಗ್ರಹದಿಂದ ನೇರ ವೈರ್‌ಲೆಸ್ ಇಂಟರ್ನೆಟ್ ಒದಗಿಸುವ ‘ಜಿಯೋ ಸ್ಪೇಸ್ ಫೈಬರ್’ ಸೇವೆಗೆ ಪ್ರಮುಖ ಟೆಲಿಕಾಂ ದಿಗ್ಗಜ ‘ಜಿಯೋ’ ಚಾಲನೆ ನೀಡಿದೆ.
ಇದು ಭಾರತದ ಮೊಟ್ಟ ಮೊದಲ ‘ಸ್ಯಾಟಲೈಟ್ ಇಂಟರ್ನೆಟ್’ ಸೇವೆಯಾಗಿದ್ದು, ದಿಲ್ಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ ಅಧಿವೇಶನದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಭಾರತದಲ್ಲಿ ಇಂತಹ ಸೇವೆಗೆ ಚಾಲನೆ ನೀಡುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಇದರ ನಡುವೆಯೇ ಸ್ಯಾಟಲೈಟ್ ಇಂಟರ್ನೆಟ್ ಕ್ಷೇತ್ರಕ್ಕೆ ಜಿಯೋ ಕಾಲಿರಿಸಿದೆ.
ವಿಶ್ವದ ಮೊದಲ ಸ್ಯಾಟಲೈಟ್ ಇಂಟರ್ನೆಟ್ ಸೇವಾ ಸಂಸ್ಥೆ ‘ಎಸ್‌ಇಎಸ್’ ಜತೆ ಸಹಯೋಗದಲ್ಲಿ ರಿಲಯನ್ಸ್ ಜಿಯೋ ಈ ಸೇವೆಯನ್ನು ಒದಗಿಸಲಿದೆ.