ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಜೆಡಿಎಸ್ ಖಂಡನೆ
1 min readಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಜೆಡಿಎಸ್ ಖಂಡನೆ
ಕೂಡಲೇ ಕ್ಷಮೆ ಯಾಚಿಸಲು ಉಗ್ರೇಶ್ ಒತ್ತಾಯ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಬಣ್ಣದ ಆಧಾರದ ಮೇಲೆ ಜಮೀರ್ ಅಹಮದ್ ಅವರು ನಿಂದಿಸಿರುವುದು ಖಂಡನೀಯ. ಇದೇ ಜಮೀರ್ ಅಹಮದ್ ಅವರು ಬೆಳೆದು ಬಂದ ರೀತಿ ನೆನಪಿಸಿಕೊಳ್ಳಲಿ ಎಂದು ಜೆಡಿಎಸ್ ಪರಿಷತ್ ಸದಸ್ಯ ಆರ್. ಉಗ್ರೇಶ್ ಲೇವಡಿ ಮಾಡಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮೈಬಣ್ಣ ನಿಂದಿಸಿ, ಕೀಳಾಗಿ ಮಾತನಾಡಿದ್ದ ಸಚಿವ ಜಮೀರ್ ಅಹಮದ್ ವಿರುದ್ಧ ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್‌ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಪರಿಷತ್ ಸದಸ್ಯ ಆರ್. ಉಗ್ರೇಶ್, ಎಚ್.ಡಿ. ದೇವೇಗೌದರಿಂದ ಜಮೀರ್ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಕಪ್ಪು ಬಣ್ಣವನ್ನು ಕೀಳಾಗಿ ಮಾತನಾಡಿರುವ ಜಮೀರ್ ಅಹಮದ್ ಅವರು ರೈತರಿಗೂ ಅವಮಾನ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಜಗಳ ತಂದಿಡುತ್ತಿದ್ದಾರೆ. ಕೂಡಲೇ ರಾಜ್ಯದ ಜನತೆ ಹಾಗೂ ರೈತರ ಕ್ಷಮೆ ಕೇಲೇಬೇಕು ಎಂದರು.
ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ರೆಹಮತ್ ಮಾತನಾಡಿ, ಜಮೀರ್ ಅವರು ಕರಿಯ ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆದಿರುವುದು ನೋವಾಗಿದೆ. ಕೂಡಲೇ ಮಾತನ್ನು ವಾಪಸ್ಸು ಪಡೆಯಬೇಕು. ಮುಸ್ಲಿಂ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ಕೊಡಿಸಿದವರು ಎಚ್.ಡಿ.ದೇವೇಗೌಡರು. ರಾಜ್ಯದ ಹಿಂದೂಗಳು ಜಮೀರ್ ಅವರ ಮಾತಿಗೆ ಕಿವಿಗೋಡಬೇಡಿ. ಜಮೀರ್ ಮಾತ್ರ ಮುಸ್ಲಿಂ ಅಲ್ಲ. ರಾಜ್ಯದಲ್ಲಿ ಶಾಂತಿ ಭಂಗ ಮಾಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುದಿಮಡು ರಂಗಶಾಮಯ್ಯ, ಬಿ. ಅಂಜಿನಪ್ಪ, ಟಿ.ಡಿ.ಮಲ್ಲೇಶ್, ನಗರ ಜೆಡಿಎಸ್ ಅಧ್ಯಕ್ಷ ಶ್ರೀರಂಗ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ರಂಗನಾಥ್ ಗೌಡ, ಕಾಡುಗೊಲ್ಲ ಸಂಘದ ಅಧ್ಯಕ್ಷ ಚಂದ್ರಪ್ಪ ಇದ್ದರು.