ಹಿಂದೂ ಸಾದರ ಸಮುದಾಯದ ಸಂಸ್ಥಾಪಕ ಅಧ್ಯಕ್ಷರ ಜಯಂತಿ
1 min readಹಿಂದೂ ಸಾದರ ಸಮುದಾಯದ ಸಂಸ್ಥಾಪಕ ಅಧ್ಯಕ್ಷರ ಜಯಂತಿ
ಮ0ಡಿಹರಿಯಣ್ಣ ಜಯಂತ್ಯುತ್ಸವ ಸಂಘಟನೆಗೆ ಸಹಕಾರಿ
ಗೌರಿಬಿದನೂರಿನಲ್ಲಿ ಡಿ.29 ರಂದು ಅದ್ದೂರಿ ಸಾದರ ಹಬ್ಬ
ಗೌರಿಬಿದನೂರು ನಗರದ ವೀರಂಡಹಳ್ಳಿಯ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಡಿಸೆಂಬರ್ ೨೯ರಂದು ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಮಂಡಿಹರಿಯಣ್ಣ ಜಯಂತ್ಯುತ್ಸವದ ಅಂಗವಾಗಿ ಸಾದರ ಹಬ್ಬ ಆಯೋಜಿಸಲಾಗಿದೆ ಎಂದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಆರ್. ವೇಣುಗೋಪಾಲ್ ತಿಳಿಸಿದರು.
ಗೌರಿಬಿದನೂರು ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಆರ್. ವೇಣುಗೋಪಾಲ್, ಹಿಂದೂ ಸಾದರ ಸಮುದಾಯದ ಹಿರಿಯ ಚೇತನ, ಮೈಸೂರು ಶಾಸನ ಸಮಿತಿ ಸದಸ್ಯ, ಬೆಂಗಳೂರಿನ ಪ್ರಸಿದ್ಧ ವರ್ತಕ ಹಾಗೂ ದಾಸೋಹಿಗಳಾದ ಮಂಡಿ ಹರಿಯಣ್ಣನವರ ಜನ್ಮದಿನಾಚರಣೆ ಅಂಗವಾಗಿ ಸಾದರ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.
ಸ್ವಾತ0ತ್ರ ಪೂರ್ವದಿಂದಲೇ ಬೆಂಗಳೂರು ನಗರದಲ್ಲಿ ಖ್ಯಾತ ವರ್ತಕರಾಗಿದ್ದ ಮಂಡಿ ಹರಿಯಣ್ಣ ದಾಸೋಹಿಗಳಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನೆರವಾಗಿದ್ದಾರೆ. ಇಂತಹ ಮಹಾನ್ ನಾಯಕರ ಜನ್ಮದಿನಾಚರಣೆ ಸಮುದಾಯದಿಂದ ಅರ್ಥಪೂರ್ಣವಾಗಿ ನಡೆಸಲಾಗುವುದು. ಕಾರ್ಯಕ್ರಮ ಡಿ.೨೯ರ ಬೆಳಿಗ್ಗೆ ೧೦ ಗಂಟೆಗೆ ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮೂಲಕ ಆರಂಭವಾಗಲಿದೆ. ಹೂವಿನ ಅಲಂಕಾರದ ಬೆಳ್ಳಿ ರಥದಲ್ಲಿ ಮಂಡಿ ಹರಿಯಣ್ಣನವರ ಭಾವಚಿತ್ರ ಮೆರವಣಿಗೆ ಸಾಗಲಿದೆ. ಈ ವೇಳೆ ಸುಮಾರು ಒಂದು ಸಾವಿರಕ್ಕೂ ಅಧಿಕ ಸಮುದಾಯದ ಮಹಿಳೆಯರು ಪೂರ್ಣಕುಂಭ ಕಳಸಗಳನ್ನು ಹೊತ್ತು ಸಾಗಲಿದ್ದಾರೆ. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದರು.
ಮೆರವಣಿಗೆ ವಾಲ್ಮೀಕಿ ವೃತ್ತದಿಂದ ಆರಂಭಗೊ0ಡು ಅಂಬೇಡ್ಕರ್ ವೃತ್ತ, ಎನ್.ಸಿ. ನಾಗಯ್ಯರೆಡ್ಡಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀಶನಿಮಹಾತ್ಮ ದೇವಾಲಯದ ಮುಂಭಾಗದಿAದ ನ್ಯಾಷನಲ್ ಕಾಲೇಜ್ ವೃತ್ತಕ್ಕೆ ತಲುಪಿ ಅಲ್ಲಿಂದ ಸಮುದಾಯದ ಆವರಣದಲ್ಲಿರುವ ವೇದಿಕೆಯತ್ತ ಸಾಗಲಿದೆ. ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಸದ ಡಾ.ಕೆ. ಸುಧಾಕರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ, ಸ್ಥಳೀಯ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಂಡಿ ಹರಿಯಣ್ಣನವರ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಮತ್ತು ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ ಮಂಡಿ ಹರಿಯಣ್ಣ ಮತ್ತು ಎಂ.ಎಸ್. ಮಲ್ಲಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಎಂ.ಬೋಜರಾಜು, ಸಿ.ರವಿಶಂಕರ್ ವಿದ್ಯಾಬಂಧು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಮಿತಿ ಗೌರವಾಧ್ಯಕ್ಷ ಕ್ಯಾಪ್ಟನ್ ಎಂ.ಎ0.ಹರೀಶ್, ಆರ್. ವೇಣುಗೋಪಾಲ್, ಜಿ.ಎನ್. ಕೃಷ್ಣಯ್ಯ, ಎನ್.ಎಂ. ರವಿನಾರಾಯಣರೆಡ್ಡಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.