ಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಕಾರ್ಯಕ್ರಮ
1 min readಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಕಾರ್ಯಕ್ರಮ
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಗತ್ಯ ಮೌಲ್ಯ ಮಾಪನ ಶಿಬಿರ
ಸರ್ಕಾರಿ ಸೌಲಭ್ಯ ಸದುಪಯೋಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಕರೆ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಅಗತ್ಯ ಮೌಲ್ಯ ಮಾಪನ ಶಿಬಿರದೊಂದಿಗೆ ಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಕಾರ್ಯಕ್ರಮವನ್ನು ಇಂದು ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಆಯೋಜಿಸಲಾಗಿತ್ತು. ವಿಕಲಚೇತನರಿಗೆ ಮೀಸಲಿರುವ ಶೇ.5ರ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯ ವಿಕಲಚೇತನರು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ನಗರಸಭೆ ಅಧ್ಯಕ್ಷ ಗಜೇಂದ್ರ ಮನವಿ ಮಾಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಅಗತ್ಯ ಮೌಲ್ಯ ಮಾಪನ ಶಿಬಿರದೊಂದಿಗೆ ಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಮತ್ತು ಅಳತೆ ಶಿಬಿರವನ್ನು ಇಂದು ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ಶೇ.5ರ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯ ವಿಕಲಚೇತನರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಿ0ದ ಆಯೋಜಿಸಿರುವ ಅಗತ್ಯ ಮೌಲ್ಯ ಮಾಪನ ಶಿಬಿರಕ್ಕೆ ಬಂದ ವಿಕಲಚೇತನರ ಅರ್ಜಿಗಳನ್ನು ಪರಿಶೀಲಿಸಿ, ನಗರಸಭೆಯಿಂದ ಶೀಘ್ರದಲ್ಲೆ ಅವರಿಗೆ ತಲುಪುವಂತೆ ಕೆಲಸ ಮಾಡಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್.ಜೆ ಮಾತನಾಡಿ, ವಿಕಲಚೇತನರಿಗೆ ನಗರಸಭೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿಗಳಾಗಿ ಬದುಕುವಂತೆ ಸಲಹೆ ನೀಡಿದರು. ಅಲ್ಲದೆ, ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಸುಮಾರು 130ಕ್ಕೂ ಹೆಚ್ಚು ವಿಶೇಷ ಚೇತನರಿಗೆ ತ್ರಿಚಕ್ರ ಬೈಕ್ ವಿತರಣೆ ಮಾಡುವ ಮೂಲಕ ಅವರ ಸ್ವಾವಲಂಭಿ ಜೀವನಕ್ಕೆ ನೆರವಾಗಿದ್ದರು ಎಂದು ಹೇಳಿದರು. ನಗರಸಭೆ ವ್ಯಾಪ್ತಿಯ ಎಲ್ಲಾ ಅರ್ಹ ವಿಕಲಚೇತನರು ಇದರ ಸದುಪಯೋಗ ಪಡೆದು ಮಾದರಿಯಾಗಬೇಕು. ಜಿಲ್ಲೆಯ ಶ್ರೀಮಂತರು, ಜನಪ್ರತಿನಿಧಿಗಳು ವಿಕಲಚೇತನರಿಗೆ ಸೇವೆ ಸಲ್ಲಿಸುತ್ತಿರುವ ಸಂಘಸ0ಸ್ಥೆಗಳಿಗೆ ನೆರವು ನೀಡಿ ವಿಕಲಚೇತರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಶ್ರಮಿಸಬೇಕು ಎಂದು ಕೋರಿದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಕೆ.ಎನ್. ಮೂರ್ತಿ ಮಾತನಾಡಿ, ಜಿಲ್ಲೆ ವಿಕಲಚೇತನರ ಪುನರ್ವಸತಿ ಕೇಂದ್ರದೊ0ದಿಗೆ ಇನ್ಸಾಲಿಂಬ್ ಇಂಡಿಯಾ ಪ್ರೆವೇಟ್ ಲಿಮಿಟೆಡ್‌ನವರು ಕೈಜೋಡಿಸಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ೩ಡಿ ಸ್ಕಾನರ್ ಮಾದರಿಯಲ್ಲಿ ಕೃತಕಾಂಗಗಳ ತಯಾರಿಕೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆಯುವಂತೆ ಕೋರಿದರು. ಕೇಂದ್ರದಿ0ದ ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ಅತೀ ಅವಶ್ಯಕತೆ ಇರುವ ವಿಕಲಚೇತನರಿಗೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಿ0ದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಸುಮಾರು 50 ಕ್ಕೂ ಹೆಚ್ಚು ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಶಿಬಿರದಲ್ಲಿ ಭಾಗವಹಿಸಿದ್ದು, ಸಾಧನ ಸಲಕರಣೆಗಳಿಗಾಗಿ ಅಗತ್ಯ ಮೌಲ್ಯಮಾಪನ ಮಾಡಿ, ಅರ್ಹ ವಿಕಲಚೇತನರಿಂದ ಅರ್ಜಿ ಪಡೆಯಲಾಯಿತು. ಇನ್ಸಾಲಿಂಬ್ ಇಂಡಿಯಾ ಪ್ರೆವೇಟ್ ಲಿಮಿಟೆಡ್ ಇವರು ಕೃತಕಾಂಗಗಳ ಅವಶ್ಯಕತೆ ಇರುವ ವಿಕಲಚೇತನರಿಗೆ ಅಳತೆ ಪಡೆದರು.