ಕನ್ನಡದ ಬಿಗ್ ಬಾಸ್ ಶೋನಲ್ಲಿ ಜಗದೀಶ್ ಮತ್ತು ರಂಜಿತ್ ಅವರು ಹೊರಹಾಕಲ್ಪಟ್ಟಿದ್ದಾರೆ
1 min readಕನ್ನಡದ ಬಿಗ್ ಬಾಸ್ ಶೋನಲ್ಲಿ ಜಗದೀಶ್ ಮತ್ತು ರಂಜಿತ್ ಅವರು ಹೊರಹಾಕಲ್ಪಟ್ಟಿದ್ದಾರೆ
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಲಾಯರ್ ಜಗದೀಶ್ ಮತ್ತು ನಟ ರಂಜಿತ್ ಅವರು ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ, ಇದಕ್ಕೆ ಕಾರಣ ಅವರು ಮನೆಯ ನಿಯಮ ಉಲ್ಲಂಘಿಸಿದ್ದು. ಈ ಘಟನೆ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಜಗಳದ ಹಿನ್ನಲೆಯಲ್ಲಿ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಸ್ಪರ್ಧಿಗಳ ನಡುವೆ ತೀವ್ರ ವಾಗ್ವಾದಗಳು ನಡೆಯುತ್ತಿದ್ದು, ಜಗದೀಶ್, ಉಗ್ರಂ ಮಂಜು, ಮತ್ತು ರಂಜಿತ್ ನಡುವೆ ಮಾತಿನ ಚಕಮಕಿ ಜೋರಾಗಿತ್ತು.
ನಿನ್ನೆ ರಾತ್ರಿ ಈ ವಾಗ್ವಾದವು ತೀವ್ರ ಗಲಾಟೆಯಾಗಿ ಬದಲಾಯಿತು, ವಿಶೇಷವಾಗಿ ಜಗದೀಶ್ ಬಿಗ್ ಬಾಸ್ ಶೋ ಬಗ್ಗೆ ಅವಾಚ್ಯ ಶಬ್ದಗಳಲ್ಲಿ ಮಾತನಾಡಿದ ಕಾರಣ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ರಂಜಿತ್ ಮತ್ತು ಜಗದೀಶ್ ನಡುವಿನ ಜಗಳ ಮಾನಸ ಸಂಬAಧಿತ ವಿಷಯಗಳ ಮೇಲೆ ತಿರುಗಿತು, ಮತ್ತು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಬಿಗ್ ಬಾಸ್ ಮನೆಯ ನಿಯಮಗಳ ಪ್ರಕಾರ, ಹಿಂಸಾತ್ಮಕ ವರ್ತನೆಗೆ ಅನುಮತಿ ಇಲ್ಲದ ಕಾರಣ, ಶೋನಿಂದ ಇಬ್ಬರನ್ನು ಹೊರಹಾಕಲಾಯಿತು.