ಅಂತೂ ಇಂತೂ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ
1 min readಅಂತೂ ಇಂತೂ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ
ಆದರೂ 99 ವಾಣಿಜ್ಯ ಮಳಿಗೆಗಳ ಹರಾಜು ಇನ್ನೂ ಇಲ್ಲ
ನಗರಸಭೆ ಹಿಂಭಾಗದ 17 ಮಳಿಗೆ ಮಾತ್ರ ಹರಾಜು
ನ.21ಕ್ಕೆ ನಡೆಯಲಿರುವ ವಾಣಿಜ್ಯ ಮಳಿಗೆಗಳ ಹರಾಜು
ಈ ಹಿಂದೆ ಹಲವು ಬಾರಿ ದಿನಾಂಕ ನಿಗಧಿಗೊಳಿಸಿ ಮುಂದೂಡಿರುವ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಮುಹೂರ್ತ ಕೊನೆಗೂ ನಿಗಧಿಯಾಗಿದೆ. ನವೆಂಬರ್ 21ರಂದು 17 ಅಂಗಡಿ ಮಳಿಗೆಗಳ ಹರಾಜು ನಡೆಯಲಿದೆ. ಆದರೆ ಈಗಾಗಲೇ ಹಲವು ಬಾರಿ ಹರಾಜು ನಿಗಧಿಯಾಗಿ ಮುಂದೂಡಲಾಗಿರುವ 99 ಅಂಗಡಿ ಮಳಿಗೆಗಳ ಹರಾಜು ಇನ್ನೂ ನಿಗಧಿಯಾಗಿಲ್ಲ.
ಹೌದು, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿರುವ 99 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಈ ಹಿಂದೆ ಹಲವು ಬಾರಿ ನಿಗಧಿಯಾಗಿ, ಕಾರಣವೇ ಇಲ್ಲದೆ ಮುಂದೂಡಲಾಗಿದೆ. ಈ ಅಂಗಡಿ ಮಳಿಗೆಗಳಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಮಾಲೀಕರು, ಅತಿ ಕಡಿಮೆ ಬಾಡಿಗೆ ಪಾವತಿ ಮಾಡಿ, ವಹಿವಾಟು ನಡೆಸುತ್ತಿದ್ದು, ಇದರಿಂದ ನಗರಸಭೆಗೆ ತೀವ್ರ ನಷ್ಟವಾಗುತ್ತಿದೆ. ಈ ವಾಸ್ತವಾಂಶ ಅರಿವಿದ್ದರೂ ಈ ಹಿಂದೆ ಬಂದ ಯಾವುದೇ ಆಡಳಿತ ಮಂಡಳಿ ಅಂಗಡಿಗಳ ಹರಾಜು ಮಾಡಲು ಧೈರ್ಯ ಮಾಡಿಲ್ಲ.
ಆದರೆ ಪ್ರಸ್ತುತ ನ್ಯಾಯಾಲಯ ಖಡಕ್ ಆದೇಶ ಮಾಡಿದ್ದು, ಯಾವುದೇ ಕಾರಣಕ್ಕೆ ಹರಾಜು ಪ್ರಕ್ರಿಯೆ ಮಾಡದಿದ್ದರೆ ಸಂಬ0ಧಿಸಿದ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆ ಮಾಡುವ ಎಚ್ಚರಿಕೆ ನೀಡಿದೆ. ಇದರಿಂದ ಅನಿವಾರ್ಯವಾಗಿ ನಗರಸಬೆ ಅಧ್ಯಕ್ಷ, ಉಪಾಧ್ಯಕ್ಷರು, ಅವಧಿ ಮಾರಿದ ಅಂಗಡಿ ಮಳಿಗೆಗಳ ಹರಾಜು ನಡೆಸಲೇಬೇಕಿದೆ. ಆದರೆ ಈ ಅಂಗಡಿ ಮಳಿಗೆಗಳ ಹರಾಜು ಮಾಡುವುದಕ್ಕೂ ಮೊದಲು ನಗರಸಭೆ ಹಿಂಭಾಗದಲ್ಲಿ ಕೃಷ್ಣ ಚಿತ್ರಮಂದಿರದ ಹಿಂಭಾಗದಲ್ಲಿ ನಿರ್ಮಿಸಿರುವ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜಿಗೆ ದಿನಾಂಕ ನಿಗಧಿಗೊಳಿಸಲಾಗಿದೆ.
ಈ ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು 17 ಅಂಗಡಿ ಮಳಿಗೆಗಳಿದ್ದು, ಇವುಗಳನ್ನು ಸಾರ್ವಜನಿಕರು ಭಾಗವಹಿಸಿ, ನಿಯಮಗಳಂತೆ ಹರಾಜಿನಲ್ಲಿ ಪಡೆಯಬಹುದಾಗಿದೆ. ಈ ಅಂಗಡಿ ಮಳಿಗೆಗಳಿಗೆ ಈ ಹಿಂದೆ ಹೆಚ್ಚು ಬಾಡಿಗೆ ನಿಗಧಿ ಮಾಡಿದ್ದ ಕಾರಣ ಅವುಗಳನ್ನು ಬಾಡಿಗೆಗೆ ಪಡೆಯಲು ಸಾರ್ವಜನಿಕರು ಆಸಕ್ತಿ ತೋರಿರಲಿಲ್ಲ. ಆದರೆ ಇದೀಗ ಬಾಡಿಗೆಯನ್ನು ಕಡಿತಗೊಳಿಸಲಾಗಿದ್ದು, ನವೆಂಬರ್ 21ಕ್ಕೆ ನಡೆಯಲಿರುವ ಬಹಿರಂಗ ಹರಾಜಿನಲ್ಲಿ 18 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಅಲ್ಲದೆ ಈ ವಾಣಿಜ್ಯ ಸಂಕೀರ್ಣದ ಜೊತೆಗೆ ಚಿಕ್ಕಬಳ್ಳಾಪುರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಹರಾಜು, ಅದೇ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಪಡೆಯಲು ಹರಾಜು ನಡೆಯಲಿದೆ. ಎಲ್ಲ ಹಾರಜು ಪ್ರಕ್ರಿಯೆಗಳಲ್ಲಿ ನಿಯಮದಂತೆ ಸಾರ್ವಜನಿಕರು ಮುಂಗಡ ಠೇವಣಿ ಪಾವತಿಸುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಸಬಹುದಾಗಿದೆ.
ಇನ್ನು ನಗರಸಭೆ ಅಧ್ಯಕ್ಷ ಗಜೇಂದ್ರ ಈ ಸಂಬ0ಧ ಮಾತನಾಡಿ, ನಗರದ ಕೃಷ್ಣಾ ಚಿತ್ರಮಂದಿರದ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನವೆಂಬರ್ 21ಕ್ಕೆ ನಡೆಯಲಿದೆ. 17 ಅಂಗಡಿಗಳು ನಿರ್ಮಿಸಲಾಗಿದ್ದು, ಇವುಗಳ ಬಹಿರಂಗ ಹರಾಜು ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು, ಅಲ್ಲದೆ ಈ ಹಿಂದೆ 5,700 ರುಪಾಯಿ ನಿಗಧಿ ಮಾಡಿದ್ದ ಬಾಡಿಗೆ ಈ ಬಾರಿ ಕಡಿತಗೊಳಿಸಿ 4,300ಕ್ಕೆ ನಿಗಧಿ ಮಾಡಲಾಗಿದೆ ಎಂದು ತಿಳಿಸಿದರು. ಜೊತೆಗೆ ಮೊದಲ ಮಹಡಿಯಲ್ಲಿ ಮೂರು ವಿಶಾಲ ಹಾಲ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಕಚೇರಿ ಸೇರಿದಂತೆ ಇತರೆ ವಿಚಾರಗಳಿಗೆ ಅಗತ್ಯವಿರುವ ನಾಗರಿಕರು ಪಡೆಯಬಹುದಾಗಿದೆ ಎಂದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಐಡಿಎಸ್‌ಎಂಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳ ಹರಾಜು ನವೆಂಬರ್ ೨೧ಕ್ಕೆ ನಡೆಯಲಿದೆ. ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ 79 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಪದೇ ಪದೇ ಮುಂದೂಡಲಾಗುತ್ತಿದೆ. ಇದಕ್ಕೆ ಕಾರಣ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ಯಾರೂ ಭಾಗವಹಿಸುತ್ತಿಲ್ಲ. ಹಾಗಾಗಿ 17 ಬಾರಿ ಹರಾಜು ಪ್ರಕ್ರಿಯೆ ನಡೆಸಿದರೂ ಯಾರೂ ಭಾಗವಹಿಸಿಲ್ಲ. ಈ ವಿಚಾರ ಇದೀಗ ಡಿಎಂಎಗೆ ಕಳುಹಿಸಲಾಗಿದ್ದು, ಸರ್ಕಾರದ ಆದೇಶ ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.
ಈ ವಾಣಿಜ್ಯ ಸಂಕೀರ್ಣದಲ್ಲಿ ಹಾಸ್ಟೆಲ್ ಅಥವಾ ಪಿಜಿ ಮಾಡಲು ಅನುಕೂಲಕರವಾಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಇನ್ನು ಅವಧಿ ಮುಗಿದಿರುವ 99 ಅಂಗಡಿಗಳ ವಿಚಾರ ಮುಖ್ಯವಾಗಿದ್ದು, ಪ್ರಸ್ತುತ ಆಡಳಿತ ಮಂಡಳಿ ಅದನ್ನು ನಡೆಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಗರಸಭೆ ಸಂಪನ್ಮೂಲ ಹೆಚ್ಚಿಸಲು ಪ್ರಸ್ತುತ ಆಡಳಿತ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, 99 ಅಂಗಡಿಗಳ ಹರಾಜು ಪ್ರಕ್ರಿಯೆ ಶೀಘ್ರದಲ್ಲಿಯೇ ನಡೆಯಲಿದೆ ಎಂದರು.
ಪ್ರಸ್ತುತ ಅಂಗಡಿಯೊ0ದರ ಅಳತೆ ವಿಚಾರದಲ್ಲಿ ಗೊಂದಲವಾಗಿ ಹರಾಜು ಪ್ರಕ್ರಿಯೆ ತಡವಾಗಿದ್ದು, ಮುಂದಿನ 20 ದಿನಗಳಲ್ಲಿ 99 ಅಂಗಡಿಗಳ ಹರಾಜು ನಡೆಯಲಿದೆ. ನಮ್ಮ ನಾಯಕರು, ಸಂಸದರು ಆಗಿರುವ ಡಾ.ಕೆ. ಸುಧಾಕರ್ ಅವರ ಸಂಕಲ್ಪದ0ತೆ ನಗರಸಭೆಯಲ್ಲಿ ಪ್ರಮಾಣಿಕ ಕೆಲಸ ಮಾಡುತ್ತೇವೆ, ನಗರಸಭೆಗೆ ಆದಾಯ ಹೆಚ್ಚಿಸುವ ಜೊತೆಗೆ ನಾಗರಿಕರ ಹಿತ ಕಾಪಾಡಲು ಸದಾ ಬದ್ಧರಾಗಿರುವುದಾಗಿ ಅವರು ಹೇಳಿದರು.