ಭೋಗನಂದೀಶ್ವರನಿಗೆ ರಥ ನೀಡಿರುವುದು ನನ್ನ ಪುಣ್ಯ
1 min readಭೋಗನಂದೀಶ್ವರನಿಗೆ ರಥ ನೀಡಿರುವುದು ನನ್ನ ಪುಣ್ಯ
ನಂದಿ ದೇವಾಲಯಕ್ಕೆ ರಥ ನೀಡಿದ ವೆಂಕಟೇಗೌಡ ಅಭಿಮತ
ಪುರಾಣಪ್ರಸಿದ್ಧ ಶ್ರೀ ಭೋಗನಂದೀಶ್ವರನಿಗೆ ಬ್ರಹ್ಮರಥೋತ್ಸವ ಮಾಡಿಸಿಕೊಡುವ ಪುಣ್ಯ ನನಗೆ ಸಿಕ್ಕಿರುವುದು ಭಗವಂತನ ಪ್ರೇರಣೆಯಾಗಿದೆ ಎಂದು ರಥದ ದಾನಿ ಹುರುಳುಗುರ್ಕಿ ಗ್ರಾಮದ ವೆಂಕಟೇಗೌಡ ತಿಳಿಸಿದರು. ನಂದಿಗ್ರಾಮದ ಶ್ರೀ ಭೊಗನಂದೀಶ್ವರ ದೇವಾಲಯದಲ್ಲಿ ನಡೆದ ಕಾರ್ತಿಕ ಸೋಮವಾರದ ರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪುರಾಣಪ್ರಸಿದ್ಧ ಶ್ರೀ ಭೋಗನಂದೀಶ್ವರನಿಗೆ ಬ್ರಹ್ಮರಥೋತ್ಸವ ಮಾಡಿಸಿಕೊಡುವ ಪುಣ್ಯ ನನಗೆ ಸಿಕ್ಕಿರುವುದು ಭಗವಂತನ ಪ್ರೇರಣೆಯಾಗಿದೆ ಎಂದು ರಥದ ದಾನಿ ಹುರುಳುಗುರ್ಕಿ ಗ್ರಾಮದ ವೆಂಕಟೇಗೌಡ ತಿಳಿಸಿದರು. ರಥವನ್ನು ಸಿದ್ಧಪಡಿಸುವಂತೆ ಅನೇಕ ದಾನಿಗಳನ್ನು ಕೇಳಿಕೊಂಡಿದ್ದೆವು. ಹುರಳುಗುರ್ಕಿ ರಾಮಪ್ಪನ ಮಗ ವೆಂಕಟೇಗೌಡ ಅವರನ್ನು ಕೇಳಿಕೊಂಡಾಗ 2 ಕೋಟಿಗೂ ಹೆಚ್ಚು ಹಣ ಖರ್ಚುಮಾಡಿ ರಥವನ್ನು ಸಿದ್ಧಪಡಿಸಿಕೊಟ್ಟಿರುವುದು ದೈವ ಸಂಕಲ್ಪವಾಗಿದೆ ಎಂದರು.
ನಾನು ದೇವನಹಳ್ಳಿ ತಾಲೂಕಿನವನು, ಆದರೂ ಅರಳುಗುರ್ಕಿ ಗ್ರಾಮದಲ್ಲಿ ವಿದ್ಯಾಧ್ಯಾಸ ಮಾಡಿದ್ದೇನೆ. ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಂದಿಯಲ್ಲಿ ನಡೆಯುವ ಭೋಗನಂದೀಶ್ವರನ ಕಲ್ಲಿನ ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದಾ. ಇಲ್ಲಿಗೆ ಬಂದಾಗಲ್ಲೆ ನನಗರಿವಿಲ್ಲದೆ ನಾನೂ ಹೊಸರಥವನ್ನು ಈ ದೇವರಿಗೆ ಮಾಡಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದೆ. ಒಮ್ಮೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಹೀಗೆ ಮೊರೆಯಿಟ್ಟು ಶಕ್ತಿನೀಡು ಎಂದು ಬೇಡಿಕೊಂಡೆ. ದೇವರಿಗೆ ನನ್ನ ಮೊರೆಮುಟ್ಟಿತು. ಈ ರಥವನ್ನು ದೇವಾಲಯಕ್ಕೆ ಅರ್ಪಿಸುತ್ತಿದ್ದೇನೆ ಎಂದರು.
ಇದನ್ನು ನಿರ್ಮಿಸಲು 2ಕೋಟಿಗೂ ಹೆಚ್ಚು ಹಣ ಖರ್ಚಾಗಿದ್ದು, ದೇವರ ಕೃಪೆಯಿಲ್ಲದಿದ್ದರೆ ಈ ಕೆಲಸ ನನ್ನಿಂದ ಆಗುತ್ತಿರಲಿಲ್ಲ ಎಂದು ಹೇಳಿದರು. ಕೋಟೇಶ್ವರದ ರಥದ ಶಿಲ್ಪಿ ಲಕ್ಷಅಮೀನಾರಾಯಣಾರ್ಚಾ ಅವರ ಮಗ ರಾಜಗೋಪಾಲಾಚಾರ್ ನನ್ನ ತಂದೆ ರಾಷ್ಟಪ್ರಶಸ್ತಿ, ರಾಜ್ಯ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ವಿಜೇತರಾಗಿದ್ದು, ಅವರ ಮಾರ್ಗದರ್ಶನದಲ್ಲಿ 173ನೇ ರಥವಾಗಿ ಭೋಗನಂದೀಶ್ವರ ರಥವನ್ನು ಸಿದ್ಧಮಾಡಿಕೊಟ್ಟಿದ್ದೇವೆ. ಶೈವಾಗಮ ಶೈಲಿಯ ರಥ ಇದಾಗಿದ್ದು, ಶಿವನ ಕಥೆಗಳನ್ನು ಇಲ್ಲಿ ಅಳವಡಿಸಲಾಗಿದೆ ಎಂದರು.
ಕೊಲ್ಲೂರು ಮೂಕಾಂಬಿಕೆಯ ರಥದ ಮಾದರಿಯಲ್ಲಿ ಮಾಡಲಾಗಿದೆ. ಈ ರಥ ೮ ಅಡಿ ಎತ್ತರದ ಚಕ್ರ, 15 ಅಡಿ ಎತ್ತರದ ದೇವರನ್ನು ಕೂರಿಸುವ ಜಿಡ್ಡೆಭಾಗ ಹೊಂದಿದೆ. ಸುಮಾರು ೫೪ಅಡಿ ಎತ್ತರದ ರಥ ಇದಾಗಿದೆ. 5ಅಡಿ ಕಲಶವನ್ನು ಹೊಂದಿದ್ದು, ಇದನ್ನು ಭ್ರಹ್ಮರಥ ಎಂದು ಕರೆಯುವರು. ಧರ್ಮಸ್ಥಳ, ಕರಾವಳಿ ಭಾಗದ ಗೂಡಿನ ಶೈಲಿಯನ್ನು ಹೊಂದಿದೆ. ಈ ರಥವನ್ನು ಮಾಡಿಸಿಕೊಟ್ಟಿರುವ ವೆಂಕಟೇಗೌಡ, ನಂದಿಗ್ರಾಮದ ಗ್ರಾಮಸ್ಥರು, ಎಲ್ಲಾ ಸದ್ಭಕ್ತರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಶುಧ ಹಾರೈಸಿದರು.