ಹದಗೆಟ್ಟ ರಸ್ತೆಯಿಂದಾಗಿ ಶವ ಸಾಗಿಸಲೂ ಸಂಕಷ್ಟ
1 min readಹದಗೆಟ್ಟ ರಸ್ತೆಯಿಂದಾಗಿ ಶವ ಸಾಗಿಸಲೂ ಸಂಕಷ್ಟ
ಗು0ಡಿ ಬಿದ್ದ ರಸ್ತೆಯಲ್ಲಿ ಹೆಣ ಸಾಗಿಸಲೂ ಆಗದ ಸ್ಥತಿ
ರಸ್ತೆ ತುಂಬಾ ಕಲ್ಲು, ಜಲ್ಲಿ, ಗುಂಡಿಗಳದೇ ಕಾರುಬಾರು. ಕಾಲುದಾರಿಗಿಂತ ಕಡೆಯಾಗಿದೆ ಇಲ್ಲಿನ ಸ್ಮಶಾನ ರಸ್ತೆ, ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತೆಯಿಲ್ಲ, ಕಸ, ತ್ಯಾಜ್ಯ ರಾಶಿ, ಊರಿನ ಚರಂಡಿ ತ್ಯಾಜ್ಯ ನೀರಿನಿಂದ ದುರ್ವಾಸನೆ. ಇದು ಚಿತ್ರಾವತಿ ನದಿ ಪಕ್ಕದ ಸ್ಮಶಾನದ ರಸ್ತೆಯ ದುಸ್ಥಿತಿ.
ಬಾಗೇಪಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ 23 ವಾರ್ಡುಗಳಿಳಿವೆ. 22 ಸಾವಿರ ಜನಸಂಖ್ಯೆ ಪಟ್ಟಣದಲ್ಲಿದೆ. ಇಲ್ಲಿ ಚಿತ್ರಾವತಿ ನದಿಗೆ ಅಂಟಿಕೊ0ಡ0ತೆ ಬ್ರಾಹ್ಮಣ ಹಾಗೂ ವೈಶ್ಯ ಸಮುದಾಯದ ಚಿತ್ರಾವತಿ ಮುಕ್ತಿಧಾಮ ಚಿತಾಗಾರವಿದೆ. ಇದರ ಮುಂದೆಯೇ ಪರಿಶಿಷ್ಟ ಪಂಗಡ, ಜಾತಿ, ಹಿಂದುಳಿದ, ಇತರೆ ಸಮುದಾಯದವರ ಸ್ಮಶಾನಕ್ಕೆ ಜಾಗ ಮಾಡಲಾಗಿದೆ. ಇಲ್ಲಿಗೆ ಸಂಪರ್ಕ ಕಲ್ಪಿಸಲು ಅವಭೂತ ಹುಸೇನ್ ದಾಸಯ್ಯಸ್ವಾಮಿ ವೃತ್ತದಿಂದ ರಸ್ತೆ ಇದೆ. ಪಟ್ಟಣದ ವಾಲ್ಮೀಕಿ ನಗರ, ಅಂಬೇಡ್ಕರ್ ನಗರ, ಸಂತೇ ಮೈದಾನ, ಗೂಳೂರು ರಸ್ತೆ, ಕಂಚುಕೋಟೆ ಸೇರಿದಂತೆ ವಿವಿಧ ವಾರ್ಡುಗಳಿಂದ 1 ಕಿಮೀ ಕಾಲುನಡಿಗೆಯಲ್ಲಿ ಶವ ಹೊತ್ತು ಸಾಗಿಸಬೇಕು.
ಆದರೆ ರಸ್ತೆಯ ದುರುರವಸ್ಥೆಯಿಂದಾಗಿ ಶವ ಹೊತ್ತು ಸಾಗಲು ಜನರು ಹರಸಾಹಸ ಪಡಬೇಕಾಗಿದೆ. ಮೊಣಕಾಲುದ್ದ ಗುಂಡಿಗಳಲ್ಲಿ ವಾಹನ ಸವಾರರು, ಜನರು ಸರ್ಕಸ್ ಮಾಡುತ್ತ ಸಂಚರಿಸಬೇಕಾಗಿದೆ. ಪುರಸಭೆ ಸ್ಮಶಾನಕ್ಕೆ ಸುಗಮ ರಸ್ತೆ, ಕೂರಲು ಜಾಗ, ನೀರು, ನೆರಳಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು. ಆದರೆ ಸ್ಮಶಾನಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ.
ಪುರಸಭೆಯಲ್ಲಿ ಪ್ರತಿ ವರ್ಷ ಸ್ಮಶಾನದ ಅಭಿವೃದ್ಧಿ ಹಾಗೂ ಇತರೆ ಚಟುವಟಿಕೆ ಗಳಿಗೆ ಕೋಟ್ಯಾಂತರ ಹಣ ಇರುತ್ತದೆ. ಆದರೆ, ಪುರಸಭೆ ಸ್ಮಶಾನವನ್ನು ಕಡೆಗಣಿಸಿದ್ದು, ಯಾವ ಸೌಕರ್ಯಗಳನ್ನೂ ಒದಗಿಸುತ್ತಿಲ್ಲ. ಪಟ್ಟಣದಿಂದ ಸ್ಮಶಾನಕ್ಕೆ ಸಾಗುವ ಅರ್ಧ ರಸ್ತೆಗೆ ಡಾಂಬರು ಹಾಕಲಾಗಿದೆ. ಉಳಿದಂತೆ ಒಂದು ಕಿಲೋ ಮೋಟರ್ ರಸ್ತೆಗೆ ಸಿಮೆಂಟ್ ಆಗಲಿ, ಟಾರು ಆಗಲಿ ಹಾಕಿಲ್ಲ. ಮಳೆಬಂದರೆ ಜನರ ಸಂಚಾರ ಇನ್ನೂ ಕಷ್ಟ. ಕಾಲುದಾರಿಯ ಇಕ್ಕೆಲಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ನಿರ್ಜನ ಪ್ರದೇಶವಾದ್ದರಿಂದ ಅನೈತಿಕ ಚಟುವಟಿ ಕೆಗಳಿಗೂ ಇದು ತಾಣವಾಗಿದೆ.ಇನ್ನಾದರೂ ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.