ಪ್ಯಾರಾಗ್ಲೆಂಡಿ0ಗ್ ವೇಳೆ ಅವಘಡ ನಡೆದ ಆರೋಪ
1 min readಪ್ಯಾರಾಗ್ಲೆಂಡಿ0ಗ್ ವೇಳೆ ಅವಘಡ ನಡೆದ ಆರೋಪ
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ವಿಡಿಯೋ
ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ
ಅದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣ, ಆ ಪ್ರವಾಸಿ ತಾಣಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ವೀಕೆಂಡ್ ವೇಳೆಯಂತೂ ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. ಇನ್ನು ಮಳೆಗಾಲದಲ್ಲಿ ಕಾಶ್ಮೀರವನ್ನು ನೆನಪಿಸುವ ರೀತಿಯಲ್ಲಿ ವಾತಾವರಣ ಇರೋದರಿಂದ ಅಲ್ಲಿಗೆ ಬಂದು ಎಂಜಾಯ್ ಮಾಡೋ ಪ್ರವಾಸಿಗರಿಗೆ ಕೊರತೆ ಇಲ್ಲ. ಆದರೆ ಅದೇ ಜಾಗದಲ್ಲಿ ಜೀವಕ್ಕೆ ಕುತ್ತು ತರುವ ಘಟನೆಯೊಂದು ಇದೀಗ ಆತಂಕ ಹುಟ್ಟಿಸುತ್ತಿದೆ. ಹಾಗಾದರೆ ಆ ಜಾಗ ಯಾವುದು, ಅಲ್ಲಿ ನಡೆದ ಅವಘಡ ಏನು ಅಂತ ನೋಡೋಣ ಬನ್ನಿ.
ರಾಜಧಾನಿ ಬೆಂಗಳೂರಿನಿ0ದ ಅತಿ ಸಮೀಪವಿರುವ ಪ್ರವಾಸಿ ತಾಣ, ಇನ್ನು ಕೆಂಪೇಗೌಡ ಅಂತಾರಾಷ್ಟಿಯ ವಿಮಾನ ನಿಲ್ದಾಣದಿಂದ ಕೂಗಳತೆ ದೂರದಲ್ಲಿರುವ ಪ್ರಮುಖ ಜಾಗ, ಅದು ವಿಶ್ವ ಪ್ರಸಿದ್ಧ ನಂದಿಗಿರಿಧಾಮ. ನಂದಿ ಬೆಟ್ಟ ವೀಕ್ಷಣೆಗೆಂದೇ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಂತಹ ಜಾಗದಲ್ಲಿ ಪ್ಯಾರಾ ಗ್ಲೆಂಡಿ0ಗ್ ಸಾಹಸಕ್ಕೆ ಮುಂದಾಗಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಕೇವಲ ಪ್ಯಾರಾಗ್ಲೆಂಡಿ0ಗ್ ತರಬೇತಿ ಮಾಡಿದ ಕಾರಣಕ್ಕೆ ಮಾತ್ರ ಟೀಕೆ ವ್ಯಕ್ತವಾಗಿಲ್ಲ. ಬದಲಿಗೆ ಜೀವಕ್ಕೆ ಕುತ್ತು ತಂದುಕೊAಡ ಕಾರಣಕ್ಕೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಪ್ಯಾರಾಗ್ಲೆಡಿಂಗ್ ಮಾಡುವ ವೇಳೆ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅದು ನಡೆದಿರೋದು ನಂದಿ ಬೆಟ್ಟದಲ್ಲಿ ಎಂಬ ಸುಳಿವೂ ನೀಡಲಾಗಿದೆ. ಪ್ಯಾರಾಗ್ಲೆಡಿಂಗ್ ಮಾಡುವ ವೇಳೆ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ತೃಣ ಮಾತ್ರದಲ್ಲಿ ಪಾರಾಗಿದ್ದಾರೆ. ಅಪ್ಪಿ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆಯದೆ ಮುಂದೆ ಸಾಗಿದ್ದರೆ ಪ್ರಪಾತಕ್ಕೆ ಬಿದ್ದು ಅವಘಡ ಸಂಭವಿಸುತ್ತಿತ್ತು ಎಂಬುದು ನೆಟ್ಟಿಗರ ಆತಂಕವಾಗಿದೆ.
ಒ0ದು ವೇಳೆ ತಡೆಗೋಡೆ ದಾಟಿದ ನಂತರ ಬಿದ್ದಿದ್ದರೆ ಸಾವಿರಾರು ಅಡಿ ಕೆಳಗಿನ ಪ್ರಪಾತಕ್ಕೆ ಬಿದ್ದು ವ್ಯಕ್ತಿಯ ಸಾವು ಸಂವಿಸುತ್ತಿತ್ತು. ನಂದಿಗಿರಿಧಮದ ಉತ್ತರ ಭಾಗದ ವ್ಯೂ ಪಾಯಿಂಟ್ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು, ಅಪಾಯಕಾರಿ ಪ್ಯಾರಾಗ್ಲೆಡಿಂಗ್ ವೀಡಿಯೋ ವೈರಲ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಇತ್ತೀಚೆಗೆ ನಡೆದಿ ಎನ್ನಲಾಗಿದೆ.
ಬೆಂಗಳೂರು ಅಡ್ವೆಂಚರಸ್ ಸ್ಪೋರ್ಟ್ಸ್ ಎಂಟಪ್ರೆಸಸ್ ಬಿಎಸ್‌ಇ ಸಂಸ್ಥೆ ನಡೆಸುತ್ತಿರುವ ಪ್ಯಾರಾಗ್ಲೆಡಿಂಗ್ ಇದಾಗಿದೆ ಎಂದು ಹೇಳಲಾಗಿದ್ದು, ಪ್ಯಾರಾಗ್ಲೆಡಿಂಗ್ ಸಾಹಸಕ್ಕೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಆದರೆ ನಂದಿ ಗಿರಿಧಾಮದಂತಹ ಜಾಗದಲ್ಲಿ ಪ್ಯಾರಾ ಗ್ಲೆಡಿಂಗ್ ಮಾಡಲು ಅನುಮತಿ ಅಗತ್ಯವಿಲ್ಲವೇ, ಇದ್ದರೆ ಅನುಮತಿ ನಡೀಇದವರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.