ತುರುವೇಕೆರೆಯಲ್ಲಿ ಐಪಿಎಲ್ ಕ್ರಿಕೆಟ್ ಮಾದರಿ ಪಂದ್ಯಾವಳಿ
1 min readತುರುವೇಕೆರೆಯಲ್ಲಿ ಐಪಿಎಲ್ ಕ್ರಿಕೆಟ್ ಮಾದರಿ ಪಂದ್ಯಾವಳಿ
ತುರುವೇಕೆರೆ ಪ್ರೀಮಿಯರ್ ಲೀಗ್ ಆಯೋಜನೆ
ಟಿಪಿಎಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಕ ಆರ್‌ಎಸ್ ಅಕ್ಷರ ಅಕಾಡೆಮಿ ಅಧ್ಯಕ್ಷ ನೆಮ್ಮದಿ ಗ್ರಾಮದ ಸಿ ಎಸ್ ಮೂರ್ತಿ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿ ಪಿ ಲ್ ಪಂದ್ಯಾವಳಿ ಲೋಗೋ ಬಿಡುಗಡೆ ಮಾಡಿದರು. ಬಹುದಿನಗಳ ಕನಸಾಗಿದ್ದ ಐಪಿಎಲ್ ಮಾದರಿಯ ಕ್ರಿಕೆಟ್ ತುರುವೇಕೆರೆಯಲ್ಲಿ ನಡೆಯಲಿದೆ ಎಂದರು.
ತುರುವೇಕೆರೆ ತಾಲೂಕಿನಲ್ಲಿ ಐಪಿಎಲ್ ಪಂದ್ಯದ ಮಾದರಿಯಲ್ಲಿ ಟಿ ಪಿ ಎಲ್ ಪಂದ್ಯಗಳ ತಂಡಗಳ ಆಯ್ಕೆ ಪ್ರಕ್ರಿಯೆ ಮತ್ತು ಹರಾಜು ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ತಂಡಗಳ ಮಾಲೀಕರಾಗಲು ಕೂಡಲೆ ಮಾಹಿತಿ ನೀಡಲು ಕೋರಿದ್ದು ಕೆಲ ಮಾಲೀಕರು ಹರಾಜಿನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಹರಾಜಿನ ಉದ್ದೇಶ ಗ್ರಾಮೀಣ ಮತ್ತು ಪಟ್ಟಣದ ಆಟಗಾರರ ಮಿಶ್ರಣದಿಂದ ತಂಡಗಳನ್ನು ಸಮತೋಲನದಲ್ಲಿರುವ ಹಾಗೆ ಮಾಡಿ ಎಲ್ಲಾ ಆಟಗಾರರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಆಟಗಾರರನ್ನು ಹರಾಜಿನಲ್ಲಿ ಪ್ರಾಂಚೈಸಿಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ಪಂದ್ಯಗಳನ್ನಾಡಲು ತಂಡಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರಿಂದ ಎಲ್ಲರಿಗೂ ಸಮಾನ ಅವಕಾಶ ದೊರೆಯಲಿದೆ. ತಾಲೂಕಿನ ಇತಿಹಾಸದಲ್ಲಿ ಈ ರೀತಿಯ ಪಂದ್ಯಾವಳಿ ಇದೇ ಮೊದಲು. ಹರಾಜು ಪ್ರಕ್ರಿಯೆಗೆ ೨೧ ಸಾವಿರ ಪೇಪರ್ ಅಮೌಂಟ್ ನೀಡಲಾಗುತ್ತಿದ್ದು, ಎಲ್ಲಾ ಗ್ರಾಮೀಣ ಕ್ರೀಡಾ ಪಟುಗಳು ಭಾಗವಹಿಸಬಹುದಾಗಿದೆ.
ಆಟಗಾರರು ೧೦೦ ರೂಪಾಯಿ ಪಾವತಿಸಿ, ಅರ್ಜಿ ಪಡೆದು ಸಲ್ಲಿಸುವ ಮೂಲಕ ಭಗವಹಿಸಬಹುದಾಗಿದೆ. ಅರ್ಜಿಗಳನ್ನು ಅಂಜನಾದ್ರಿ ಬುಕ್ ಅಂಡ್ ಸೈಬರ್ ಸೆಂಟರ್ ದಬ್ಬೇಘಟ್ಟ ರಸ್ತೆ ತಾಲೂಕು ಪಂಚಾಯಿತಿ ಎದುರು ತುರುವೇಕೆರೆ ಇಲ್ಲಿ ದೊರೆಯಲಿದೆ. ಕೆಲವೇ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಸುವುದರಿಂದ ಮೊದಲು ಬಂದವರಿಗೆ ಅವಕಾಶ ದೊರೆಯಲಿದೆ. ಆದಷ್ಟು ಬೇಗ ನೋಂದಣಿ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಕೊನೆಯ ದಿನವಾಗಿದ್ದು, ಆಟಗಾರರು ಇದರ ಉಪಯೋಗ ಪಡೆಯಲು ಕೋರಿದರು. ತಂಡಗಳ ಮಾಲೀಕರಾಗಲು ಬಯಸುವ ಬಿಡ್ ದಾರರು 99862 963238, 6361 512275 ಹಾಗೂ 9611 86 58 23 ಸಂಖ್ಯೆಗಳಿಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.