ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ತಾರಕಕ್ಕೇರಿದ ಕಾಂಗ್ರೆಸ್ ಅಂತರ್ ಕಲಹ

1 min read

ತಾರಕಕ್ಕೇರಿದ ಕಾಂಗ್ರೆಸ್ ಅಂತರ್ ಕಲಹ

ನಾಳೆ ಕಾಂಗ್ರೆಸ್ ವಿರುದ್ಧ ದಲಿತರ ಪ್ರತಿಭಟನೆ

ದಲಿತರಿಗೆ ಅನ್ಯಾಯವಾಗುತ್ತಿರುವ ಆರೋಪ

ಶಾಸಕ ಮತ್ತು ಸಂಸದರ ಬೆಂಬಲಿಗರ ನಡುವೆ ನಡೆಯುತ್ತಿದ್ದ ಮಾತಿನ ಸಮರ ಇನ್ನೂ ಮುಗಿದಿಲ್ಲ. ಆಗಲೇ ಕಾಂಗ್ರೆಸ್ ಆಂತರಿಕ ಭಿನ್ನಮತ ಸ್ಫೋಟಗಂಡಿದೆ. ಕಾಂಗ್ರೆಸ್ ವಿರುದ್ಧ ಮಹಾ ನಾಯಕ ಅಂಬೇಡ್ಕರ್ ಸೇನೆ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದು ಶಾಸಕರ ವಿರುದ್ಧ ಪ್ರತಿಭಟನೆಯಾಗಿದ್ದು, ಸರ್ಕಾರದ ಗಮನ ಸಳೆಯಲು ಹೋರಾಟ ನಡೆಸಲಾಗುತ್ತಿದೆ ಎಂದು ಸೇನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದೀಗ ಹೊಸ ಹೋರಾಟ ನಿದರ್ಶನವಾಗಿದೆ. ನಾಳೆ ಎಂಜಿ ರಸ್ತೆಯಲ್ಲಿರುವ ಜೈ ಭೀಮ್ ಹಾಸ್ಟೆಲ್ ಮುಂಭಾಗದಲ್ಲಿ ಮಹಾ ನಾಯಕ ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆ ಚಿಕ್ಕಬಳ್ಳಾಪುರ ಶಾಸಕರ ವಿರುದ್ಧ ಎಂದು ಸೇನೆಯ ಪದಾಧಿಕಾರಿಗಳು ಹೇಳಿದ್ದು, ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಿಂದಲೂ ಆಂತರಿಕವಾಗಿ ಹೊಗೆಯಾಡುತ್ತಿದ್ದ ಭಿನ್ನಮತ ಇದೀಗ ತಾರಕ್ಕೇರಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಅವರ ಮಗ ಜಗದೀಶ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವ ಮೂಲಕ ಮೊದಲ ಬಾರಿಗೆ ಕಾಂಗ್ರೆಸ್ ಆಂತರಿಕ ಕಲಹ ಸ್ಪೋಟಗೊಂಡಿತ್ತು. ಜಗದೀಶ್ ಟೀಕೆಗಳ ಬಗ್ಗೆ ಕಾಂಗ್ರೆಸ್ ಶಿಸ್ತು ಸಮಿತಿಯುವ ಕಾಂಗ್ರೆಸ್ ಘಟಕದಿಂದ ಜಗದೀಶ್‌ರನ್ನು ವಜಾ ಮಾಡಿತ್ತು.

ಇದರಿಂದ ಶಾಸಕ ಮತ್ತು ಮಾಜಿ ಶಾಸಕನ ಮಗನ ನಡುವೆ ಅಸಮಧಾನ ಹೊಗೆಯಾಡುತ್ತಲೇ ಇತ್ತು. ಇದೀಗ ರಾಜ್ಯ ಯುವಕಾಂಗ್ರೆಸ್ ಚುನಾವಣೆ ಎದುರಾಗಿದ್ದು, ರಾಜ್ಯದಲ್ಲಿ 14 ಮಂದಿ ಕಣದಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಲು ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಕಾಶ ಇತ್ತು ಎಂಬುದು ಅಂಬೇಡ್ಕರ್ ಸೇನೆಯ ವಾದವಾಗಿದೆ. ಅವಕಾಶ ಇದ್ದರೂ ನೀಡಿಲ್ಲ ಎಂದು ಆರೋಪ ಮಾಡಿರುವ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು, ರಾಷ್ಟಿಯ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಅರ್ಹತೆಯ ಆದರದ ಮೇಲೆ ಹಾಲಿ ಉಪಾಧ್ಯಕ್ಷೆಯಾಗಿರುವ ಭವ್ಯ, ರಾಜ್ಯ ಜಂಟಿ ಕಾರ್ಯದರ್ಶಿ ಆಗಿದ್ದ ಎಸ್.ಎಂ.ಜಗದೀಶ್ ಹಾಗೂ ಸೌಮ್ಯ ಅವರಿಗೆ ಅವಕಾಶ ಕಲ್ಪಿಸಿತ್ತು ಎಂದು ಹೇಳಿದ್ದಾರೆ.

ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ದಲಿತ ಸಮುದಾಯಕ್ಕೆ ಸೇರಿದ ಈ ಮೂವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದೇ ಅನ್ಯಾಯ ಎಸಗಿದ್ದಾರೆ ಎಂಬುದು ಪ್ರಸ್ತುತ ಅಂಬೇಡ್ಕರ್ ಸೇನೆ ಮಾಡುತ್ತಿರುವ ಆರೋಪವಾಗಿದೆ. ದಲಿತ ಸಮುದಾಯಕ್ಕೆ ಯೂತ್ ಕಾಂಗ್ರೆಸ್ ಘಟಕದಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ 19 ರಂದು ಚಿಕ್ಕಬಳ್ಳಾಪುರದ ಜೈ ಭೀಮ್ ಹಾಸ್ಟೆಲ್ ಮುಂಭಾಗದಲ್ಲಿ ಅಂಬೇಡ್ಕರ್ ಸೇನೆಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಗೂ ಮೊದಲು ತೀವ್ರ ಸಂಕಷ್ಟ ಎದುರಿಸುತ್ತಿದ್ದ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣಯೆಲ್ಲಿ ಶಾಸಕರನ್ನು ಗೆಲ್ಲಿಸುವ ಮೂಲಕ ಬಲ ವೃದ್ಧಿಸಿಕೊಳ್ಳುವ ಯತ್ನದಲ್ಲಿತ್ತು. ಆದರೆ ಅಂದಿನಿ0ದಲೇ ಆಂತರಿಕ ಕಲಹಗಳು ಜೋರಾಗಿದ್ದು, ಇದೇ ಆಂತರಿಕ ಭಿನ್ನಮತದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡುವ ಜೊತೆಗೆ ಕ್ಷೇತ್ರದಲ್ಲಿ ೨೦ ಸಾವಿರಕ್ಕೂ ಅಧಿಕ ಮತಗಳನ್ನು ಬಿಜೆಪಿ ಪಡೆದು ಗೆಲುವು ಸಾಧಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಮುಂದುವರೆಯುತಿದ್ದರೂ ಇದನ್ನು ಸರಿಪಡಿಸುವಲ್ಲಿ ಹೈಕಮಾಂಡ್ ಈವರೆವಿಗೂ ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಇದೇ ಆಂತರಿಕ ಭಿನ್ನಮತದಿಂದ ಪ್ರಸ್ತುತ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಬಹುಮತ ಇದ್ದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದು ಹೀಗೇ ಮುಂದುವರಿದರೆ ಕಾಂಗ್ರೆಸ್ ಸ್ಥಿತಿ ಏನಾಗಲಿದೆ ಎಂಬ ಆತಂಕ ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.

 

About The Author

Leave a Reply

Your email address will not be published. Required fields are marked *