ಅಂತರ್ಜಾತಿ ವಿವಾಹಕ್ಕೆ ಕುಟುಂಬಸ್ಥರ ಅಡ್ಡಿ
1 min readಅಂತರ್ಜಾತಿ ವಿವಾಹಕ್ಕೆ ಕುಟುಂಬಸ್ಥರ ಅಡ್ಡಿ
ಪ್ರಿಯತಮನೊಂದಿಗೆ ವಿವಾಹಿತೆ ಆತ್ಮಹತ್ಯೆ
ಸೊಂಟಕ್ಕೆ ವೇಲ್ ಬಿಗಿದು ಕೃಷಿಹೊಂಡದಲ್ಲಿ ಮುಳುಗಿ ಸಾವು
ವೇಲ್ ಕಟ್ಟಿಕೊಂಡು ಇಬ್ಬರು ಪ್ರೇಮಿಗಳು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ಯುವತಿಯನ್ನು ಚಿಂತಾಮಣಿ ತಾಲೂಕು ಕಾಚಹಳ್ಳಿ ಗ್ರಾಮದ ಅನುಷಾ (19) ಹಾಗೂ ಕೋರ್ಲಪರ್ತಿ ಬಳಿಯ ಎಂ ಮುದ್ದಲಹಳ್ಳಿ ಗ್ರಾಮದ ವೇಣು (21) ಎಂದು ತಿಳಿದು ಬಂದಿದೆ.
ಚೇಳೂರು ತಾಲೂಕಿನ ದೊಡ್ಡಪಲ್ಲಿ ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅನುಷಾ ಚಿಂತಾಮಣಿ ತಾಲೂಕಿನ ಎಂ ಮುದ್ದಲಹಳ್ಳಿ ಗ್ರಾಮದ ಅಜ್ಜಿ ಮನೆಗೆ ರಜೆ ದಿನಗಳಲ್ಲಿ ಆಗಾಗ ಬರುತ್ತಿದ್ದಳು ಇದೇ ವೇಳೆ ಅದೇ ಗ್ರಾಮದ ಭೋವಿ ಸಮಾಜದ ವೇಣು ಎಂಬ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಸುಮಾರು 2 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿ ಒಪ್ಪದೇ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬ ಯುವಕನ ಜೊತೆ ಕಳೆದ ತಿಂಗಳ ಹಿಂದೆ ಮದುವೆ ಮಾಡಿಸಿದ್ದರು. ಗಂಡನ ಜೊತೆ ದಾಬಸ್ ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದ ಅನುಷಾಳನ್ನು ಗಂಡ ಚೌಡರೆಡ್ಡಿ ಅಷಾಢ ಮಾಸ ಎಂದು ಅನುಷಾಳನ್ನು ತವರೂರು ದೊಡ್ಡಪಲ್ಲಿ ಗ್ರಾಮಕ್ಕೆ ಕಳುಹಿಸಿದ್ದಾನೆ.
ಮೊದಲೇ ಪ್ರೀತಿಯಲ್ಲಿದ್ದ ಅನುಷಾ ಹಾಗೂ ವೇಣು ಮತ್ತೆ ದೂರವಾಣಿ ಮೂಲಕ ಸಂಪರ್ಕ ಮಾಡಿಕೊಂಡಿದ್ದಾರೆ. ಗಂಡನಿಗೆ ಎಟಿಎಂ ಮಾಡಿಸಬೇಕು ಎಂದು ಕಳೆದ ದಿನ ಹೋಗಿದ್ದು, ಪ್ರಿಯಕರ ವೇಣು ಜೊತೆ ಸೇರಿ ಎಂ ಮುದ್ದಲಹಳ್ಳಿ ಗ್ರಾಮದ ತೋಟಕ್ಕೆ ಹೋಗಿ ಕೆಲಸಮಯ ಮಾತುಕತೆ ನಡೆಸಿ, ಚಲಪತಿ ಎಂಬುವವರ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ತಮ್ಮ ಮೊಬೈಲ್ ಪೋನ್ ಹಾಗೂ ಪರ್ಸ್ ಪಕ್ಕಕ್ಕೆ ಇಟ್ಟು, ಇಬ್ಬರು ಅಪ್ಪಿಕೊಂಡು ವೇಲ್‌ನಲ್ಲಿ ಸುತ್ತಿಕೊಂಡು ಕೃಷಿಹೊಂಡಕ್ಕೆ ಹಾರಿದ್ದಾರೆ. ಸಂಜೆಯ ನಂತರ ಗಂಡ ಚೌಡರೆಡ್ಡಿ ಅನುಷಾಗೆ ಪೋನ್ ಮಾಡಿದರೂ ತಗೆಯದ ಹಿನ್ನಲೆ ಗ್ರಾಮಕ್ಕೆ ಬಂದು ಹುಡುಕಾಟ ನಡೆಸಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ಬೆಳಗ್ಗೆ ಚಲಪತಿ ಅವರು ತೋಟಕ್ಕೆ ಹೋದ ವೇಳೆ ಮೊಬೈಲ್ ಪೋನ್, ಪರ್ಸ್, ಚಪ್ಪಲಿಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೃಷಿಹೊಂಡದಲ್ಲಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ವೇಲ್ ಸುತ್ತಿಕೊಂಡು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಷಾ ಗಂಡ ಚೌಡರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಗಂಡ ಚೌಡರೆಡ್ಡಿ ಮೃತಳನ್ನು ಪತ್ನಿ ಎಂದು ಗುರುತ್ತಿಸಿದ್ದಾನೆ. ಘಟನೆಗೆ ಸಂಬoಧಿಸಿ ಪೊಲೀಸರು ಮೃತ ದೇಹಗಳನ್ನು ಚಿಂತಾಮಣಿ ಸಾರ್ವಜನಿಕ ಶವಗಾರಕ್ಕೆ ರವಾನಿಸಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸಿ, ಡಿವೈಎಸ್ಪಿ ಮುರಳೀಧರ ಮತ್ತು ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿದ್ದು, ಕೇಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.