ಬೀದರ್‌ನಲ್ಲಿ ತೀವ್ರವಾದ ವಕ್ಫ್ ವಿರೋಧಿ ಹೋರಾಟ
1 min readಬೀದರ್‌ನಲ್ಲಿ ತೀವ್ರವಾದ ವಕ್ಫ್ ವಿರೋಧಿ ಹೋರಾಟ
ಬಿಜೆಪಿ ನಾಯಕರಿಂದ ಇಂದು ಹೋರಾಟಕ್ಕೆ ಚಾಲನೆ
ರೈತರ, ದೇವಾಲಯಗಳ ಮತ್ತು ಮಠ ಮಾನ್ಯಗಳ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ವಿರುದ್ಧದ ಹೋರಾಟಕ್ಕೆ ಬೀದರ್‌ನಲ್ಲಿ ಇಂದು ಚಾಲನೆ ನೀಡಲಾಯಿತು. ಅಲ್ಲದೆ ಜನರಿಗೆ ವಕ್ಫ್ನಿಂದ ಸಮಸ್ಯೆ ಆಗುತ್ತಿದ್ದರೆ ಕೂಡಲೇ ಮಾಹಿತಿ ನಡೀಉವಂತೆ ಮನವಿ ಮಾಡಲಾಯಿತು. ಪಕ್ಷದ ಚಿಹ್ನೆ ಇಲ್ಲದೆ ಬಿಜೆಪಿ ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಬೀದರ್‌ನಲ್ಲಿ ವಕ್ಫ್ ಹಟಾವೋ ದೇಶ್ ಬಚಾವೋ ಜನ ಜಾಗ್ರತಿ ಅಭಿಯಾನ ನಡೆಯಿತು. ಬೀದರ್ ನಗರದ ಐತಿಹಾಸಿಕ ಝಿರಣಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಯತಾಳ್ ನೇತೃತ್ವದ ತಂಡ ವಿಶೇಷ ಪೂಜೆ ಸಲ್ಲಿಸಿತು. ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಯತ್ನಾಳ್ ಅವರು ಬಿಜಾಪುರ ಜಿಲ್ಲೆಯಲ್ಲಿ ಅವರ ಗಮನಕ್ಕೆ ಬಂದ ತಕ್ಷಣ ಹೋರಾಟ ಮಾಡಿದರು, ಹೋರಾಟದ ಭಾಗವಾಗಿ ದೊಡ್ಡ ಸಭೆಯಾಯ್ತು. ಹಗಲು, ರಾತ್ರಿ ಹೋರಾಟ ಮಾಡಿದ್ದಾರೆ ಎಂದರು.
ವಕ್ಫ್ ಜಾಯಿಂಟ್ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರೂ ಬಂದು ಮನವಿ ತೆಗೆದುಕೊಂಡು ಹೋದ್ರು. ಕೇವಲ ಮಾಹಿತಿ ಮಾತ್ರವಲ್ಲ, ಜನಜಾಗೃತಿ ಮಾಡ್ತಿದ್ದೇವೆ. ಇಂದು ಧರ್ಮಾಪುರ ಹಾಗೂ ಚಟ್ನಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ವಾರ್ ರೂಮ್ ಬಂದ ತಕ್ಷಣ ಜನ ಜಾಗೃತಿ ಮಾಡುವುದಾಗಿ ಘೋಷಿಸಿದರು. ಎಲ್ಲರೂ ಭಾಗವಹಿಸಲು ಬೀದರ್‌ನಿಂದ ನರಸಿಂಹ ದೇವಾಲಯದಿಂದ ಆರಂಭಿಸಿರುವುದಾಗಿ ಹೇಳಿದರು.
ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ ಸಿದ್ದೇಶ್ವರ್, ಬಿ.ಪಿ ಹರೀಶ್, ಜೆಡಿಎಸ್ ನಾಯಕ ಎನ್.ಆರ್. ಸಂತೋಷ್ ಸೇರಿದಂತೆ ಇತರರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಈಶ್ವರ್ ಸಿಂಗ್ ಠಾಕೂರ್‌ಅವರು ಸ್ಥಳೀಯವಾಗಿ ಹೋರಾಟಕ್ಕೆ ನಾಯಕತ್ವ ವಹಿಸಿದ್ದಾರೆ. ವಕ್ಫ್ ಸಮಸ್ಯೆ ಇದ್ರೆ ತಿಳಿಸಿ, ಜನರ ಸಮಸ್ಯೆ ಆಲಿಸಲು ಜಾಗೃತಿ ಮೂಡಿಸಲು ಸ್ಥಳೀಯವಾಗಿ ಎಲ್ಲರೂ ಒಟ್ಟಾಗಿ ಬನ್ನಿ ಎಂದು ಕರೆ ನೀಡಲಾಯಿತು. ರಾಜ್ಯಾಧ್ಯಕ್ಷರ ಬಾವನೆ ಗೌರವಿಸ್ತೇವೆ. ನಾವು ಪಕ್ಷದ ಚಿಹ್ನೆ ಬಳಸಿಕೊಳ್ಳದೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.