ಸೆಮಿಫೈನಲ್‌ಗೆ ಭಾರತ ಸಜ್ಜು; ನಾಯಕನಾದ ಕೊಹ್ಲಿ!
1 min readಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಲೀಗ್ ಹಂತದಲ್ಲಿ ಭಾರತ ತಂಡದ ಅಜೇಯ ಗೆಲುವಿನ ಓಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಂದರ್ಭದಲ್ಲಿ ಅವರು ಭಾರತ ತಂಡದ ಈ ಅಜೇಯ ಗೆಲುವಿನ ಓಟದ ಹಿಂದಿನ ರಹಸ್ಯವನ್ನು ಕೂಡ ಹೇಳಿಕೊಂಡಿದ್ದಾರೆ. ಟೂರ್ನಿಯಲ್ಲಿ ತಾವು ಒಂದು ಸಂದರ್ಭದಲ್ಲಿ ಒಂದು ಪಂದ್ಯದ ಮೇಲೆ ಮಾತ್ರವೇ ಗಮನ ಹರಿಸಿದ್ದು ಈ ಗೆಲುವಿಗೆ ಕಾರಣವಾಯಿತು ಎಂದಿದ್ದಾರೆ.
* “ಟೂರ್ನಿಯನ್ನು ನಾವು ಆರಂಭಿಸಿದಾಗಿನಿಂದಲೂ ಒಂದು ಪಂದ್ಯದ ಮೇಲೆ ಮಾತ್ರವೇ ಗಮನಹರಿಸಿದ್ದೆವು. ನಾವು ಯಾವತ್ತೂ ಅದಕ್ಕೂ ಹೆಚ್ಚು ದೂರ ಯೋಚಿಸಲು ಮುಂದಾಗಲಿಲ್ಲ. ಇದು ಸುದೀರ್ಘವಾದ ಟೂರ್ನಮೆಂಟ್ ಆಗಿದ್ದು ಎಲ್ಲಾ ಪಂದ್ಯಗಳಲ್ಲಿ ಆಡಿದರೆ 11 ಪಂದ್ಯಗಳಲ್ಲಿ ಆಡದಂತಾಗುತ್ತದೆ. ಹಾಗಾಗಿ ಈ ಸುದೀರ್ಘ ಟೂರ್ನಿಯಲ್ಲಿ ಬೇರ್ಪಡಿಸಿ ಬೇರ್ಪಡಿಸಿ ಚಿತ್ತ ನೆಡುವುದು ನಮ್ಮ ಗುರಿಯಾಗಿತ್ತು” ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಪ್ರಶ್ತಿಯ ಒಟ್ಟು ಮೊತ್ತ 10 ಮಿಲಿಯನ್ ಡಾಲರ್. ಅಂದರೆ ಸುಮಾರು 84 ಕೋಟಿ ರೂಪಾಯಿ. ಇದರ ಪೈನ ಮುಂದಿನ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ 4 ಮಿಲಿಯನ್ ಡಾಲರ್ ಪಡೆಯಲಿದೆ. ಅಂದರೆ ಸುಮಾರು 33 ಕೋಟಿ ರೂಪಾಯಿಯಾಗಿರಲಿದೆ. ಇನ್ನು ರನ್ನರ್‌ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ಅಂದರೆ ಸುಮಾರು 16.5 ಕೋಟಿ ರೂಪಾಯಿ ಬಹುಮಾನದ ರೂಪದಲ್ಲಿ ದೊರೆಯಲಿದೆ.
* ಕೆಎಲ್ ರಾಹುಲ್ ಅವರನ್ನು ಶೋಯೆಬ್ ಮಲಿಕ್ ಮುಕ್ತಕಂಠದಿಂದ ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರೊಂದಿಗೆ ರಾಹುಲ್ ಅವರನ್ನು ಹೋಲಿಕೆ ಮಾಡಿದರು. ಈ ಇಬ್ಬರ ಪೈಕಿ ರಾಹುಲ್ ಅವರಲ್ಲಿ ಯಾವುದೇ ಹಂತದಿಂದಲೂ ತಂಡವನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿರು ಆಟಗಾರ ಎಂದು ಬಣ್ಣಿಸಿದ್ದಾರೆ.
“ಆತ ಐದನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರ. ಕ್ಲಾಸೆನ್ ಅವರಿಗೆ ಮುಂದುವರಿಯಬೇಕಾದರೆ ಅಗ್ರ ಕ್ರಮಾಂಖದಿಂದ ಉತ್ತಮವಾದ ಅಡಿಪಾಯ ಬೇಕಾಗುತ್ತದೆ. ಬಳಿಕ ಅವರು ಆ ಆಟವನ್ನು ಮುನ್ನಡೆಸುತ್ತಾರೆ. ಆದರ ಹೋಲಿಕೆ ಮಾಡಿದರೆ ಭಾರತ ತಂಡಕ್ಕೆ ವಿಶ್ವದ ಅತ್ಯುತ್ತಮ ಐದನೇ ಕ್ರಮಾಂಕದ ಆಟಗಾರ ದೊರೆತಿದ್ದಾರೆ. ಆತ ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಆಡುವ ಸಾಮರ್ಥ್ಯವಿರುವ ಬ್ಯಾಟರ್
* ಡೈಲಿ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ ರಣತುಂಗ ಈ ಗಂಭೀರ ಆರೋಪವನ್ನು ಮಾಡಿದ್ದಾರೆ. “ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಹಾಗೂ ಜಯ್ ಶಾ ನಡುವಿನ ಸಂಪರ್ಕದ ಕಾರಣದಿಂದಾಗಿ ಬಿಸಿಸಿಐಗೆ ಎಸ್‌ಎಲ್‌ಸಿ ಮೇಲೆ ನಿಯಂತ್ರಣ ಸಾಧಿಸಬಹುದು ಎನಿಸಿತ್ತು. ಜಯ್ ಶಾ ಅವರೇ ಶ್ರೀಲಂಕಾ ಕ್ರಿಕೆಟನ್ನು ಮುನ್ನಡೆಸುತ್ತಿದ್ದಾರೆ. ಜಯ್ ಶಾ ಒತ್ತಡದ ಕಾರಣದಿಂದಾಗಿಯೇ ಶ್ರೀಲಂಕಾ ಕ್ರಿಕೆಟ್ ಹಳ್ಳ ಹಿಡಿದಿದೆ. ಭಾರತದ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಎನ್ನುವ ಒಂದೇ ಕಾರಣಕ್ಕೆ ಜಯ್ ಶಾ ಇಷ್ಟು ಬಲಶಾಲಿಯಾಗಿದ್ದಾರೆ” ಎಂದಿದ್ದಾರೆ ಅರ್ಜುನ ರಣತುಂಗ.
* ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಭಾರತದಲ್ಲಿ ವಿಶ್ವಕಪ್ ಟೂರ್ನಿಯನ್ನು ಅಂತ್ಯಗೊಳಿಸಿ ಪಾಕಿಸ್ತಾನಕ್ಕೆ ವಾಪಸಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ತವರಿನಲ್ಲಿ ಅತ್ಯಂತ ನೀರಸವಾದ ಸ್ವಾಗತ ದೊರೆತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ತಂಡದ ಪ್ರದರ್ಶನದಿಂದಾಗಿ ಎಷ್ಟು ಬೇಸರಗೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ ಬಳಿಕ ಸತತ ನಾಲ್ಕು ಸೋಲು ಅನುಭವಿಸಿತ್ತು.
* ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಈ ಹಂತದಲ್ಲಿ ಲೀಗ್ ಹಂತದ ಪ್ರದರ್ಶನವನ್ನು ಆಧಾರವಾಗಿಟ್ಟುಕೊಂಡು ಕ್ರಿಕೆಟ್ ಆಸ್ಟ್ರೇಲಿಯಾ ಟೂರ್ನಿಯ ಅತ್ಯುತ್ತಮ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಇದರಲ್ಲಿ ನಿರೀಕ್ಷೆಯಂತೆಯೇ ಭಾರತೀಯ ಆಟಗಾರರೇ ಮೇಲುಗೈ ಸಾಧಿಸಿದ್ದು ನಾಲ್ವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.