ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ

1 min read

ಚಿಕ್ಕಬಳ್ಳಾಪುರ ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ

ಜನ ವಸತಿ ಜಾಗದಲ್ಲಿಯೇ ಕುಡಿದು ಪುಂಡಾಟ

ಬೀದಿ ದೀಪಕ್ಕೆ ಕಲ್ಲಿನಿಂದ ಒಡೆದು ವಿಕೃತಿ ಮೆರೆದ ಪುಂಡರು

ಸ್ಥಳೀಯರಲ್ಲಿ ಆತಂಕ, ಪೊಲೀಸರಿಗೂ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಪುಂಡರ ಹಾವಳಿ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗುತ್ತಿದ್ದು, ಪೊಲೀಸರು ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಪುಂಡರಿ0ದ ಅವಾಂತರಗಳು ನಡೆಯುವ ಆತಂಕ ಎದುರಾಗಿದೆ. ಎಲ್ಲೆಂದರಲ್ಲಿ ಮದ್ಯ ಸೇವನೆ ಮಾಡೋದು, ಮದ್ಯದ ಬಾಟಲಿಗಳನ್ನು ಬೀದಿಗೆ ಎಸೆದು ವಿಕೃತಿ ಮೆರೆಯೋದು, ಬೀದಿ ದೀಪಗಳಿಗೆ ಕಲ್ಲು ಹೊಡೆಯೋದು ಹೆಚ್ಚಾಗುತ್ತಿದ್ದು, ಪೊಲೀಸರು ಕಾನೂನಿನ ಭಯ ತೋರದಿದ್ದರೆ ಇದು ಅತಿರೇಕಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ.

ಹೌದು, ಪುಂಡರ ಹಾವಳಿ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿದೆ. ಇವರಿಂದಾಗಿ ಸಭ್ಯರು ಮನೆಯಲ್ಲಿ ನೆಮ್ಮದಿಯ ಜೀವನ ಮಡಾಉವುದೇ ಕಷ್ಟಕರವಾಗಿ ಪರಿಣಮಿಸಿದೆ. ಮದ್ಯ ಸೇವನೆ ಮಾಡಿ, ನಿವಾಸಿಗಳಿಗೆ ಕಾಟ ಕೊಡುವ ವಿಕೃತಿಯತ್ತ ಪುಂಡರು ಮುಂದಾಗಿದ್ದು, ಇಂತಹ ಪುಂಡರಿಗೆ ಕೂಡಲೇ ಕಾನೂನು ಭಯವನ್ನು ಪೊಲೀಸರು ತೋರದಿದ್ದರೆ ಇದು ಅತಿರೇಕ ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು. ಇಂತಹ ಬಡಾವಣೆಯಲ್ಲಿಯೇ ಪುಂಡರು ವಿಕೃತಿ ಮೆರೆದಿದ್ದಾರೆ. ವಾಣಿಜ್ಯ ಕಟ್ಟಡವೊಂದರ ಮೇಲೆ ಕುಳಿದು ಮದ್ಯ ಸೇವನೆ ಮಾಡುತ್ತಿರುವ ಪುಂಡರು ಅಲ್ಲಿಂದ ಕೆಳಗೆ ಹಾದುಹೋಗಿರುವ ರಸ್ತೆಗೆ ಮದ್ಯದ ಬಾಟಲಿಗಳನ್ನು ಎಸೆದು ವಿಕೃತಿ ಮೆರೆದಿದ್ದಾರೆ. ಕಳೆದ ಐದು ದಿನಗಳಿಂದಲೂ ಈ ಘಟನೆ ಪುನರಾವರ್ತನೆಯಾಗುತ್ತಿದ್ದು, ಈ ಪ್ರದೇಶದ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಎಂಜಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನ ಎದುರು ಭಾಗದಲ್ಲಿರುವ ಪ್ರಶಾಂತ ನಗರದಲ್ಲಿ ಈ ಘಟನೆ ನಡೆಯುತ್ತಿದ್ದು, ಎಂಜಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಾರಣ ಬೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬಗಳಿಗೆ ಹಾಕಿದ್ದ ವಿದ್ಯುತ್ ದೀಪಗಳನ್ನು ತೆರುವು ಮಾಡಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಕತ್ತಲು ಆವರಿಸಿದ್ದು, ಪುಂಡರಿಗೆ ಹೆಚ್ಚು ಅನುಕೂಲವಾಗಿ ಪರಿಣಮಿಸಿದೆ. ಪ್ರತಿನಿತ್ಯ ವಾಣಿಜ್ಯ ಕಟ್ಟಡಕ್ಕೆ ಬರುವ ಪುಂಡರು ಸ್ಥಳದಲ್ಲಿಯೇ ಇರುವ ನಗರಸಭೆ ಬೀದಿಪದ ಸಂಪರ್ಕ ಕಡಿತ ಮಾಡಿ, ಕುಡಿಯುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಐದು ದಿನಗಳಿಂದಲೂ ಸತತವಾಗಿ ವಿದ್ಯುತ್ ದೀಪದ ಸಂಪರ್ಕ ಕಡಿತವಾಗುತ್ತಿರುವುದನ್ನು ಕಂಡ ನಗರಸಭೆ ಉಪಾಧ್ಯಕ್ಷ ನಾಗರಾಜ್ ಅವರು ಪ್ರತಿನಿತ್ಯ ಮರು ಸಂಪರ್ಕ ಕೊಡಿಸುತ್ತಿದ್ದು, ಇದನ್ನು ಕಂಡು ಕುಪಿತಗೊಂಡ ಪುಂಡರು ಬುಧವಾರ ರಾತ್ರಿಕಲ್ಲಿನಿಂದ ಬೀದಿ ದೀಪವನ್ನೇ ಒಡೆದು ಹಾಕಿದ್ದಾರೆ. ಅಲ್ಲದೆ ಕಳೆದ ಸೋಮವಾರ ರಾತ್ರಿ ಅದೇ ಕಟ್ಟಡದಲ್ಲಿ ಕುಡಿದು, ಖಾಲಿ ಮದ್ಯದ ಬಾಟಲಿಗಳನ್ನು ರಸ್ತೆಗೆ ಎಸೆಯುತ್ತಿರುವ ಸಂದರ್ಭದಲ್ಲಿ ಪುಂಡರನ್ನು ಕಂಡ ಸ್ಥಳೀಯರು, ಅಕ್ಕಪಕ್ಕದವರನ್ನು ಎಬ್ಬಿಸಿದ್ದು, ಜನ ಸೇರುವಷ್ಟರಲ್ಲಿಯೇ ಪೋಕರಿಗಳು ಪರಾರಿಯಾಗಿದ್ದಾರೆ.

ಬಾಟಲಿಗಳನ್ನು ರಸ್ತೆಗೆ ಎಸೆದು ಭೀತಿ ಮೂಡಿಸುತ್ತಿರುವ ಕಾರಣ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಇಂದು ವಾರ್ಡಿನ ಸದಸ್ಯ ಹಾಗೂ ನಗರಸಭೆ ಉಪಾಧ್ಯಕ್ಷ ನಾಗರಾಜ್ ಅವರಿಗೆ ಸ್ಥಳೀಯರು ಮಾಹಿತಿ ಮುಟ್ಟಿಸಿದ್ದಾರೆ. ಇದರಿಂದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಾಗರಾಜ್, ಕೂಡಲೇ ಪೂಲೀಸರ ಗಮನಕ್ಕೆ ತಂಇದ್ದು, ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬ0ಧ ಪೊಲೀಸರಿಗೆ ದೂರು ನೀಡುವುದಾಗಿ ಉಪಾಧ್ಯಕ್ಷರು ಹೇಳಿದ್ದು, ಇಂತಹ ಪುಂಡ ಪೋಕರಿಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇವರ ಅಟ್ಟಹಾಸ ಅತಿರೇಕಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಇನ್ನು ನಗರದ ಎಪಿಎಂಸಿ ಮಾರುಕಟ್ಟೆ ಆವರಣ ಸೇರಿದಂತೆ ನಗರದ ಸುತ್ತಮುತ್ತಲ ಖಾಲಿ ನಿವೇಶನಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪುಂಡರು ಮದ್ಯ ಸೇವನೆ ಅಡ್ಡೆಗಳನ್ನಾಗಿ ಮಾಡಿಕೊಡಂಇದ್ದು, ಎಲ್ಲೆಂದರಲ್ಲಿ ಮದ್ಯ ಸೇವಿಸಿ, ಇಷ್ಟ ಬಂದ0ತೆ ವರ್ತಿಸುವುದು ಸಾಮಾನ್ಯವಾಗುತ್ತಿದ್ದು, ಇಂತಹ ಪುಂಡ ಪೋಕರಿಗಳಿಗೆ ಪೊಲೀಸರು ತಡೆ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇವರೆ ದೊಡ್ಡ ಮಟ್ಟದ ಅಪರಾಧ ಎಸಗುವುದಕ್ಕೂ ಹೇಸದ ಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸುವ ಜೊತೆಗೆ ಖಾಲಿ ನಿವೇಶನಗಳು, ಹೊಸ ಬಡಾವಣೆಗಳಲ್ಲಿ ಮದ್ಯ ಸೇವನೆ ಮಾಡುವವರಿಗೂ ಪೊಲೀಸರು ಕಡಿವಾಣ ಹಾಕಲು ಮುಂದಾಗಬೇಕಿದೆ. ಪೊಲೀಸರು ಪುಂಡ ಪೋರಿಗಳಿಗೆ ಕಾನೂನಿನ ಭಯ ತೋರಿಸುವ ಮೂಲಕ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪುಂಡಾಟಗಳಿಗೆ ಕಡಿವಾಣ ಹಾಕಲು ನಗರ ಠಾಣೆ ಪೊಲೀಸರು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *