ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ಆರ್ಥಿಕ ನೆರವು ಹೆಚ್ಚಿಸಿ

1 min read

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ಆರ್ಥಿಕ ನೆರವು ಹೆಚ್ಚಿಸಿ

ಸಹಕಾರಿ ಬ್ಯಾಂಕ್‌ಗಳಿಗೆ ಅಧಿಕ ನೆರವು ನೀಡಲು ನಬಾರ್ಡ್ಗೆ ಸಂಸದರ ಮನವಿ

ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಮಂಜೂರು ಮಾಡಲು ಮನವಿ

ನಬಾರ್ಡ್ ಅಧ್ಯಕ್ಷರನ್ನು ಭೇಟಿ ಮಾಡಿರುವ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ಕರ್ನಾಟಕಕ್ಕೆ ಈ ಸಾಲಿನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ಮೊತ್ತವನ್ನು ಕನಿಷ್ಠ ೩,೫೦೦ ಕೋಟಿ ರೂಗೆ ಏರಿಸಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಸಹಕಾರಿ ಬ್ಯಾಂಕ್‌ಗಳಿಗೆ ಹೆಚ್ಚು ಆರ್ಥಿಕ ನೆರವು ನೀಡಬೇಕೆಂದು ಕೋರಿದ್ದಾರೆ.

ಸಂಸದ ಡಾ.ಕೆ. ಸುಧಾಕರ್ ಅವರು ನಬಾರ್ಡ್ ಅಧ್ಯಕ್ಷ ಕೆ.ವಿ.ಶಾಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ವೇಳೆ ಕೆಲವು ಮನವಿ ಮಾಡಿದ್ದಾರೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಮಹಿಳಾ ಸ್ವ-ಸಹಾಯ ಸಂಘಗಳ ಸಬಲೀಕರಣಕ್ಕೆ ನೆರವಾಗುತ್ತವೆ. ಹಾಗೆಯೇ ಕೃಷಿ ಸಂಬ0ಧಿತ ಚಟುವಟಿಕೆಗಳಿಗೆ ಅಪಾರ ಸಹಾಯ ಮಾಡುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಹಕಾರಿ ಬ್ಯಾಂಕ್‌ಗಳಿಗೆ ನೀಡುವ ನೆರವು ಶೇ.೫೮ ಕಡಿಮೆಯಾಗಿದ್ದು, ಇದನ್ನು ಮತ್ತೆ ಹೆಚ್ಚಿಸಬೇಕೆಂದು ಅವರು ಕೋರಿದ್ದಾರೆ.

ಕೋಲಾರದಿಂದ ಚಿಕ್ಕಬಳ್ಳಾಪುರ ಪ್ರತ್ಯೇಕವಾಗಿ 18 ವರ್ಷ ಕಳೆದಿದ್ದರೂ, ಜಿ¯್ಲೆಯಲ್ಲಿ ಪ್ರತ್ಯೇಕ ಸಹಕಾರಿ ಬ್ಯಾಂಕ್ ಇಲ್ಲ. ಇದರಿಂದಾಗಿ ಜನರ ಹಾಗೂ ರೈತರ ಅವಶ್ಯಕತೆ ಪೂರೈಸುವುದು ಕಷ್ಟವಾಗಿದೆ. ಇದಕ್ಕಾಗಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಮಂಜೂರು ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ರಾಜ್ಯ ನಬಾರ್ಡ್ನ ವಿವಿಧ ಯೋಜನೆಗಳಡಿ ಉತ್ತಮ ಆರ್ಥಿಕ ನೆರವು ಪಡೆದುಕೊಂಡಿದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ, ನಬಾರ್ಡ್ ಮೂಲಸೌಕರ್ಯ ಅಭಿವೃದ್ಧಿ ನೆರವು, ಸೂಕ್ಷ ನೀರಾವರಿ ನಿಧಿ ಯೋಜನೆಗಳಡಿ ರಾಜ್ಯ ಹೆಚ್ಚು ನೆರವು ಪಡೆದಿದೆ. ರಾಜ್ಯಕ್ಕೆ ಕಳೆದ ವರ್ಷ 1,367.76 ಕೋಟಿ ರೂ. ನೆರವು ಸಿಕ್ಕಿದ್ದರೆ, ಈ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 1,727.50 ಕೋಟಿ ರೂ. ನೆರವು ದೊರೆತಿದೆ. 2023-24ರಲ್ಲಿ ಆರ್ಥಿಕ ನೆರವು ಮಿತಿ 2 ಸಾವಿರ ಕೋಟಿ ರೂ. ಆಗಿತ್ತು. ಯೋಜನೆಯಡಿ, 2022-23 ರಲ್ಲಿ 97.39 ಕೋಟಿ ರೂ. ನೆರವು ಸಿಕ್ಕಿದ್ದರೆ, 2023 ರಲ್ಲಿ 1,362.27ಕೋಟಿ ರೂ. ನೆರವು ದೊರೆತಿದೆ. ಅಂದರೆ ಹಿಂದಿನ ನೆರವಿಗಿಂತ 14 ಪಟ್ಟು ಅಧಿಕ ನೆರವು ದೊರೆತಿದೆ. ಸೂಕ್ಷ ನೀರಾವರಿ ನಿಧಿಯಡಿ ಕರ್ನಾಟಕಕ್ಕೆ 2023-24 ನೇ ಸಾಲಿನಲ್ಲಿ 290.33 ಕೋಟಿ ರೂ. ನೆರವು ದೊರೆತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

2024-25ನೇ ಸಾಲಿನ ರಾಜ್ಯದ ಆರ್ಥಿಕ ನೆರವಿನ ಮಿತಿಯನ್ನು 1,650 ಕೋಟಿ ರೂ.ಗೆ ನಿಗದಿಪಡಿಸಿದ್ದು, ಇದು ರಾಜ್ಯದ ಅವಶ್ಯಕತೆಗಿಂತ ಕಡಿಮೆಯಾಗಿದೆ. 3,346.97 ಕೋಟಿ ರೂ. ಮೊತ್ತದ ಸಾಲ ಸೇರಿದಂತೆ ಒಟ್ಟು 415ಯೋಜನೆಗಳ 4,231.60 ಕೋಟಿ ರೂ. ಆರ್ಥಿಕ ನೆರವಿಗಾಗಿ ಕರ್ನಾಟಕ ನಬಾರ್ಡ್ ಪ್ರಾದೇಶಿಕ ಕಚೇರಿಗೆ ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಹಿಂದಿನ ವರ್ಷಗಳಂತೆಯೇ, ಆರ್ಥಿಕ ನೆರವಿನ ಮೊತ್ತವನ್ನು ೩,೫೦೦ ಕೋಟಿ ರೂ. ಗೆ ಏರಿಸಬೇಕು. ಇದರಿಂದಾಗಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಬಲ ದೊರೆಯಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಕೋರಿದ್ದಾರೆ.

About The Author

Leave a Reply

Your email address will not be published. Required fields are marked *