ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ನಗರಸಭೆ ಉಪಾಧ್ಯಕ್ಷರ ನೂತನ ಕಚೇರಿ ಉದ್ಘಾಟನೆ

1 min read

ನಗರಸಭೆ ಉಪಾಧ್ಯಕ್ಷರ ನೂತನ ಕಚೇರಿ ಉದ್ಘಾಟನೆ

ನಗರಸಭೆಯ ಜೂಬಿಲಿ ಹಾಲ್‌ನಲ್ಲಿ ನೂತನ ಕಚೇರಿ

ಅಧ್ಯಕ್ಷರು, ಪೌರಾಯುಕ್ತರ ಸಮ್ಮುಖದಲ್ಲಿ ಕಚೇರಿ ಉದ್ಘಾಟನೆ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ಎರಡು ತಿಂಗಳು ಕಳೆಯುತ್ತಿದ್ದು, ಇಂದು ನಗರಸಭೆಯ ಜೂಬಿಲಿ ಹಾಲ್‌ನಲ್ಲಿ ನಗರಸಭೆ ಉಪಾಧ್ಯಕ್ಷರ ನೂತನ ಕಚೇರಿ ಉದ್ಘಾಟನೆ ನೆರವೇರಿಸಲಾಯಿತು. ನೂತನ ಕಚೇರಿ ಉದ್ಘಾಟನೆಗೆ ನಗರಸಭೆ ಅಧ್ಯಕ್ಷ ಗಜೇಂದ್ರ, ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ನಗರಸಭಾ ಸದಸ್ಯರು ಸಾಕ್ಷಿಯಾದರು.

ನಗರ ಅಥವಾ ಗ್ರಾಮೀಣ ಸ್ಥಳೀಯ ಸಂಸ್ಥೆಗಳೆ0ದರೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಇರುವ ಸರ್ಕಾರ. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ಉದ್ಧೇಶದಿಂದಲೇ ಉದಯವಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾದವರು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಯಾದವರು ಜನರ ಕೈಗೆ ಸಿಗುವುದೇ ಕಷ್ಟವಾಗಿ ಪರಿಣಿಸಿದೆ. ಆದರೆ ಇದಕ್ಕೆ ಭಿನ್ನವಾಗಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಜನರಿಗೆ ಹತ್ತಿರವಾಗುವ ಕೆಲಸಕ್ಕೆ ಮುಂದಾಗಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಈವರೆಗೂ ಅಧ್ಯಕ್ಷರಿಗಾಗಿಯೇ ಪ್ರತ್ಯೇಕ ಕೊಠಡಿ ಇತ್ತು. ಅಧ್ಯಕ್ಷರ ಪಕ್ಕದಲ್ಲಿಯೂ ಉಪಾಧ್ಯಕ್ಷರಿಗದೂ ಆಸನ ವ್ಯವಸ್ಥೆ ಮಾಡಿ, ಉಭಯರೂ ಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಕಳೆದ 40 ವರ್ಷಗಳಿಂದಲೂ ಇದೇ ವ್ಯವಸ್ಥೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದ್ದು, ಈ ವ್ಯವಸ್ಥೆಯನ್ನು ಇದೀಗ ಬದಲಿಸುವಲ್ಲಿ ಉಪಾಧ್ಯಕ್ಷ ನಾಗರಾಜ್ ಯಶಸ್ವಿಯಾಗಿದ್ದಾರೆ.

ನಗರಸಭೆಯ ಜೂಬಿಲಿ ಹಾಲ್‌ನಲ್ಲಿ ಪ್ರತ್ಯೇಕವಾಗಿ ಉಪಾಧ್ಯಕ್ಷರ ಕೊಠಡಿಯನ್ನು ಮಾಡಲಾಗಿದ್ದು, ಇಂದು ಉಪಾಧ್ಯಕ್ಷರ ನೂತನ ಕೊಠಡಿ ಉದ್ಘಾಟನೆ ಮಾಡಲಾಯಿತು. ಈ ಕೊಠಡಿಯ ಮತ್ತೂ ಒಂದು ವಿಶೇಷವೆಂದರೆ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಉಪಾಧ್ಯಕ್ಷರ ಕೊಠಡಿಯಲ್ಲಿ ಹಾಕಲಾಗಿದೆ. ಮಾತ್ರವಲ್ಲ, ಭಗವಾನ್ ಬುದ್ಧ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್, ಅಕ್ಷರ ತಾಯಿ ಸಾವಿತ್ರಿ ಬಾಯಿ ಪುಲೆ, ಸರ್.ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ ಹೀಗೆ ಆದರ್ಶ ಪುರುಷರ ಭಾವಚಿತ್ರಗಳನ್ನು ಹಾಕಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಉಪಾಧ್ಯಕ್ಷ ನಾಗರಾಜ್, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಗುರಿಯೊಂದಿಗೆ ನಗರಸಭೆ ಅಧಿಕಾರ ಹಿಡಿದಿದ್ದು, ಸಂಸದ ಡಾ.ಕೆ. ಸುಧಾಕರ್ ಅವರ ಮಾರ್ಗದರ್ಶನದಂತೆ ನಗರ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಬದ್ಧರಾಗಿರುವುದಾಗಿ ಹೇಳಿದರು. ನಗರದಲ್ಲಿ ಕಳೆದ ಎರಡು ವರ್ಷದಿಂದ ಆಡಳಿತ ಮಂಡಳಿ ಇಲ್ಲದೆ ತೀವ್ರ ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರ ಹಿಡಿದ ದಿನದಿಂದಲೇ ಅಧ್ಯಕ್ಷರು ಮತ್ತು ತಾವು ಸದಾ ಕಾರ್ಯನಿರತರಾಗಿದ್ದು, ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಬರುವ ನಾಗರಿಕರಿಗೆ ಸಿಗಬೇಕೆಂಬ ಉದ್ಧೇಶದಿಂದ ನಗರಸಭೆಯಲ್ಲಿ ಕಚೇರಿ ಆರಂಭಿಸಲಾಗಿದೆ ಎಂದರು.

ತಾವು ನಗರಸಭೆ ಸದಸ್ಯರಾಗಿದ್ದ ವೇಳೆ ಸದಾ ತಮ್ಮ ವಾರ್ಡಿನಲ್ಲಿಯೇ ಇದ್ದು, ವಾರ್ಡಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರತಿನಿತ್ಯ ಶ್ರಮಿಸಲಾಗುತ್ತಿತ್ತು. ಆದರೆ ಇದೀಗ ಉಪಾಧ್ಯಕ್ಷರಾಗಿರುವ ಕಾರಣ 31 ವಾರ್ಡಿನ ನಾಗರಿಕರ ಸಮಸ್ಯೆ ಪರಿಹರಿಸುವ ಹೊಣೆ ತಮ್ಮ ಮೇಲಿದೆ. ಅಲ್ಲದೆ ಎಲ್ಲ ವಾರ್ಡುಗಳ ಪ್ರತಿ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಹಾಗಾಗಿಯೇ ನಾಗರಿಕರು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನಗರಸಭೆಯ ತಮ್ಮ ಕಚೇರಿಗೆ ಬಂದು ಹೇಳಬಹುದಾಗಿದೆ. ಸಮಸ್ಯೆಗಳನ್ನು ಕಾನೂನಾತಕ್ಮಕವಾಗಿ, ತಮ್ಮ ವ್ಯಾಪ್ತಿಯಲ್ಲಿ ಪರಿಹರಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದರು.

ಇನ್ನು ಪರಿಶಿಷ್ಟನಾಗಿ, ಸಾಮಾನ್ಯ ಗ್ಯಾಸ್ ಹಂಚುವ ವ್ಯಕ್ತಿಯಾಗಿದ್ದ ತಾವು ನಗರಸಭೆ ಸದಸ್ಯನಾಗಲು ಕಾರಣವಾಗಿದ್ದು, ಅಂಬೇರ್ಡ್ಕ ಅವರ ಸಂವಿಧಾನ. ಅಲ್ಲದೆ ಸಂವಿಧಾನ ಬದ್ಧವಾಗಿ ನನ್ನನ್ನು ಬೆಂಬಲಿಸಿ, ಸಹಕಾರ ನೀಡುವ ಜೊತೆಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡಿದವರು ಸಂಸದರಾದ ಡಾ.ಕೆ. ಸುಧಾಕರ್ ಅವರು. ಹಾಗಾಗಿಯೇ ತಮ್ಮ ನೂತನ ಉಪಾಧ್ಯಕ್ಷ್ಷರ ಕಚೇರಿಯಲ್ಲಿ ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇರ್ಡ್ಕ, ಅಕ್ಷರ ತಾಯಿ ಸಾವಿತ್ರಿ ಬಾಪುಲೆ, ಮಹಾತ್ಮ ಗಾಂಧಿ, ಬಾಬು ಜಗ ಜೀವನ ರಾಂ, ರ್ಸಎಂ ವಿಶ್ವೇಶ್ವರಯ್ಯರಂತಹ ಆದರ್ಶ ಪುರುಷರ ಚಿತ್ರಗಳನ್ನು ಅಳವಡಿಸಲಾಗಿದೆ.

ಅಲ್ಲದೆ ಸಂಸದರಾದ ಡಾ.ಕೆ. ಸುಧಾಕರ್ ಅವರ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುವ ಅವಕಾಶ ಲಭ್ಯವಾಗಿದ್ದು, ಅವರ ಸೂಚನೆಯಂತೆ ಆಡಳಿತ ನಡೆಸಲಾಗುತ್ತದೆ. ಈ ಹಿಂದೆ ನಗರದ ಜನತೆಯ ಅನುಕೂಲಕ್ಕಾಗಿ ಶಾಸಕರಾಗಿದ್ದ ವೇಳೆ ಡಾ.ಕೆ. ಸುಧಾಕರ್ ಅವರು, ಶುದ್ಧ ನೀರಿನ ಘಟಕ, ಸ್ಲಂ ಬೋರ್ಡಿನಿಂದ ಮನೆಗಳು, ರಸ್ತೆ, ಚರಂಡಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೆ ಅವರು ಸಚಿವರಾಗಿದ್ದ ಕಾಲದಲ್ಲಿ ತಂದಿರುವ ಅನುದಾನ ಇದೀಗ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಕ್ರಿಯಾ ಯೋಜನೆ ರೂಪಿಸುತ್ತಿದ್ದು, ನಗರದ ಸರ್ವತೋಮುಖ ಅಭಿವೃದ್ಧಿ ಅಧ್ಯಕ್ಷರು ಮತ್ತು ತಾವು ಸದಾ ಬದ್ಧರಾಗಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಗಜೇಂದ್ರ, ಪೌರಾಯುಕ್ತರಾದ ಮನ್ಸೂರ್ ಆಲಿ, ಸಂತೋಷ್, ಮಧು ಸೇರಿದಂತೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *