ಕಂದವಾರ ಶಾಲೆಯಲ್ಲಿ 15 ದಿನಗಳಲ್ಲಿ ಭಾವುಟ ತೆರುವಾಗಬೇಕು
1 min readಕಂದವಾರ ಶಾಲೆಯಲ್ಲಿ 15 ದಿನಗಳಲ್ಲಿ ಭಾವುಟ ತೆರುವಾಗಬೇಕು
ಇಲ್ಲವಾದರೆ ತೆರುವು ಮಾಡುವ ದಾರಿ ನಾವೇ ಹುಡುಕುತ್ತೇವೆ
ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಕಾಂಗ್ರೆಸ್ ನೇರ ಕಾರಣ
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್
ಮುಂದಿನ 15 ದಿನಗಳಲ್ಲಿ ಕಂದವಾರ ಸರ್ಕಾರಿ ಶಾಲೆಯಲ್ಲಿ ಹಾಕಿರುವ ಹಸಿರು ಭಾವುಟ ತೆರುವು ಮಾಡಬೇಕು, ಮಾಡದಿದ್ದರೆ ನಾವೇ ತೆರುವು ಮಾಡುವ ದಾರಿ ಹುಡುಕುತ್ತೇವೆ, ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಕಾಂಗ್ರೆಸ್‌ನವರೇ ನೇರ ಕಾರಣವಾಗಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಕಿಕೆ ನೀಡಿದರು.
ಸರ್‌ಎಂವಿ ಓದಿದ ಶಾಲೆ ವಕ್ಫ್ ಆಸ್ತಿ ಎಂದು ನಮೂದಿಸಿರುವ ಕ್ರಮ ವಿರೋಧಿಸಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಇಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಹೋರಾಟ ನಡೆಸಲಾಯಿತು. ಪ್ರತಿಭಟನೆಯ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ೧೫ ದಿನಗಳಲ್ಲಿ ಶಾಲೆಯಲ್ಲಿ ಹಾರುತ್ತಿರುವ ಹಸಿರು ಭಾವುಟ ತೆರುವು ಮಾಡಬೇಕು, ಇಲ್ಲವಾದರೆ ತೆರುವು ಮಾಡುವ ದಾರಿ ನಾವೇ ಹುಡುಕುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಕಾಂಗ್ರೆಸ್‌ನವರೇ ನೇರ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನಡೀಇದರು.
ಗೃಹ ಸಚಿವರು ಹೇಳುತ್ತಿದ್ದಾರೆ ಬಿಜೆಪಿಯವರು ಕೋಮುಗಲುಬೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು, ಆದರೆ ನಾವಲ್ಲ ಮಾಡುತ್ತಿರೋದು, ನೀವು ಈ ಕಚಡಾ ಕೆಲಸ ಮಾಡುತ್ತಿದ್ದೀರಿ. ಕನ್ನ ಹಾಕೋ ಕಾಂಗ್ರೆಸ್ ಎಂದು ಹೆಸರು ಬದಲಿಸಬೇಕು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಾನೂನು ತರಲಾಗಿದೆ, ಮತಾಂದ ಮುಸ್ಲಿಂರು ಪ್ರತ್ಯೇಕ ರಾಷ್ಟç ಬೇಕು ಎಂದು ಸ್ವಾತಂತ್ರಾö್ಯ ನಂತರ ಪಾಕಿಸ್ತಾನ ಮಾಡಿಕೊಂಡು ಹೋದರು, ಈಗ ಮತ್ತೆ ರಾಜ್ಯದಲ್ಲಿ ಇರೋ ಎಲ್ಲ ಭೂಮಿ ನಮ್ಮದೇ ಎಂದು ಹೊರಟಿದ್ದಾರೆ, ವಕ್ಫ್ ಹೆಸರಿನಲ್ಲಿ ಜಮೀರ್ ದುಷ್ಟಕೂಟಕ್ಕೆ ಸಿದ್ದರಾಮಯ್ಯ ಆಶೀರ್ವಾದದಿಂದ ಇದೆಲ್ಲ ನಡೆಯುತ್ತಿದೆ ಎಂದು ಹೇಳಿದರು.
೧೫ ದಿನದಗಲ್ಲಿ ವಕ್ಫ್ ಹೆಸರಿನಲ್ಲಿ ಖಾತೆ ಮಾಡುವಂತೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ, ಬೆಳಗಾವಿ ಅಧಿವೇಶನದಲ್ಲಿ ಮೊದಲ ವಿಚಾರವಾಗಿ ಇದೇ ವಿಷಯ ಚರ್ಚೆ ಮಾಡಲಾಗುವುದು. ಇಡೀ ಸರ್ಕಾರವೇ ವಕ್ಫ್ ಪರ ನಿಂತಿದೆ. ಲ್ಯಾಂಡ್ ಜಿಹಾದ್ ವಿರುದ್ಧವಾಗಿ ಹೋರಾಟ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು. ಗೌಡರ ಕುಟುಂಬವನ್ನೇ ಖರೀದಿಸುವ ದುರಹಂಕಾರದ ಮಾತು ಆಡಿದರು. ಕರಿಯಾ ಎಂದು ಬಣ್ಣದ ವಿಚಾರದಲ್ಲಿಯೂ ನಿಂದಿಸಿದರು. ಅವರ ವಿರುದ್ಧ ಯಾವ ಕ್ರಮ ವಹಿಸಿದ್ದೀರಿ ನಾಚಿಕೆಯಾಗಲ್ಲವೇ ಎಂದು ಪ್ರಶ್ನಿಸಿದರು.
ಈ ಸರ್ಕಾರಕ್ಕೆ ದುರಹಂಕಾರದ ಪರಮಾವಧಿ ಬಂದಿದೆ. ಐದು ಗ್ಯಾರೆಂಟಿ ಕೊಡಲು ಯೋಗ್ಯತೆ ಇಲ್ಲ, ಕಾಕಾ ಪಾಟೀಲ, ಮಹದೇವಪ್ಪ ಎಳ್ಲಿ ಹೋದರು ಗೊತ್ತಿಲ್ಲ. ಗುಡಿಸಿಲಿನಲ್ಲಿರುವವರ ಪಡಿತರ ಚೀಟಿ ಕಸಿದುಕೊಂಡಿದ್ದಾರೆ. ಕೂಡಲೇ ಪಡಿತರ ಚೀಟಿ ರದ್ದು ಮಾಡುವುದನ್ನು ನಿಲ್ಲಿಸದಿದ್ದರೆ ಅದರ ವಿರುದ್ಧವೂ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ತಿಮಿಂಗಲದ ರೀತಿಯಲ್ಲಿ ವಕ್ಫ್ ರೈತರ, ದೇವಾಲಯಗಳ, ಶಾಲೆ ಜಮೀನು ನುಂಗುತ್ತಿದೆ. ಅದಕ್ಕೆ ತಿಮಿಂಗಲ ಬೋರ್ಡ್ ಎಂದು ಮರು ನಾಮಕರಣ ಮಾಡಬೇಕು ಎಂದು ಲೇವಡಿ ಮಾಡಿದರು.
ಮಾತೆತ್ತಿದರೆ ಸಂವಿಧಾನ ರಕ್ಷಕರು ಎನ್ನುವ ಕಾಂಗ್ರೆಸ್‌ಗರೇ ಇದು ಯಾವ ಸಂವಿಧಾನ, ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಹೇಳಿದ್ದಾರೆ, ಆದರೆ ಇವರಿಗೆ ಪ್ರತ್ಯೇಕ ಅಧಿಕಾರ ನೀಡಲಾಗಿದೆ, ಇತರೆ ಧರ್ಮೀಯರಿಗೆ ತೊಂದರೆಯಾದರೆ ಜಿಲ್ಲಾಧಿಕಾರಿಗಳ ಮೊರೆ ಹೋಗಬೇಕು, ಆದರೆ ಕಾಂಗ್ರೆಸ್‌ನವರು ಮುಸ್ಲಿಂರಿಗೆ ನ್ಯಾಯಾಂಗದ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್‌ನವರಿಗೆ ನಾಚಿಕೆ, ಮಾನ, ಮರ್ಯಾದೆ ಬೇಡವೇ, ಅವರು ಆಕಾಶದಿಂದ ಬದಂವರೇ, ಅವರ ಡಿಎನ್‌ಎ ಚೆಕ್ ಮಾಡಿದರೆ ಅವರು ಎಲ್ಲಿಂದ ಬಂದಿದ್ದಾರೆ ತಿಳಿಯಲಿದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದವಾರ ಶಾಲೆಯ ಮಕ್ಕಳು ಪಾಠ ಕೇಳುವಂತೆಯೇ ಇಲ್ಲ, ಇವರ ಪ್ರಾರ್ಥನೆ ಕೇಳಬೇಕು. ಹುತ್ತದ ಮೇಲೆ ಕಾಂಪೌ0ಡ್ ಹಾಕಿ ವಕ್ಫ್ ಆಸ್ತಿ ಎಂದು ಹಾಕಿದ್ದಾರೆ, ಯಾವನು ಸತ್ತ, ಶಾಲೆಯಲ್ಲಿ ಗೋರಿ ಹಾಕಲು ಅನುಮತಿ ಕೊಟ್ಟವರು ಯಾರು, ಪಹಣಿ ಬದಲಿಸಲು ಅನುಮತಿ ಕೊಟ್ಟವರು ಯಾರು ತನಿಖೆಯಾಗಲಿ, 15 ದಿನಗಳಲ್ಲಿ ಭಾವುಟ ತೆರುವು ಮಾಡದಿದ್ದರೆ ನಾವೇ ತೆರುವು ದಾರಿ ಹುಡುಕುತ್ತೇವೆ, ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಕಾಂಗ್ರೆಸ್ಸಿಗರೇ ನೇರ ಕಾರಣ ಎಂದು ಅಶೋಕ್ ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಂ.ಸಿ. ಸುಧಾಕರ್ ಅವರು ಅಂದು ಕೈಲಾಸಗಿರಿ ದೇವಾಲಯ ನಿರ್ಮಿಸಿ ಒಂದು ಧರ್ಮ ಮೆಚ್ಚಿಸಲು ಹೊರಟರು, ಇಂದು ಮತ್ತೊಂದು ಧರ್ಮ ಮೆಚ್ಚಿಸಲು ವಕ್ಫ್ ನಾಟಕ ಆಡುತ್ತಿದ್ದಾರೆ. ನಿಮ್ಮ ಸರ್ಕಾರ ಬಂದು, ನೀವು ಸಚಿವರಾದ ನಂತರ ಜಿಲ್ಲೆಗೆ ಏನು ಮಾಡಿದ್ದೀರಿ ಎಂದು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದರು.
ಬಹುಸಂಖ್ಯಾತರಗೆ ನೀಡಿರುವ ಯೋಜನೆಗಳೇನು, ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ಜಿಲ್ಲೆಗೆ ಏನು ಮಾಡಿದ್ದೀರಿ ಜನರಿಗೆ ಹೇಳಿ, ಜಾತ್ಯಾತೀತ ಎಂದು ಹೇಳಿಕೊಂಡು ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಲ್ಲಿ ಸಂಸದ ಡಾ.ಕೆ. ಸುಧಾಕರ್ ಉಪಸ್ಥಿತರಿದ್ದರು.