ಕೆರೆ ಅಂಗಳದಲ್ಲಿ ಅಕ್ರಮ ರಸ್ತೆ ನಿರ್ಮಾಣ ಪ್ರತಿಭಟನೆ
1 min readಕೆರೆ ಅಂಗಳದಲ್ಲಿ ಅಕ್ರಮ ರಸ್ತೆ ನಿರ್ಮಾಣ ಪ್ರತಿಭಟನೆ
ಕೆರೆ ಒತ್ತುವರಿ ತೆರುವುಗೊಳಿಸಲು ಆಗ್ರಹ
ಕೆರೆಯಂಗಳದಲ್ಲಿ ಕಸ ವಿಲೇವಾರಿ ಸಂಪೂರ್ಣವಾಗಿ ನಿಷೇಧಿಸಬೇಕು, ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರದೇ ಕೆರೆ ಅಂಗಳದಲ್ಲಿ ನಿರ್ಮಿಸುತ್ತಿರುವ ರಸ್ತೆಯನ್ನು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ತೆರವುಗೊಳಿಸಬೇಕು ಎಂದು ಪ್ರಬುದ್ಧ ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷ ಯು. ಮುನಿರಾಜು ಅಗ್ರಹಿಸಿದರು.
ಕೊಡಿಗೆಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಾಲನ ಜೋಗಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಿಸುತ್ತಿರುವ ರಸ್ತೆ ತೆರವುಗೊಳಿಸುವಂತೆ ಅಗ್ರಹಿಸಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಬುದ್ಧ ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷ ಯು. ಮುನಿರಾಜು , ಈ ಹಿಂದೆ ಕೆರೆಯ ಅಂಗಳದಲ್ಲಿ ಕಸ ವಿಲೇವಾರಿ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು, ಸದ್ಯ ನಮ್ಮ ಕೆರೆ ಕಸಮುಕ್ತವಾಗಬೇಕಿದೆ ಹಾಗಾಗಿ ಅಧಿಕಾರಿಗಳು ಕೆರೆಯ ಅಂಗಳದಲ್ಲಿ ಕಸ ವಿಲೇವಾರಿಯನ್ನು ಸಂಪೂರ್ಣ ನಿಷೇಧಿಸಲು ಕೆರೆಯ ಸುತ್ತ ಕಾಂಪೌ0ಡ್ ನಿರ್ಮಾಣಕ್ಕೆ ಮುಂದಾಗ ಬೇಕಿದೆ ಎಂದರು.
ಇದ್ದಕ್ಕಿದ್ದ0ತೆ ಕೆರೆಯ ಅಂಗಳದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಸರ್ಕಾರಿ ಜಾಗದ ಒತ್ತುವರಿಯಾಗುತ್ತಿದೆ ಎಂದು ಆರೋಪಿಸಿದ್ದರು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾಮಗಾರಿಯನ್ನು ತಡೆದು ರಸ್ತೆಯನ್ನು ತೆರವುಗೊಳಿಸುವ ಮೂಲಕ ಕೆರೆ ಉಳಿಸಬೇಕೆಂದು ಮನವಿ ಮಾಡಿದರು.