ಬೆಂಗಳೂರು ವಿಮಾನನಿಲ್ದಾಣದಲ್ಲಿ ‘ಅಕ್ರಮ ಚಿನ್ನ’ ಸಾಗಣೆ : 3.9ಕೋಟಿ ಮೌಲ್ಯದ ‘5 ಕೆಜಿ’ಗೂ ಅಧಿಕ ಚಿನ್ನ ವಶ
1 min readಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ಚಿನ್ನವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 3.9 ಕೋಟಿ ಮೌಲ್ಯದ 5 ಕೆಜಿ 135 ಗ್ರಾಮ್ ಚಿನ್ನವನ್ನು ಪಡಿಸಿಕೊಳ್ಳಲಾಗಿದ್ದು, ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆದಿದೆ.
ಕುವೈತ್, ದುಬೈ,ಅಬುದಾಬಿ, ಬ್ಯಾಂಕಾಕ್ ನಿಂದ 7 ಜನರು ಆಗಮಿಸಿದ್ದರು. ಈ ವೇಳೆ ಒಳಉಡುಪು, ಮಹಿಳೆಯರ ಪರ್ಸ್ ಹಾಗೂ ಹ್ಯಾಂಡ್ ಬ್ಯಾಗಿನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದು ಬೆಳಕಿಗೆ ಬಂದಿದೆ.
ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದು ಬೆಳಕಿಗೆ ಬಂದಿದೆ ಪ್ರಕರಣ ಕುರಿತಂತೆ 7 ಜನರನ್ನು ವಶಕ್ಕೆ ಪಡೆದ ವಿಚಾರ ನಡೆಸಲಾಗುತ್ತಿದ್ದು, ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.