ಖಾಸಗಿ ಬಡಾವಣೆಗೆ ಅಕ್ರಮವಾಗಿ ಕೆರೆ ಒತ್ತುವರಿ
1 min readಖಾಸಗಿ ಬಡಾವಣೆಗೆ ಅಕ್ರಮವಾಗಿ ಕೆರೆ ಒತ್ತುವರಿ
ಕೆರೆ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧ
ಸಾರ್ವಜನಿಕರಿಂದ ಪ್ರತಿಭಟನೆ, ಕ್ರಮಕ್ಕೆ ಆಗ್ರಹ
ಪಾಲನಜೋಗಿಹಳ್ಳಿ ಕೆರೆಯ ಅಂಗಳವನ್ನು ಮುಚ್ಚಿ ಸುಮಾರು 60 ಅಡಿ ಉದ್ದದ ರಸ್ತೆ ನಿರ್ಮಾಣ ಮಾಡಲು ಖಾಸಗಿ ಬಡಾವಣೆಯವರು ಮುಂದಾಗಿದ್ದಾರೆ, ಈ ಕುರಿತು ತಾಲೂಕು ಆಡಳಿತ ಕೊಡಲೇ ಸೂಕ್ತ ಕ್ರಮ ಕೈಗೊಂಡು ಕೆರೆ ಸಂಪತ್ತನ್ನು ಉಳಿಸಬೇಕೆಂದು ಹೋರಾಟಗಾರ ಪು.ಮಹೇಶ್ ಕೋರಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಲನಜೋಗಿಹಳ್ಳಿ ಕೆರೆಯ ಸರ್ವೆ ನಂ.21 ರಲ್ಲಿ 13.21 ಎಕರೆ ಜಮೀನಲ್ಲಿ 60 ಅಡಿ ವಿಸ್ತೀರ್ಣವನ್ನು ಖಾಸಗಿ ಬಡಾವಣೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುವುದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನೆಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ಪು.ಮಹೇಶ್, ಜಿಲ್ಲೆ ಅತಿ ವೇಗವಾಗಿ ಬೆಳೆಯುತ್ತಿದ್ದು, ಕೆಲ ಖಾಸಗಿಯವರು ಬಡಾವಣೆಗಳನ್ನು ಯಾವುದೇ ಸರಿಯಾದ ಅನುಮತಿಗಳಿಲ್ಲದೆ ಬಡಾವಣೆಗಳನ್ನು ಮಾಡಿ ಗ್ರಾಹಕರಿಗೆ ಟೋಪಿ ಹಾಕಿ ಮೋಸ ಮಾಡಿ ಯಶಸ್ವಿಯಾಗಿದ್ದಾರೆ ಎಂದರು.
ಬೆ0ಗಳೂರು ಅನಂತಪುರ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಪಾಲನಜೋಗಳ್ಳಿಯ ಸರ್ವೇ ನಂಬರ್ 21ರಲ್ಲಿ ಸುಮಾರು 13 ಎಕರೆಯಲ್ಲಿ ಕೆರೆ ಇದ್ದು, ಮುಖ್ಯ ರಸ್ತೆಯಿಂದ ಬಡಾವಣೆಗೆ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆರೆಯನ್ನು ಸಂಪೂರ್ಣವಾಗಿ ಮುಚ್ಚುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಂದಾಯ ಅಧಿಕಾರಿಗಳು ಈ ಕುರಿತು ತನಿಖೆ ನೆಡೆಸಿ ಸ್ಥಳ ಪರಿಶೀಲನೆ ಮಾಡುವ ಮೂಲಕ ಕೆರೆಯ ಸಂರಕ್ಷಣೆ ಮಾಡಬೇಕಿದೆ ಎಂದರು.