ವಯನಾಡಿನ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದೆ: ಕೇರಳ ಆರೋಗ್ಯ ಸಚಿವೆ
1 min read
ವಯನಾಡಿನಲ್ಲಿ ಬಾವಲಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬತ್ತೇರಿ ಮತ್ತು ಮಾನಂತವಾಡಿಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ವಯನಾಡಿನಲ್ಲಿ ಬಾವಲಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ನಿಪಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬತ್ತೇರಿ ಮತ್ತು ಮಾನಂತವಾಡಿಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆತಂಕಪಡುವ ಅಗತ್ಯವಿಲ್ಲ. ಆದರೆ, ಆದರೆ ಜಾಗೃತಿ ಮೂಡಿಸಲು ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
‘ನಾವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ವಯನಾಡಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ನಿರ್ಧರಿಸಿದ್ದೇವೆ. ನಿರಂತರ ಮೇಲ್ವಿಚಾರಣೆಯಿಂದಾಗಿ ನಾವು ನಿಪಾ ವೈರಸ್ ಇರುವಿಕೆಯನ್ನು ಗುರುತಿಸಲು ಸಾಧ್ಯವಾಗಿದೆ. ಎಲ್ಲಿಂದ ಬೇಕಾದರೂ ಪ್ರಕರಣಗಳು ವರದಿಯಾಗಬಹುದು’ ಎಂದು ವೀಣಾ ಹೇಳಿದರು.
ಇತರ ಜಿಲ್ಲೆಗಳಲ್ಲಿಯೂ ನಿಪಾ ವೈರಸ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದೇ ರೀತಿಯ ಅಧ್ಯಯನಗಳು ನಡೆಯುತ್ತಿವೆ. ಐಸಿಎಂಆರ್ ರಾಜ್ಯದ ವಿವಿಧ ಭಾಗಗಳಿಂದ ಮಾದರಿ ಸಂಗ್ರಹಿಸಿ ಸಂಶೋಧನೆಗಳನ್ನು ಮಾಡಿದೆ ಎಂದು ಹೇಳಿದರು. ಪಕ್ಷಿ ತಿಂದಿರುವ ಹಣ್ಣುಗಳನ್ನು ತಿನ್ನದಂತೆ ಮತ್ತು ಯಾವುದೇ ರೋಗಲಕ್ಷಣಗಳನ್ನು ನಿರ್ಲಕ್ಷ್ಯಿಸದಂತೆ ಆರೋಗ್ಯ ಸಚಿವರು ಜನರಿಗೆ ಒತ್ತಾಯಿಸಿದ್ದಾರೆ.