ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಪಾಕ್ ವಿರುದ್ಧ 401 ರನ್, ಹಲವು ದಾಖಲೆ ಬರೆದ ನ್ಯೂಜಿಲೆಂಡ್, ಏಕದಿನದಲ್ಲಿ 2ನೇ ಗರಿಷ್ಠ ಮೊತ್ತ
1 min readವಿಶ್ವಕಪ್ ನಲ್ಲಿ 400ರನ್ ಕ್ಲಬ್ ಸೇರಿದ ನ್ಯೂಜಿಲೆಂಡ್ ಇನ್ನು ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 400ರನ್ ಗಳಿಸುವ ಮೂಲಕ ನ್ಯೂಜಿಲೆಂಡ್ ಕೂಡ ವಿಶ್ವಕಪ್ ಟೂರ್ನಿಯಲ್ಲಿ 400ರನ್ ಸಿಡಿಸಿದ ತಂಡಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ 3 ಬಾರಿ ಈ ಸಾಧನೆ ಮಾಡಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದು, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ನಂತರದ ಸ್ಥಾನದಲ್ಲಿವೆ. Most 400-plus team totals in World Cups 3 – South Africa 1 – India 1 – Australia 1 – New Zealand ಪಾಕ್ ವಿರುದ್ದ 2ನೇ ಗರಿಷ್ಠ ಮೊತ್ತ ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗಳಿಸಿದ 401ರನ್ ಗಳು ಪಾಕಿಸ್ತಾನ ವಿರುದ್ದ ದಾಖಲಾದ 2ನೇ ಗರಿಷ್ಠ ಸ್ಕೋರ್ ಆಗಿದೆ. 2016ರಲ್ಲಿ ಇಂಗ್ಲೆಂಡ್ ತಂಡ ನಾಟಿಂಗ್ ಹ್ಯಾಮ್ ನಲ್ಲಿ 3 ವಿಕೆಟ್ ನಷ್ಟಕ್ಕೆ 444 ರನ್ ಸಿಡಿಸಿತ್ತು.
ಇದು ಪಾಕ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ಗರಿಷ್ಟ ಮೊತ್ತವಾಗಿದೆ. Highest team totals vs Pakistan in ODIs 444/3 – England, Nottingham, 2016 401/6 – New Zealand, Bengaluru, today* 392/6 – South Africa, Centurion , 2007 373/3 – England, Southampton, 2019 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಗರಿಷ್ಠ ಮೊತ್ತ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 401ರನ್ ಗಳನ್ನು ಸಿಡಿಸುವ ಮೂಲಕ ವಿಶ್ವಕಪ್ ಪಂದ್ಯವೊಂದರಲ್ಲಿ ಪಾಕಿಸ್ತಾನ ತಂಡದ ವಿರುದ್ದ ಗರಿಷ್ಠ ರನ್ ಪೇರಿಸಿದ ಮೊದಲ ತಂಡವಾಗಿದೆ. ಈ ಹಿಂದೆ ಇದೇ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಇದೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ 367 ರನ್ ಗಳಿಸಿತ್ತು. ಇದು ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ದಾಖಲಾದ ತಂಡವೊಂದರ ಗರಿಷ್ಠ ಸ್ಕೋರ್ ಆಗಿತ್ತು. Highest totals against Pakistan in World Cup 401/6 by New Zealand, Bengaluru, today* 367/9 by Australia, Bengaluru, 2023 344/9 by Sri Lanka, Hyderabad, 2023 336/5 by India, Manchester, 2019 ನ್ಯೂಜಿಲೆಂಡ್ 2ನೇ ಗರಿಷ್ಠ ಸ್ಕೋರ್ ಅಂತೆಯೇ ನ್ಯೂಜಿಲೆಂಡ್ ತಂಡ ಇಂದು ಪಾಕಿಸ್ತಾನ ವಿರುದ್ಧ ಗಳಿಸಿದ 401 ರನ್ ಗಳ ಸ್ಕೋರ್ ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ 2ನೇ ಗರಿಷ್ಠ ಟೀಂ ಟೋಟಲ್ ಆಗಿದೆ. ಈ ಹಿಂದೆ 2008ರಲ್ಲಿ ಐರ್ಲೆಂಡ್ ವಿರುದ್ಧ ಕಿವೀಸ್ ಪಡೆ 402ರನ್ ಸಿಡಿಸಿತ್ತು. Highest team totals for New Zealand in ODIs 402/2 vs Ireland, Aberdeen, 2008 401/6 vs Pakistan, Bengaluru, today* 398/5 vs England, The Oval, 2015 397/5 vs Zimbabwe, Bulawayo, 2005 393/6 vs West Indies, Wellington, 2015 (WC)