ರಾಮನಗರ ಜಿಲ್ಲೆ ತೆಗೆಯಲು ಬಂದಾಗ ಮಾತಾಡ್ತೇನೆ: ಡಿಸಿಎಂ ಡಿಕೆಶಿಗೆ ರೇವಣ್ಣ ಸವಾಲು
1 min readರಾಮನಗರ ವಿಭಜನೆ ವಿಚಾರಕ್ಕೆ ಸಂಬಂಧಿಸಿ ಉಫಮುಖ್ಯಮಂತ್ರಿ ಡಿಕೆ ಶಿಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜಟಾಪಟಿಯ ನಡುವೆಯೇ ಇದೀಗ ಎಚ್ ಡಿ ರೇವಣ್ಣ ಅವರು ಎಂಟ್ರಿ ಆಗಿದ್ದಾರೆ. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರು ಏನೇನು ಮಾಡಿದ್ದಾರೆ ಎಂಬುದನ್ನು ತಿಳಿಯಲು ದಾಖಲೆ ತೆಗೆದುನೋಡಿದ್ರೆ ಗೊತ್ತಾಗುತ್ತದೆ ಎಂದು ಗುಡುಗಿದ್ದಾರೆ. ಈ ವಿಚಾರದ ಬಗ್ಗೆ ಈಗ ಮಾತಾಡೊಲ್ಲ, ರಾಮನಗರ ಜಿಲ್ಲೆಯನ್ನು ತಗೆಯಲು ಬಂದಾಗ ಮಾತನಾಡುವೆ ಎಂದು ಸವಾಲು ಹಾಕಿದ್ದಾರೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆ ವಿಚಾರಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಗರಂ ಆಗಿದ್ದಾರೆ. ಈ ವಿಚಾರದ ಬಗ್ಗೆ ರಾಮನಗರ ಜಿಲ್ಲೆ ತೆಗೆಯಲು ಬಂದಾಗ ಮಾತಾಡ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ಹಂಗರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಗೊತ್ತಿಲ್ಲಪ್ಪ, ಯಾವುದನ್ನು ಸೇರಿಸ್ತಾರೆ ಎಂದು ಯಾರಿಗೆ ಗೊತ್ತಿದೆ? ರಾಮನಗರಕ್ಕೆ ಕುಮಾರಸ್ವಾಮಿ ಅವರು ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ.