ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ನಮ್ಮವರ ಸ್ವಾರ್ಥಕ್ಕಾಗಿ ನನಗೆ ಸೋಲಾಯಿತು.: ಭಗವಂತ ಖೂಬಾ ಬೇಸರ

1 min read

ನಮ್ಮಲ್ಲಿಯ ಮುಖಂಡರ ಹಾಗೂ ಕೆಲ ನಾಯಕರ ಸ್ವಾರ್ಥಕ್ಕಾಗಿ ನಾನು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಇದು ಕಾರ್ಯಕರ್ತರಿಗೆ ಮಾಡಿದ ಘೋರ ಅನ್ಯಾಯ. ಅವರಿಗದು ಅರ್ಥವಾಗಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಕದ ಮನೆಯ ಕೂಸು ನಮ್ಮ ಮನೆಯ ತೊಟ್ಟಿಲಲ್ಲಿ ಹಾಕಿದರೆ ಅದು ನಮ್ಮದಾಗದು ಎಂಬುದನ್ನು ಅವರುಗಳು ನೆನಪಿಡಬೇಕು. 400 ಪಾರ್ ಹೇಗೂ ಆಗುತ್ತದೆ, ಇಲ್ಲಿ ಸೊತರೇನು ಎಂದು ಉಡಾಫೆ ಮಾತನಾಡಿದರು. 2014 ಮತ್ತು 2019 ರಲ್ಲಿ ನಮ್ಮಲ್ಲಿ ಒಬ್ಬಿಬ್ಬರು ಶಾಸಕರು ಮಾತ್ರ ಇದ್ದರು. ಆ ಸಮಯದಲ್ಲಿ ಕಾರ್ಯಕರ್ತರ ಜೊತೆ ನಿಂತಿದ್ದು ನಾನು, ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್‌ ನವರ ಬಣ್ಣ ಬಯಲು ಮಾಡಿರುವೆ, ನೇರವಾಗಿ ವಿರೋಧಿಸಿರುವೆ ಎಂದರು.

ಅಧಿಕಾರದ ಹತ್ತು ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು, ಕೇಂದ್ರದಲ್ಲಿ ಉತ್ತಮ ಗೌರವ ಇಟ್ಟಿಕೊಂಡಿದ್ದೇನೆ. ಹಾಗಾಗಿ ಪಕ್ಷದ ಕೆಲ ಮುಖಂಡರ ವಿರೋಧದ ಮಧ್ಯೆಯೂ ನನಗೆ ಮೂರನೇ ಬಾರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಕಾಂಗ್ರೆಸ್, ನಮ್ಮವರ ಷಡ್ಯಂತ್ರ ಮತ್ತು ಹಣದ ಹೊಳೆಯ ಮಧ್ಯೆಯೂ, ಕಾರ್ಯಕರ್ತರ ಶ್ರಮದ ಫಲವಾಗಿ 5.40 ಲಕ್ಷ ಮತಗಳು ಪಡೆದಿವೆ. ನಾನು ತಮ್ಮೆಲ್ಲರಿಗೂ ಸದಾಕಾಲ ಚಿರಋಣಿಯಾಗಿರುವೆ ಎಂದರು.

ಕಾರ್ಯಕರ್ತರು ಪಕ್ಷದ ಹಿಂಬಾಲಕರಾಗಬೇಕು, ವಿನಃ ನಾಯಕನ ಹಿಂಬಾಲಕನಾಗ ಬಾರದು. ಒಂದು ವೇಳೆ ಪಕ್ಷ ಮತ್ತು ನಾಯಕನ ಮಧ್ಯೆ ಆಯ್ಕೆಗಳು ಬಂದಾಗ, ಕಾರ್ಯಕರ್ತರು ಪಕ್ಷದ ಜೊತೆ ನಿಲ್ಲಬೇಕು. ಪಕ್ಷದ ನಿರ್ಣಯದ ಜೊತೆ ನಿಲ್ಲಬೇಕೆಂದು ಹೇಳಿದ ಖೂಬಾ, ಸೊತಿದ್ದೇನೆ ಎಂದು ಕುಗ್ಗಲ್ಲ, ಅಭಿವೃದ್ದಿ ಮಾಡುವುದು ನಿಲ್ಲಿಸೋಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ವಿನಂತಿಸಿದರು.

ಶಾಸಕ ಡಾ. ಸಿದ್ದು ಪಾಟೀಲ ಮಾತನಾಡಿ, ಕಾಂಗ್ರೆಸ್‌ ನವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ. ಆದರೆ ನಾವು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ 5.40 ಲಕ್ಷ ಮತ ಪಡೆದಿದ್ದೇವೆ. ನಾವು ನಾಲ್ಕು ಶಾಸಕರುಗಳು ಬೆಂಗಳೂರಿಗೆ ಹೋದಾಗ ಸೋಲಿಸಿ ಬಂದಿರೇನಪ್ಪ ಎಂದು ಕೇಳುತ್ತಿದ್ದಾರೆ, ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಇವತ್ತು ಖೂಬಾ ಗೆದ್ದು, ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿ ಆಗುತ್ತಿದ್ದರು. ನಮ್ಮ ಎಲ್ಲಾ ಕೆಲಸಗಳು ಆಗುತ್ತಿದ್ದವು ಎಂದರು.

ಮುಖಂಡ ಬಸವರಾಜ ಆರ್ಯ ಮಾತನಾಡಿದರು. ಬಿಜೆಪಿ ಉಪಾದ್ಯಕ್ಷೆ ಶೋಭಾ ತೆಲಂಗ್, ಮುಖಂಡರಾದ ಶಕುಂತಲಾ ಬೆಲ್ದಾಳೆ, ರಾಜಶೇಖರ ನಾಗಮೂರ್ತಿ, ಬಾಬು ವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ಅಶೋಕ ವಕಾರೆ, ರಾಜರೆಡ್ಡಿ ಶಾಬಾದ, ವೀರಣ್ಣಾ ಕಾರಬಾರಿ, ಸಂಗಮೇಶ ನಾಸಿಗಾರ, ಗಜೇಂದ್ರ ಕನಕಟಕರ್ ಮತ್ತಿತರರಿದ್ದರು.

About The Author

Leave a Reply

Your email address will not be published. Required fields are marked *