ರಾಜ್ಯ ರಾಜಕಾರಣದಲ್ಲಿ ‘ಹೈಡ್ರಾಮ’, ರಾಜೀನಾಮೆಗೆ ಮುಂದಾದ 5 ‘ಕಾಂಗ್ರೆಸ್’ ಶಾಸಕರು!
1 min readಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಶುರುವಾಗಿದ್ದು, ಕೋಲಾರ ಲೋಕಸಭೆಗೆ ಕೆ.ಹೆಚ್ ಮುನಿಯಪ್ಪ ಅವರ ಅಳಿಯನಿಗೆ ಟಿಕೇಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಕೋಲಾರದ ಮೂವರು ವಿಧಾನಸಭಾ ಶಾಸಕರು ಮತ್ತು ಇಬ್ಬರು ಎಂಎಲ್‌ಸಿಗಳು ರಾಜೀನಾಮೇ ನೀಡುವುದಕ್ಕೆ ಮುಂದಾಗಿರುವ ಘಟನೆ ನಡೆದಿದೆ.
ಶಾಸಕರಾದ ಕೊತ್ತನೂರು ಮಂಜುನಾಥ್, ಸಚಿವ ಎಂ.ಸಿ ಸುಧಾಕರ್, ನಂಜೇಗೌಡ ಮತ್ತು ಎಂಎಲ್‌ಸಿಗಳಾದ ಅನಿಲ್ ಕುಮಾರ್, ಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ
ಮಂಗಳೂರಿನಲ್ಲಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿಗೆ ಕೋಲಾರ ಶಾಸಕರು ಸಮಾಯವಕಾಶ ಕೇಳಿದ್ದು ಸಚಿವರು, ಶಾಸಕರು ಮಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದು, ಇಂದು ಸಂಜೆ ಮಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಸದ್ಯ ಈಗಾಗಲೇ ಎಂಎಲ್‌ಸಿ ಗಳು ಕೂಡ ಭಾಪತಿ ಹೊರಟ್ಟಿ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಬಲಗೈ ಸಮುದಾಯಕ್ಕೆ ಟಿಕೇಟ್ ನೀಡಬೇಕು ಅಂತ ಅಸಮಾಧಾನ ಶಾಸಕರು ಕೇಳುತ್ತಿದ್ದಾರೆ. ಆದರೆ ಹೈಕಮಾಂಢ್ ಈಗಾಗಲೇ ಮುನಿಯಪ್ಪವರ ಅಳಿಯನಿಗೆ ಟಿಕೇಟ್ ನೀಡಿದೆ ಎನ್ನಲಾಗಿದೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura