Human rights : ಆರೋಪಿ ಅಕ್ರಮ ಬಂಧನ – ಪೊಲೀಸ್ ಠಾಣೆಯ ಮೇಲೆ ಮಾನವ ಹಕ್ಕು ಆಯೋಗ ದಾಳಿ
1 min readಆರೋಪಿಯೊಬ್ಬನನ್ನು ಕಳೆದ ಹತ್ತು ದಿನಗಳಿಂದ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿರುವ (Illegal detention ) ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗವು (Human Rights Commission) ಇಂದು ಅಮೃತ ಹಳ್ಳಿ ಪೊಲೀಸ್ ಠಾಣೆಯ (Amrutahalli police station) ಮೇಲೆ ದಾಳಿ ನಡಸಿದೆ.
ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಬೆಳಗ್ಗೆ 6.00 ಗಂಟೆಗೆ ದಾಳಿ ನಡೆಸಲಾಗಿದೆ.
ಫೆ. 1 ರಿಂದ ಯಾಸಿನ್ ಮಹಬೂಬ್ ಖಾನ್ ಎಂಬ ಆರೋಪಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಳ್ಳಲಾಗಿತ್ತು. 2023 ಮಹಬೂಬ್ ಖಾನ್ ರಲ್ಲಿ ಕಳವು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಈತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಮಹಬೂಬ್ ಖಾನ್ ನನ್ನು ಮುಂಬೈನಿಂದ ಬಂಧಿಸಿ ಕರೆತರಲಾಗಿತ್ತು. ಆತನ ಬಂಧನದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿರಲಿಲ್ಲ. ಜೊತೆಗೆ ಠಾಣಾ ದಾಖಲಾತಿಯಲ್ಲಿ ಬಂಧನದ ಬಗ್ಗೆ ಉಲ್ಲೇಖಿಸಿರಲಿಲ್ಲ.
ಆರೋಪಿಯ ಮನೆಯವರು ನೀಡಿದ ದೂರಿನ ಆಧಾರದ ಮೇರೆಗೆ ಮಾನವ ಹಕ್ಕು ಆಯೋಗ ದಾಳಿ ನಡೆಸಿದೆ. ಇಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು. ಪೊಲೀಸ್ ಸಿಬ್ಬಂದಿಯ ವಿಚಾರಣೆ ಜಾರಿಯಲ್ಲಿದೆ
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura