ವಿನಯ್-ನಮ್ರತಾ ಅಣ್ಣ-ತಂಗಿಯಾಗಿ ಕನೆಕ್ಟ್ ಆಗಿದ್ದು ಹೇಗೆ
1 min readಬಿಗ್ಬಾಸ್ ಮನೆಯಲ್ಲಿ ಅಣ್ಣ ತಂಗಿ ಬಾಂಡಿಂಗ್ ಬರೋದು ತುಂಬಾ ಕಡಿಮೆ. ಆದರೆ ಈ ಸಲ ಬಿಗ್ಬಾಸ್ 10ರಲ್ಲಿ ನಮ್ರತಾ ಗೌಡ ಹಾಗೂ ವಿನಯ್ ಗೌಡ ಅವರು ಕ್ಲೋಸ್ ಆದರು. ಇವರಿಬ್ಬರು ಅಣ್ಣ-ತಂಗಿಯಾಗಿ ಕನೆಕ್ಟ್ ಆಗಿದ್ದು ಹೇಗೆ
ಈ ಒಂದು ಪ್ರಶ್ನೆಗೆ ವಿನಯ್ ಗೌಡ ಅವರು ಪ್ರತಿಕ್ರಿಯಿಸಿದ್ದಾರೆ.
ಇಬ್ಬರದ್ದೂ ಥಾಟ್ ಪ್ರಾಸೆಟ್ ಸೇಮ್ ಇತ್ತು. ಒಪಿನಿಯನ್ ಕೊಡುವಾಗ ನಾಮಿನೇಟ್ ಮಾಡುವಾಗ ನಾವು ಮಾತನಾಡಿಕೊಳ್ಳುತ್ತಿರಲಿಲ್ಲ. ಆದರೆ ಅದು ಯಾವಾಗಲೂ ಸೇಮ್ ಆಗಿರುತ್ತಿತ್ತು ಎಂದಿದ್ದಾರೆ.
ನಾವು ಯಾಕೆ ನಾಮಿನೇಟ್ ಮಾಡುತ್ತೇವೆ ಎನ್ನುವುದಕ್ಕೆ ನಮ್ಮ ಕಾರಣಗಳು ಒಂದೇ ಆಗಿರುತ್ತಿತ್ತು. ಅದು ಸೇಮ್ ಆಗಿರುತ್ತಿತ್ತು. ಒಪಿನಿಯನ್ ಹೇಳುವಾಗ ನಾನು ಹೋಗಬೇಕಾ ನೀನು ಹೋಗಬೇಕಾ ಎನ್ನುವಂತೆ ನೋಡುತ್ತಿದ್ದೆವು.
ನಮ್ಮಿಬ್ಬರ ಅಪ್ರೋಚ್ ಮಾತ್ರ ಬೇರೆ ಬೇರೆಯಾಗಿರುತ್ತಿತ್ತು. ಅಷ್ಟೆ. ಅವಳೂ ನನ್ನ ತರಾನೆ ಇದ್ದಳು. ನಮ್ಮ ಅಪ್ರೋಚ್ ಡಿಫರೆಂಟ್ ಎನ್ನುವುದಷ್ಟೇ ವ್ಯತ್ಯಾಸ. ಒಪಿನಿಯನ್ ಸೇಮ್ ಇರ್ತಿತ್ತು ಎಂದಿದ್ದಾರೆ ವಿನಯ್ ಗೌಡ.
ಟಾಸ್ಕ್ ಆಗಲಿ, ಸ್ಟ್ರಾಟೆಜಿ ಮಾಡೋದಾಗಲಿ ಎಲ್ಲವೂ ಸೇಮ್. ನಾನು ಬೇರೆ ಕಡೆ ಹೇಳಿದಂತೆ ನನಗೆ ಒಬ್ಬಳು ತಂಗಿ ಇದ್ದಿದ್ದರೆ ಹೀಗೆಯೇ ಇರುತ್ತಿದ್ದಳು ಎಂದಿದ್ದಾರೆ ವಿನಯ್ ಗೌಡ.
ನಟಿ ನಮ್ರತಾ ಗೌಡ ಅವರು ಕೂಡಾ ಮನೆಯಲ್ಲಿ ಆಯಕ್ಟಿವ್ ಆಗಿದ್ದರು. ಚೆನ್ನಾಗಿ ಗೇಮ್ ಕೂಡಾ ಆಡಿದ್ದರು. ಅವರ ವಿನಯ್ ಹಾಗೂ ಸ್ನೇಹಿತ್ಗೆ ಕ್ಲೋಸ್ ಆಗಿದ್ದರು.
ನಮ್ರತಾ ಗೌಡ ನಾಗಿಣಿ ಧಾರವಾಹಿಯ ಮೂಲಕ ಫೇಮಸ್ ಆದರು. ಅದಕ್ಕೂ ಮೊದಲು ಪುಟ್ಟಗೌರಿ ಮದುವೆ ಸೀರಿಯಲ್ನಲ್ಲಿ ಹಿಮನ ಪಾತ್ರದಲ್ಲಿ ಮಿಂಚಿದ್ದರು.