ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು
1 min readಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು
ಪ್ರೀತಿ ಮದುವೆಯಾಗಿದ್ದ ದಂಪತಿಗಳ ನಡುವೆ ಜಗಳ
ಪತಿಯೇ ಹತ್ಯೆ ಮಾಡಿರುವ ಆರೋಪ
ಅನುಮಾನಾಸ್ಪದವಾಗಿ ಗೃಹಿಣಿಯೊಬ್ಬರು ಮೃತಪಟ್ಟಿದ್ದು, ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲದಲ್ಲಿ ಘಟನೆ ನಡೆದಿದ್ದು, ತಾಯಿಯನ್ನು ಕಳೆದುಕೊಂಡು ಹಸುಗೂಸಿನ ಆಕ್ರಂಧನ ಕರಳು ಹಿಂಡುವoತಿದೆ.
ಅನುಮಾನಾಸ್ಪದವಾಗಿ ಗೃಹಿಣಿಯೊಬ್ಬರು ಮೃತಪಟ್ಟಿದ್ದು, ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲದಲ್ಲಿ ಘಟನೆ ನಡೆದಿದ್ದು, ತಾಯಿಯನ್ನು ಕಳೆದುಕೊಂಡು ಹಸುಗೂಸಿನ ಆಕ್ರಂಧನ ಕರಳು ಹಿಂಡುವoತಿದೆ. ಮೃತ ಮಹಿಳೆಯ ಪೋಷಕರಿಂದ ಗಂಡನಿ0ದಲೆ ಕೊಲೆ ಮಾಡಿದ ಆರೋಪ ವ್ಯಕ್ತವಾಗಿದ್ದು, ಬೆಂಗಳೂರು ಉತ್ತರ ತಾಲೂಕಿನ ಉತ್ತನಹಳ್ಳಿ ಬಳಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಮೃತ ಮಹಿಳೆಯಾಗಿದ್ದು, ಗಂಡ ಮಾರುತಿ ಅನುಮಾನದಿಂದ ಪತ್ನಿಯನ್ನ ಕೊಲೆ ಮಾಡಿರುವ ಆರೋಪ ವ್ಯಕ್ತವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇಬ್ಬರು, ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ನಂತರ ಎರಡೂ ಕುಟುಂಬಗಳು ಒಂದಾಗಿತ್ತು. ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿಗಳು ಚಿಕ್ಕಜಾಲದ ಉತ್ತನಹಳ್ಳಿ ಬಳಿ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪದೇ ಪದೇ ಪತ್ನಿ ಮೇಲೆ ಅನುಮಾನದಿಂದ ಹೊಡೆದು ಪತಿ ಕಿರುಕುಳ ನೀಡುತ್ತಿದ್ದ ಆರೋಪ ಇದ್ದು, ಕಳೆದ ಒಂದು ತಿಂಗಳ ಹಿಂದೆಯೂ ಗಲಾಟೆ ಮಾಡಿಕೊಂಡು ಮೃತ ಮಹಿಳೆ ದುರ್ಗಮ್ಮ ತವರೂರಿಗೆ ಹೋಗಿದ್ದರು ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಪತ್ನಿಯ ಮನವೊಲಿಸಿ ಗಂಡ ಮಾರುತಿ ಬೆಂಗಳೂರಿಗೆ ಕರೆತಂದಿದ್ದ. ಆದರೆ ಬಂದ 15 ದಿನದಲ್ಲೆ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು ಗಂಡನಿ0ದಲೆ ಕೊಲೆ ಆರೋಪ ಕೇಳಿಬಂದಿದೆ.
ಮೃತ ಮಹಿಳೆಗೆ 6 ತಿಂಗಳ ಹಸುಗೂಸು ಇದ್ದು, ಅಮ್ಮನನ್ನ ಕಳೆದುಕೊಂಡು 6 ತಿಂಗಳ ಮಗುವಿನ ಆಕ್ರಂಧನ ಮುಗಿಲು ಮುಟ್ಟಿತ್ತು. ಈ ಸಂಬ0ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.