ಹೊಸೂರು ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಸಿದ್ದತೆ
1 min read
ಹೊಸೂರು ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಸಿದ್ದತೆ
ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಜನಿಸಿದ ಗ್ರಾಮ
ಎಚ್‌ಎನ್, ಸರ್ಕಾರಿ ಶಾಲೆಗೆ ಶತಮಾನೋತ್ಸವ ಸಂಭ್ರಮ
ಗೌರಿಬಿದನೂರು ತಾಲೂಕಿನ ಹೊಸೂರು ರಾಜ್ಯದ ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯನವರ ಹುಟ್ಟೂರು. ಎಚ್‌ಎನ್ ಜನಿಸಿದ ವರ್ಷದಲ್ಲಿಯೇ ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭಿಸಲಾಗಿದ್ದು, ಸರ್ಕಾರಿ ಶಾಲೆ ಮತ್ತು ದಿವಂಗತ ಎಚ್‌ಎನ್ ಅವರು ಜನಿಸಿ ನೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವಕ್ಕೆ ಸಿದ್ಧತೆಗಳು ಧರದಿಂದ ಸಾಗಿವೆ.
ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ 1920 ರಲ್ಲಿ ಪ್ರಾರಂಭವಾಗಿದೆ.ಅದೇ ವರ್ಷ ಶಿಕ್ಷಣ ತಜ್ಙ ಹೆಚ್ ನರಸಿಂಹಯ್ಯ ನವರು ಹುಟ್ಟಿರುತ್ತಾರೆ. ಹಾಗಾಗಿ ಎರಡೂ ಶತಮಾನೋತ್ಸವಗಳನ್ನು ಆಚರಿಸಲು ಶಾಲೆಯ ಹಳೇ ವಿಧ್ಯಾಥಿಗಳ ಸಮಿತಿ ನಿರ್ಣಯಿಸಿದೆ. ಇದೇಶಾಲೆ ಯಲ್ಲಿ ಶಿಕ್ಷಣ ಪಡೆದ ಜಿಪಂ ಮಾಜಿ ಅಧ್ಯಕ್ಷರು ಹಾಗು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ. ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದು, ಶತಮಾನೋತ್ಸವ ಫೆಭ್ರವರಿ 2 ರಂದು ಪ್ರಾರಭವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣಾ ಸಚಿವ ಮಧುಬಂಗಾರಪ್ಪ, ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಸಂಸದ ಡಾ.ಕೆ. ಸುಧಾಕರ್, ಸಾಹಿತಿ ಹಂಪ ನಾಗರಾಜಯ್ಯ, ಡಾ. ಸುಬ್ರಹ್ಮಣ್ಯಂ ಭಾಗವಹಿಸಲಿದ್ದಾರೆ. ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿಲಿದ್ದಾರೆ. 2020 ರಲ್ಲಿ ಆಚರಿಸಬೇಕಿದ್ದ ಈ ಶತಮಾನೋತ್ಸವ ಕಾರಣಾಂತರಗಳಿ0ದ ಈಗ ಆಚರಿಸಲಾಗುತ್ತಿದೆ ಎಂದರು.
ಗೌರವಾಧ್ಯಕ್ಷ ಮಾನಸ ಅಸ್ಪತ್ರೆ ವೈದ್ಯ ಡಾ. ಶಶಿಧರ್ ಮಾತನಾಡಿ, ಈ ಶಾಲೆ ಮೂರು ತಲೆಮಾರಿನ ಶಾಲೆಯಾಗಿದ್ದು, ಹಳೆಯದಾಗಿದೆ. ಮೇಲ್ಚಾವಣಿ ಸೋರುವ ಸ್ಥಿತಿಗೆ ಬಂದಿದೆ. ಶೌಚಾಲಯಗಳ ಸ್ಥಿತಿ ಹೇಳತೀರಾದಾಗಿದೆ, ದಾನಿಗಳ ಸಹಾಯದಿಂದ ಶಾಲೆ ನಿರ್ಮಾಣ ಮಾಡಲಾಗವುದು ಎಂದರು. ಈ ವೇಳೆ ಸಮಿತಿ ಕಾರ್ಯದರ್ಶಿ ಹೆಚ್.ಎಲ್ ವೆಂಕಟೇಶ್, ನಯಾಜ್, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ, ರಾಮಕೃಷ್ಣಪ್ಪ, ಇರ್ಷಾದ್ ಇದ್ದರು.