ತುಮಕೂರಿನಲ್ಲಿ ಘೋರ ಘಟನೆ : ಘಟಿಕೋತ್ಸವಕ್ಕೆ ಬಂದಿದ್ದ ವಿದ್ಯಾರ್ಥಿಗೆ ಹಾವು ಕಡಿದು ಸಾವು
1 min read
ಹಾವು ಕಡಿದು ಘಟಿಕೋತ್ಸವಕ್ಕೆ ಬಂದಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸಿದ್ದಾರ್ಥ್ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವ ನಡೆದಿತ್ತು, ಇದರಲ್ಲಿ ಕೇರಳ ಮೂಲಕ ಆದಿತ್ ಬಾಲಕೃಷ್ಣ ಎಂಬಾತನಿಗೆ ಆವರಣದಲ್ಲಿ ಹಾವು ಕಡಿದಿದೆ.
ಇದು ವಿದ್ಯಾರ್ಥಿ ಅರಿವಿಗೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಆತ ಸೀದಾ ಮನೆಗೆ ಬಂದಿದ್ದಾನೆ.
ಮನೆಗೆ ಬಂದ ವೇಳೆ ಕುಸಿದು ಬಿದ್ದು ಆತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.