ಅನೈತಿಕ ಸಂಬoಧ ಹಿನ್ನೆಲೆ ಚಿಕ್ಕಬಳ್ಳಾಪುರಲ್ಲಿ ಭೀಕರ ಕೊಲೆ!
1 min readಅನೈತಿಕ ಸಂಬoಧ ಹಿನ್ನೆಲೆ ಚಿಕ್ಕಬಳ್ಳಾಪುರಲ್ಲಿ ಭೀಕರ ಕೊಲೆ
ಸ್ನೇಹಿತನ ಪತ್ನಿಯೊಂದಿಗಿನ ಅನೈತಿಕ ಸಂಭoದ ಕೊಲೆಯಲ್ಲಿ ಅಂತ್ಯ
ಪೊಲೀಸ್ ಠಾಣೆ ಬಳಿಯೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಭರ ಕೊಲೆ
ಐದಾರು ವರ್ಷಗಳಿಂದ ಅವರಿಬ್ಬರೂ ಕುಚುಕು ಗೆಳೆಯರು, ಜೊತೆಯಲ್ಲಿಯೇ ಹಣದ ಲೇವಾದೇವಿ ಮಾಡ್ತಿದ್ರು ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿಕೊಂಡು ಚೆನ್ನಾಗಿಯೇ ಇದ್ರು. ಹಣದ ವ್ಯವಹಾರ ಮಾಡುವ ನೆಪದಲ್ಲಿ ಗೆಳೆಯನ ಮನೆಗೆ ಹೋಗ್ತಿದ್ದವನು ತನ್ನ ಸ್ನೇಹಿತನ ಹೆಂಡತಿಯನ್ನೇ ಬೆಳಸಿಕೊಂಡಿದ್ದ. ಈ ಅಕ್ರಮ ಸಂಭoದ ಕೊಲೆಯಲ್ಲಿ ಅಂತ್ಯವಾಗಿದೆ ಈ ಕುರಿತ ವರದಿ ನೀವೇ ನೋಡಿ.
ಹೀಗೆ ರಾತ್ರೋ ರಾತ್ರಿ ಪೊಲೀಸ್ ಠಾಣೆ ಬಳಿಯೇ ಬರ್ಭರವಾಗಿ ಕೊಲೆಯಾಗಿ ಹೋಗಿರುವ ವ್ಯಕ್ತಿ, ವ್ಯಕ್ತಿಯ ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರುವ ಆರೋಪಿ, ಭೀಕರ ಕೊಲೆ ಕಂಡು ಬೆಚ್ಚಿಬಿದ್ದ ಜನ, ಈ ದೃಶ್ಯಗಳು ಕಂಡುಬoದಿದ್ದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಬಳಿ. ಇಷ್ಟಕ್ಕೂ ಹೀಗೆ ಕೊಲೆಯಾಗಿರುವ ವ್ಯಕ್ತಿಯ ಹೆಸರು ಎಲ್ ಎಂ ಎಲ್ ಶೇಖರ್. ಕೊರಚರಪೇಟೆ ನಿವಾಸಿ.
ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಪೊಲೀಸರ ಅತಿಥಿಯಾಗಿರುವ ವ್ಯಕ್ತಿಯ ಹೆಸರು ಶಿವಕುಮಾರ್. ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆ ನಿವಾಸಿ. ಸುಮಾರು ಐದು ವರ್ಷಗಳ ಹಿಂದೆ ಇಬ್ಬರು ಕುಚುಕು ಗೆಳೆಯರು ಒಟ್ಟಿಗೆ ಹಣದ ಲೇವಾದೇವಿ ಮಾಡ್ತಿದ್ರು. ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿಕೊಂಡು ಲೈಫ್ ಎಂಜಾಯ್ ಮಾಡ್ತಿದ್ರು. ಹಣದ ಲೇವಾದೇವಿ ನೆಪದಲ್ಲಿ ಶಿವಕುಮಾರ್ ಮನೆಗೆ ಹೋಗ್ತಿದ್ದ ಶೇಖರ ತನ್ನ ಸ್ನೇಹಿತ ಶಿವಕುಮಾರ್ ಹೆಂಡತಿಯೊoದಿಗೆ ಸಂಭoದ ಬೆಳೆಸಿಕೊಂಡಿದ್ದ,
ಇದೇ ವಿಚಾರವಾಗಿ ಶಿವಕುಮಾರ್ ಹಾಗೂ ಶೇಖರ್ ನಡುವೆ ಎರಡು ವರ್ಷಗಳ ಹಿಂದೆ ಗಲಾಟೆಯಾಗಿ ಶೇಖರ್ ಜೈಲಿಗೂ ಹೋಗಿದ್ದ. ಇಷ್ಟಕ್ಕೆ ಸೈಲೆಂಟಾಗದ ಶೇಖರ್ ಪುನಃ ಶಿವಕುಮಾರ್ ಹೆಂಡತಿ ಹಿಂದೆ ಬಿದ್ದಿದ್ದ. ಶೇಖರ್ ಕಾಟ ತಾಳಲಾರದ ಶಿವಕುಮಾರ್ ತನ್ನ ಮೊತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಶೇಖರ್ ಕೊಲೆಗೆ ಸಂಚು ರೂಪಿಸಿದ್ರು. ರಾತ್ರಿ ಎಣ್ಣೆ ಪಾರ್ಟಿ ಮಾಡಲು ಕರೆದು ನಗರ ಪೊಲೀಸ್ ಠಾಣೆ ಎದುರೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಕೊಲೆಯಾದ ಸ್ಥಳಕ್ಕೆ ಭೇಟಿ ಕೊಟ್ಟ ಚಿಕ್ಕಬಳ್ಳಾಪುರ ನಗರ ಪೊಲೀಸರು ಪರಿಶೀಲನೆ ನಡೆಸಿ, ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಶಿವಕುಮಾರ್ ಹಾಗೂ ಆತನ ಸ್ನೇಹಿತ ಸಮನ್ ಸಾಗರ್ ಅಲಿಯಾಸ್ ಗುಂಡ ಎಂಬುವನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ ,ಕೊಲೆಯಾದ ಶೇಖರನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಕೊಲೆ ಆರೋಪದಡಿ ದೂರು ದಾಖಲಸಿಕೊಂಡ ಚಿಕ್ಕಬಳ್ಳಾಪುರ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಸ್ನೇಹಿತನ ಪತ್ನಿಯೊಂದಿಗಿನ ಅನೈತಿಕ ಸಂಭoದ ಕೊಲೆಯಲ್ಲಿ ಅಂತ್ಯವಾಗಿದ್ದು, ಅನೈತಿಕ ಸಂಭoದಕ್ಕೆ ಸ್ನೇಹಿತ ದಾರುಣ ಕೊಲೆಯಾಗಿದ್ರೆ, ಇತ್ತ ಕುಚುಕು ಗೆಳೆಯನನ್ನನೇ ಕೊಲೆ ಮಾಡಿದ ಸ್ನೇಹಿತ ಜೈಲುಪಾಲಾಗಿದ್ದಾನೆ.