ರಾಷ್ಟಿಯ ಹೆದ್ದಾರಿಯಲ್ಲಿ ಭೀಕರ ಅಪಘಾತ
1 min readರಾಷ್ಟಿಯ ಹೆದ್ದಾರಿಯಲ್ಲಿ ಭೀಕರ ಅಪಘಾತ
ಅಪಘಾತದ ರಭಸಕ್ಕೆ ಹತ್ತು ಅಡಿ ಹಾರಿಬಿದ್ದ ಮಗು
ಅಪಘಾತದಲ್ಲಿ ಮಗುವಿಗೆ ತೀವ್ರ ಗಾಯ
ರಾಷ್ಟಿಯ ಹೆದ್ದಾರಿಯಲ್ಲಿ ಶಾಲಾ ಮಗುವೊಂದು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿಗೂ ಹೆಚ್ಚು ಎತ್ತರಕ್ಕೆ ಮಗು ಹಾರಿಬಿದ್ದಿರುವ ಭೀಕರ ಘಟನೆ ನಡೆದಿದೆ. ಈ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝೆಲ್ಲೆನ್ನುವಂತಿದೆ.
ಹೌದು, ರಸ್ತೆ ದಾಟುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ಎಲ್ಲರೂ ನೀಡುತ್ತಾರೆ. ಆದರೆ ಮಕ್ಕಳು ರಸ್ತೆ ದಾಟುವುದೆಂದರೆ ಅದು ಮತ್ತಷ್ಟು ಎಚ್ಚರಿಕೆ ಅಗತ್ಯ. ಆದರೆ ಶಾಲಾ ಬಸ್ ಇಳಿದ ಮಗುವೊಂದು ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಗು 10 ಅಡಿ ಎತ್ತರಕ್ಕೆ ಹಾರಿಬಿದ್ದಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ನಡುಗುಸುವಂತಿದೆ.
ಬೀದರ್ ಜಿಲ್ಲೆಯ ನಾಂದೆಡ ರಾಷ್ಟಿಯ ಹೆದ್ದಾರಿ 161ರ ಜೀಗಾರ್ ಗ್ರಾಮದ ಬಳಿ ಈ ಅಪಘಾತ ಸಂವಿಸಿದ್ದು, ಶಾಲಾ ಮಗು ರಸ್ತೆ ದಾಟುವಾಗ ಔರಾದ್ ಕಡೆಯಿಂದ ವೇಗವಾಗಿ ಬಂದಿರುವ ಇನೋವಾ ಕಾರು ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಹತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದೆ. ಮಗು ಗಂಭೀರವಾಗಿ ಗಾಯ ಗೊಂಡಿದ್ದು, ಈ ದೃಶ ಸಿಸಿ ಕ್ಯಾಮರಾ ದಲ್ಲಿ ಸೇರೆಯಾಗಿದೆ. ಇದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಔರಾದ್ ತಾಲೂಕಿನ ತಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಸ್ತೆ ಕಾಮಗಾರಿ ಅಪೂರ್ಣವಾಗಿರುವುದೇ ಅಪಘಾತಗಳಿಗೆ ಕಾರಣವಾಗಿದೆ. ಕೂಡಲೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯ ಮಾಡಿದರು. ಗಂಭೀರ ಗಾಯ ಗೊಂಡ ಮಗುವಿಗೆ ಬೀದರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.