‘ನಿಮ್ಮ ಕಾಲು ಹಿಡೀತೀನಿ, ನನ್ನ ಬಿಟ್ಟುಬಿಡಿ ಪ್ಲೀಸ್..’: ವರಸೆ ಬದಲಿಸಿದ ಪೊಲೀಸರ ಎದುರು ಮಂಡಿಯೂರಿದ ನಟ ದರ್ಶನ್!
1 min readಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ದರ್ಶನ್ ಪಾತ್ರ ದೊಡ್ಡದಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪೊಲೀಸರ ಕಸ್ಟಡಿಯಲ್ಲಿರುವ ನಟ ದರ್ಶನ್ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ‘ನನಗೇನೂ ಗೊತ್ತಿಲ್ಲ, ನನ್ನದೇನು ತಪ್ಪಿಲ್ಲ’ ಎಂದು ತನಿಖಾಧಿಕಾರಿಗಳಿಗೆ ಒಂದೇ ಮಾತು ಹೇಳುತ್ತ ಒಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವಾರದಿಂದ ಇದನ್ನು ನೋಡಿ ಸಾಕಾಗಿ ಹೋಗಿರುವ ಪೊಲೀಸರು ಸ್ಟಾರ್ನಟ ಎಂಬುದನ್ನು ಬಿಟ್ಟು ಸಾಮಾನ್ಯ ಕೊಲೆಗಾರರನ್ನು ಬಾಯಿಬಿಡಿಸುವಂತೆ ಟ್ರೀಟ್ಮೆಂಟ್ ಕೊಡಲು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಪೊಲೀಸರ ದಿಢೀರ್ ವರಸೆ ಬದಲಾಗಿದ್ದನ್ನು ಕಂಡು ನಟ ದರ್ಶನ್ ದಂಗಾಗಿ ಹೋಗಿದ್ದು, ‘ನಿಮ್ಮ ಕಾಲು ಹಿಡಿಯುತ್ತೇನೆ ಬಿಟ್ಟುಬಿಡಿ’ ಎಂದು ಪೊಲೀಸರಿಗೆ ಕೇಳಿಕೊಳ್ಳುತ್ತಿದ್ದಾರಂತೆ.
ಪೊಲೀಸರು ಕಳೆದ 1 ವಾರದಿಂದ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಸತ್ಯ ಒಪ್ಪಿಕೊಳ್ಳಲು ಈತ ಸಿದ್ಧವೇ ಇಲ್ಲ. ಏನೇ ಕೇಳಿದರೂ ನನಗೆ ಗೊತ್ತೇ ಇಲ್ಲ ಎಂದು ಸೊಕ್ಕು, ಅಹಂಕರಾದ ಮಾತುಗಳನ್ನು ಆಡುತ್ತಿರುವ ದರ್ಶನ್ನನ್ನು ದಾರಿಗೆ ತರಲು ಇನ್ನಿಲ್ಲದ ಯತ್ನ ನಡೆಸಿರುವ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಾತಿನ ವರಸೆ ಬದಲಾಗಿದ್ದನ್ನು ನೋಡಿ ದರ್ಶನ್ ಬೆಚ್ಚಿಬಿದ್ದು, ಈಗ ಪೊಲೀಸರ ಕಾಲು ಹಿಡಿಯಲು ಹೋದ ಘಟನೆ ವರದಿ ಆಗಿದೆ. ‘ಸರ್ ನನ್ನದು ತಪ್ಪಾಯ್ತು, ಸರ್ ನನ್ನನ್ನು ಬಿಟ್ಟುಬಿಡಿ’ ಅಂತಾ ಈ ಸ್ಟಾರ್ ನಟ ನೇರವಾಗಿ ಪೊಲೀಸರ ಕಾಲು ಹಿಡಿಯಲು ಹೋಗಿದ್ದಾನಂತೆ.
ಏಯ್.. ಏನೋ ಇದು ನಿಂದು ಗೋಳು? ಇನ್ನಾದ್ರೂ ಬಾಯ್ಬಿಟ್ಟು ಹೋಗು ಅತ್ಲಾಗೆ ಎಂದು ಪೊಲೀಸರು ಕಾರವಾಗಿ ಹೇಳುತ್ತಿದ್ದಾರೆ. ಪೊಲೀಸರು ರೊಚ್ಚಿಗೆದ್ದಿರುವುದನ್ನು ಕಂಡು ಮೆತ್ತಗಾಗಿರುವ ದರ್ಶನ್ ಪ್ರಶ್ನೆಗಳಿಗೆ ಮೌನವಹಿಸುತ್ತಿದ್ದು, ಪೊಲೀಸರು ಮತ್ತಿನ್ಯಾವ ವರಸೆ ಬಳಸಬೇಕು ಎಂದು ಯೋಚಿಸುತ್ತಿದ್ದಾರಂತೆ. ಅಲ್ಲದೆ ಕೊಲೆ ಆರೋಪದಲ್ಲಿ ನಿನ್ನ ಪಾತ್ರದ ಬಗ್ಗೆ ಎಲ್ಲಾ ರೀತಿಯ ಸಾಕ್ಷ್ಯ ಇದೆ ಎಂದು ಪೊಲೀಸರು ದರ್ಶನ್‌ಗೆ ತಿಳಿಸಿದ್ದಾರಂತೆ.
* https://youtube.com/@ctvnewschikkaballapura?si=C-CJWuVfM-65JQMa
* LIVE: https://shashwatha.com/player.php?url=https://shashwatha.com/hls/shashwatha/ctvnews.m3u8
* CTV News : https://ctvnewskannada.com/
* Subscribe to Ctv News: https://www.youtube.com/channel/UCHtq26kA5D5anCbPD3HoURw
* Big News Big Update : https://ctvnewskannada.com/
* Download CTV Android App: https://play.google.com/store/apps/details?id=com.ctv.ctvnews
* Like us on Facebook: https://www.facebook.com/ctvnewschikkaballapura
* Follow us on Instagram: https://www.instagram.com/ctvnewschikkaballapura/
* Follow us on Twitter: https://twitter.com/ctvnewscbpura