ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಹೆದ್ದಾರಿ ಅಗಲೀಕರಣವೋ, ಇಲ್ಲವೇ ರಸ್ತೆ ದುರಸ್ತಿಯೋ!

1 min read

ಹೆದ್ದಾರಿ ಅಗಲೀಕರಣವೋ, ಇಲ್ಲವೇ ರಸ್ತೆ ದುರಸ್ತಿಯೋ!

ನಗರ ವ್ಯಾಪ್ತಿಯ ಹೆದ್ದಾರಿ ಅಗಲೀಕರಣ ಇಷ್ಟ ಬಂದ ರೀತಿಯಲ್ಲಿ

ನಾಗರಿಕರ ಆಕ್ರೋಶ, 41 ಅಡಿ ರಸ್ತೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ

ಬೇಕಾದವರಿಗೆ ಒಂದು ರೀತಿ, ಬಲಹೀನರಿಗೆ ಮತ್ತೊಂದು ರೀತಿ

ರಾಷ್ಟಿಯ ಹೆದ್ದಾರಿ 234ರ ಅಗಲೀಕರಣ ತೀವ್ರ ಚರ್ಚೆಯಾಗಿತ್ತು. ಅಲ್ಲದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಹಕಾರ ನೀಡಿದರೆ ಎಂಜಿ ರಸ್ತೆಯನ್ನು ಇಂದ್ರಲೋಕದ0ತೆ ಮಾಡುವ ಭರವಸೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ್ದರು. ಆದರೆ ಇದೀಗ ಈ ರಸ್ತೆ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಿದೆ. ರಸ್ತೆಯ ನಕ್ಷೆಯನ್ನು ಈವರೆಗೂ ನಗರಸಭೆಗೆ ನೀಡಿಲ್ಲ, ತಮಗೆ ಇಷ್ಟ ಬಂದ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಹೌದು, ರಾಷ್ಟಿಯ ಹೆದ್ದಾರಿ 234ರ ಅಗಲೀಕರಣ ಆಗಕೋದಕ್ಕೂ ಮೊದಲೇ ತೀವ್ರ ವಿವಾದ ಸೃಷ್ಟಿಯಾಗಿತ್ತು. ಆದರೆ ನಗರಕ್ಕೆ ರಸ್ತೆ ಬೇಕು ಎಂಬ ಕಾರಣಕ್ಕೆ ರಸ್ತೆಯ ಅಕ್ಕಪಕ್ಕ ಇರುವ ಕಟ್ಟಡಗಳ ಮಾಲೀಕರು ಸಹಕರಿಸಿ, ತಮ್ಮ ತಮ್ಮ ಕಟ್ಟಡಗಳನ್ನು ತಾವೇ ತೆರುವು ಮಾಡುವ ಮೂಲಕ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಿದ್ದರು. ರಸ್ತೆ ಮಧ್ಯೆ ಭಾಗದಿಂದ ಎರಡೂ ಬದಿ 41 ಅಡಿಗಳಂತೆ ರಸ್ತೆ ಅಗಲೀಕರಣ ಮಾಡೋದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕರಿಗಳು ಮಾಹಿತಿ ನೀಡಿದ್ದರು. ಆದರೆ ಇದೀಗ ಅಗಲೀಕರಣದ ಬಗ್ಗೆ ಹಲವು ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಉತ್ತರಿಸಬೇಕಿದೆ.

ಇನ್ನು ರಸ್ತೆ ಅಗಲೀಕರಣಕ್ಕೆ ಸಂಬ0ಧಿಸಿ ನಕ್ಷೆಯನ್ನು ನಗರಸಭೆಗೆ ನೀಡಿಯೇ ಇಲ್ಲ ಎಂಬುದು ಮತ್ತೊಂದು ಪ್ರಮುಖ ಆರೋಪವಾಗಿದೆ. ಅಲ್ಲದೆ ಪ್ರಸ್ತುತ ರಸ್ತೆ ಎರಡೂ ಬದಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪೈಪ್ ಬದಲಾವಣೆ ಮಾಡಿಲ್ಲ, ಯುಜಿಡಿ ಸ್ಥಳಾಂತರ ಮಾಡಿಲ್ಲ ಎಂಬ ಆರೋಪಗಳ ಸರಮಾಲೆಯೇ ಕೇಳಿಬರುತ್ತಿದೆ. ಇನ್ನು ಈ ಹಿಂದೆ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುತ್ತಿದ್ದು, ಪ್ರಸ್ತುತ ರಸ್ತೆ ಅಗಲೀಕರಣಕ್ಕೆ ತಕ್ಕಂತೆ ವಿದ್ಯುತ್ ಕಂಬಗಳನ್ನು ನೆಡಬೇಕಿದೆ. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ವಿದ್ಯುತ್ ಕಂಬಗಳನ್ನು ನೆಡುತ್ತಿದ್ದಾರೆ ಎಂಬುದು ಇದೀಗ ಕೇಳಿಬರುತ್ತಿರುವ ಹೊಸ ಆರೋಪವಾಗಿದೆ.

ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿ, ದರ್ಗಾ ಮೊಹಲ್ಲಾ ಮುಂಭಾಗದಲ್ಲಿ ವಿದ್ಯುತ್ ಕಂಬಗಳನ್ನು ನಿಗಧಿಗಿಂದ ಒಳಗೆ ಹಾಕಲಾಗಿದೆ ಎಂಬ ಆರೋಪಗಳಿವೆ. ಇನ್ನು ಶ್ರೀರಾಮ್ ಬಿಲ್ಡಿಂಗ್ ಬಳಿ ಹೆದ್ದಾರಿ ಪ್ರಾಧಿಕಾರದವರು ನಿರ್ಮಾಣ ಮಾಡುತ್ತಿರುವ ಚರಂಡಿಯನ್ನೇ ತಿರುಗಿಸಲಾಗಿದೆ. ನೇರವಾಗಿ ಸಾಗಬೇಕಾದ ಚರಂಡಿಯನ್ನು ತಿರುಗಿಸಿರುವುದಾದರೂ ಯಾಕೆ ಎಂಬ ಪ್ರಶ್ನೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಇದೇ ಕಾರಣಕ್ಕೆ ಬಲಾಢ್ಯರಿಗೆ ಒಂದು ನ್ಯಾಯ, ಬಲಹೀನರಿಗೆ ಮತ್ತೊಂದು ನ್ಯಾಯವನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಇನ್ನು ಹೆದ್ದಾರಿ ಕಾಮಗಾರಿ ನಡೆಸೋ ವೇಳೆ ತಿಪ್ಪೇನಹಳ್ಳಿ ಸಮೀಪ ಚಿಕ್ಕಬಳ್ಳಾಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡೋ ಪೈಪ್‌ಲೈನ್ ಒಡೆದಿದೆ. ಹೆದ್ದಾರಿ ಅಭಿವೃದ್ದಿ ಕಾಮಗಾರಿ ವೇಳೆ ಪೈಪ್‌ಲೈನ್ ಒಡೆಯಲಾಗಿದ್ದು, ಇದು ಒಡೆದು ನಾಲ್ಕು ತಿಂಗಳೇ ಕಳೆದರೂ ದುರಸತಿ ಮಾಡಲು ಮಾತ್ರ ಮುಂದಾಗಿಲ್ಲ. ಇದರಿಂದ ಜಕ್ಕಲಮಡಗು ನೀರು ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದ್ದು, ನೀರು ನಿಂತಾಗಕ ತ್ಯಾಜ್ಯ ನೀರು ಪೈಪ್‌ಗಳಿಗೆ ಸೇರಿ ಇಡೀ ನಗರಕ್ಕೆ ತ್ಯಾಜ್ಯ ನೀರು ಸರಬರಾಜು ಮಾಡುವ ಸ್ಥಿತಿ ಎದುರಾಗಿದೆ.

ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಈ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ನಗರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಸಮರ್ಪಕವಾಗಿ ನಡೆಯುತ್ತಿದೆ, ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ ಚರಂಡಿ ತಿರುವುಗಳು, ವಿದ್ಯುತ್ ಕಂಬಘಲನ್ನು ಒಳಗೆ ನೆಟ್ಟಿರುವ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ನಿರುತ್ತರರಾಗಿದ್ದಾರೆ. ಇನ್ನು ಹೆದ್ದಾರಿ ಅಗಲೀಕರಣದ ನಕ್ಷೆ ಈವರೆಗೂ ನಗರಸಭೆಗೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೂ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ.

ಮುಖ್ಯವಾಗಿ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ಹಾದುಹೋಗಿರುವ ಕುಡಿಯುವ ನೀರಿನ ಪೈಪ್ ಲೈನ್ ಮತ್ತು ಯುಜಿಡಿ ಪೈಪ್‌ಲೈನ್ ಎರಡನ್ನೂ ಹೆದ್ದಾರಿ ಪ್ರಾಧಿಕಾರದವರೇ ತಮಮದೇ ಹಣದಲ್ಲಿ ಸ್ಥಳಾಂತರ ಮಾಡಿಕೊಡಬೇಕಿದೆ. ಆದರೆ ಈವರೆಗೂ ಯಾವುದೇ ಸ್ಥಳಾಂತರ ಮಾಡದೆ ಚರಂಡಿ ಕಾಮಗಾರಿ ಕೈಗೊಂಡಿದ್ದು, ಚರಂಡಿ ನಿರ್ಮಾಣವಾಗಿರುವ ಜಾಗಕ್ಕೆ ಮಾತ್ರ ರಸ್ತೆ ಎಂದು ಭಾವಿಸಿರುವ ಅಂಗಡಿ ಮಾಲೀಕರು ಈಗಾಗಲೇ ಕೆಡವಿದ್ದ ತಮ್ಮ ತಮ್ಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

ಆದರೆ ಚರಂಡಿಯಾದ ನಂತರ ಮತ್ತೆ ಎರಡು ಮೀಟರ್ ಜಾಗದಲ್ಲಿ ಟ್‌ಪಾತ್ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಪ್ರಸ್ತುತ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಮಾಲೀಕರು ಮತ್ತೆ ತಮ್ಮ ಕಟ್ಟಡಗಳನ್ನು ಕೆಡುವಬೇಕಾದ ಸ್ಥಿತಿ ಎದುರಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ. ಈಬಗ್ಗೆ ಸ್ಪಷ್ಟನೆಯನ್ನು ನಗರಸಭೆಯಾಗಲೀ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಈವರೆಗೂ ನೀಡಿಲ್ಲ.

ಇದರಿಂದಾಗಿ ಚರಂಡಿಗೆ ಮಾತ್ರ ರಸ್ತೆ ಎಂದು ಎಂಜಿ ರಸ್ತೆಯಲ್ಲಿರುವ ಎಲ್ಲ ಕಟ್ಟಡಗಳ ಮಾಲೀಕರು ಭಾವಿಸಿದ್ದಾರೆ. ಆದರೆ ಚರಂಡಿಯ ನಂತರ ಎರಡು ಮೀಟರ್ ಅಂದರೆ ಸುಮಾರು ೬ ಅಡಿ ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ ಎಂಬ ಮಾಹಿತಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನೀಡಿದ್ದಾರೆ. ಆದರೆ ಪ್ರಸ್ತುತ ಕಟ್ಟಡಗಳನ್ನು ಕಟ್ಟಿಕೊಂಡವರ ಸ್ಥಿತಿ ಏನು ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರವಿಲ್ಲ. ಹಾಗಾಗಿ ಚರಂಡಿಯೇ ಅಂತಿಮವೇ ಅಥವಾ ಚರಂಡಿಯ ನಂತರವೂ ಪಾದಚಾರಿ ಮಾರ್ಗ ಬರಲಿದೆಯೇ ಎಂಬ ಬಗ್ಗೆ ನಗರಸಭೆಯಾಗಲೀ, ಇಲ್ಲವೇ ರಾಷಟ್‌ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಮಾಹಿತಿ ನೀಡಬೇಕಾದ ಅಗತ್ಯವಿದೆ.

ಒಟ್ಟಿನಲ್ಲಿ ರಾಷ್ಟಿಯ ಹೆದ್ದಾರಿ ಅಗಲೀಕರಣ ದಿನೇ ದಿನೇ ವಿವಾದಗಳಿಗೆ ಗುರಿಯಾಗುತ್ತಿದ್ದು, ಈ ವಿವಾದಗಳಿಂದ ಮುಕ್ತವಾಗಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಅಗಲೀಕರಣದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನಾಗರಿಕರಿಗೆ ನೀಡಬೇಕಿದೆ. ಆದರೆ ಅವರು ನೀಡಲು ಮುಂದೆ ಬರಲಿದ್ದಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *