ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಡಿಕೆಶಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಕುಮಾರಸ್ವಾಮಿ

1 min read

 ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ! ಸ್ವಲ್ಪ ದಿನ ಇದನ್ನು ಮುಂದಕ್ಕೆ ಎಳೆಯಬೇಕಲ್ಲವೇ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡುತ್ತೇವೆ, ಬಳಿಕ ಎಲ್ಲಾ ಕೇಸ್ ಗಳನ್ನು ಮುಚ್ಚಿಹಾಕಬಹುದೆಂದು ಐದಾರು ತಿಂಗಳು ಮುಂದೂಡ್ತಿದ್ದಾರೆ.

ಇದೆಲ್ಲಾ ತಂತ್ರಗಾರಿಕೆಯಷ್ಟೇ. ಅದು ಮುಂದೆ ಏನೇನಾಗುತ್ತದೆಂದು ನೋಡೊಣ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸು ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ದೊಡ್ಡ ವಕೀಲರೆಂದು ಗೊತ್ತು. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ಲವೇ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದರು, ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡರಲ್ಲ. ಆ ರೀತಿಯ ವಕೀಲರು ಇವರು. ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆ ಇವರು ಬುದ್ದಿವಂತರಿದ್ದಾರೆ ಎಂದರು.

ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ಕೇಸ್ ಗಳನ್ನು ಮುಚ್ಚಿಹಾಕಿಕೊಂಡರು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಕೇಸ್ ಇತ್ತಲ್ಲ. ನಾನು ಆವಾಗ ಇವರ ರೀತಿ ನಡೆದುಕೊಂಡಿದ್ದೆನಾ? ಎರಡನೇ ಬಾರಿ ಸಿಎಂ ಆದಾಗ ನನ್ನ ಮೇಲಿನ ಕೇಸ್ ಮುಚ್ಚಿಹಾಕಿದ್ನಾ? ಮೆರಿಟ್ ಇದ್ದರೆ ಮಾಡಿಕೊಳ್ಳಲಿಯೆಂದು ಬಿಟ್ಟಿದ್ದೀನಿ. ಅವರಿಗೂ, ನಮಗೂ ಇರುವ ವ್ಯತ್ಯಾಸ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಮುಷ್ಕರ ವಿಚಾರಕ್ಕೆ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸರ್ಕಾರ ಗೌರವಿಸುತ್ತಿಲ್ಲ.

ಸಾಕಷ್ಟು ಶಾಲಾ ಕಾಲೇಜುಗಳಲ್ಲಿ ಶಿಕ್ಷರ ಕೊರತೆಯಿದೆ. ಜೊತೆಗೆ ಹಲವಾರು ಸಮಸ್ಯೆಯಿದೆ. ಹೀಗಾದರೆ ಸರ್ಕಾರಿ ಕಾಲೇಜುಗಳಿಗೆ ಪೋಷಕರು ಹೇಗೆ ಸೇರಿಸುತ್ತಾರೆ. ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲಾ ಕಾಲೇಜಿನ ಮೂಲಸೌಕರ್ಯದ ಆದ್ಯತೆ ನೀಡುವುದು ಈ ಸರ್ಕಾರದಲ್ಲಿ ಕಾಣುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕೇಂದ್ರಕ್ಕೆ ಆದ್ಯತೆ ಈ ಸರ್ಕಾರ ನೀಡುತ್ತಿಲ್ಲ. ಇದರಿಂದ ಪೋಷಕರು ಖಾಸಗಿ ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ. ಇದರಿಂದ ಪೋಷಕರಿಗೆ ಸಾಕಷ್ಟು ಹೊರೆಯಾಗುತ್ತಿದೆ. 10 ಸಾವಿರ ಶಿಕ್ಷಕರ ನೇಮಕ ಮಾಡಲು ಪ್ರಸ್ತಾವನೆ ಕಳುಹಿಸಿದ್ದೇವೆಂದು ಇಲಾಖೆ ಹೇಳುತ್ತಿದೆ. ಕಳೆದ 6 ತಿಂಗಳಿಂದಲೂ ಇದನ್ನೇ ಹೇಳುತ್ತಿದ್ದಾರೆ. ಇನ್ನು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.

ಐದು ಗ್ಯಾರಿಂಟಿ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆಂದು ಹೇಳುತ್ತಿದ್ದಾರೆ. ನಿಮ್ಮ ಗ್ಯಾರಂಟಿ ಎಷ್ಟುದಿನ ಕೊಡುತ್ತೀರಿ? ನಿರಂತರವಾಗಿ ಕೊಡಲು ನಿಮಗೆ ಸಾಧ್ಯನಾ? ಸರ್ಕಾರ ಮೇಲೆ ಆಗುವ ಆರ್ಥಿಕ ಹೊರೆ ಏನು? ಅಭಿವೃದ್ಧಿ ಕಾರ್ಯಗಳ ಮೇಲೆ ಆಗುವ ದುಷ್ಪರಿಣಾಮ ಏನು? ಆರು ತಿಂಗಳಿನಿಂದ ನೋಡುತ್ತಿದ್ದೇವೆ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ದಿನಾ ನೂರಾರು ಕೋಟಿ ವೆಚ್ಚದಲ್ಲಿ ಜಾಹಿರಾತು ನೀಡುತ್ತಿದ್ದೀರಿ. ಎಷ್ಟು ದಿನ ಇದನ್ನ ಹೇಳಿಕೊಂಡು ಹೋಗುತ್ತೀರಿ. ನಿಮ್ಮ ಎರಡು ಸಾವಿರದಲ್ಲಿ ಜನ ಬದುಕಬಹುದಾದರೆ ತುಮಕೂರಿನಲ್ಲಿ ಜನ್ಮಕೊಟ್ಟ ತಂದೆಯೇ ಮಕ್ಕಳನ್ನು ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡರು. ಆ ಕುಟುಂಬ ನಾಶವಾಯಿತು. ನಿಮ್ಮ ಎರಡು ಸಾವಿರ ರೂಪಾಯಿಯಿಂದ ಬದುಕಿಸುತ್ತೀರಾ? ಜನಗಳ ಆರ್ಥಿಕ ಬದುಕನ್ನು ಕಟ್ಟಿಕೊಳ್ಳೊವ ಕಾರ್ಯಕ್ರಮಗಳನ್ನು ಸರ್ಕಾರ ಕೊಡಬೇಕು ಎಂದರು.

About The Author

Leave a Reply

Your email address will not be published. Required fields are marked *