ಬೆತ್ತಲೆ ಶೂಟಿಂಗ್ ಮಾಡಿ ಅನುಭವ ತಿಳಿಸಿದ್ದ ‘ಹೆಬ್ಬುಲಿ’ ನಟಿ 2ನೇ ಮದ್ವೆಗೆ ರೆಡಿ: ವಿಡಿಯೋ ವೈರಲ್
1 min read
1 year ago
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್ ಎಲ್ಲರಿಗೂ ಚಿರಪರಿಚಿತರು. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಭಾರತೀಯ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರ ಪೈಕಿ ಅಮಲಾ ಪೌಲ್ ಒಬ್ಬರು. ಆದೈ ಸಿನಿಮಾದಲ್ಲಿ ಅಮಲಾ ಮೈಚಳಿ ಬಿಟ್ಟ ನಟಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಇವರು ನಟಿಸಿದ್ದಾರೆ. ಇವರ ಈ ದೃಶ್ಯವನ್ನು ಕಂಡು ಸಿನಿ ಪ್ರಿಯರು ಹುಬ್ಬೇರಿಸಿದ್ದರು. ಆದರೆ ತಾವು ಹೀಗೆ ನಟಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಹೇಳಿಕೆ ನೀಡಿ ಮತ್ತಷ್ಟು ಸದ್ದು ಮಾಡಿದ್ದವರು ಅಮಲಾ ಪೌಲ್. ಆದೈ ಸಿನಿಮಾದಲ್ಲಿ ಬಟ್ಟೆ ಇಲ್ಲದೆ ನಟಿಸುವುದು ಸವಾಲಾಗಿತ್ತು. ಶೂಟಿಂಗ್ ಸಮಯದಲ್ಲಿ ನನ್ನೊಂದಿಗೆ 15 ಮಂದಿ ಇದ್ದರು. ಒಬ್ಬ ಮಹಿಳೆಯೂ ಕೂಡ ಇರಲಿಲ್ಲ. ಕ್ಯಾಮೆರಾಮನ್, ಲೈಟ್ ಮ್ಯಾನ್, ಡೈರೆಕ್ಟರ್ ಹೀಗೆ ಒಟ್ಟು 15 ಜನ ಕೆಲಸ ಮಾಡುತ್ತಿದ್ದರು. ಇವರೆಲ್ಲರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು ಎಂಬ ಚಿಂತೆಯಲ್ಲಿದ್ದೆ. ಈ ಮನಃಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತಾ ಸರಿಯಾಗಿ ಬರುವುದಿಲ್ಲ ಎಂದರಿತು, ನನಗೆ ಈ ಕ್ಷಣಕ್ಕೆ 15 ಗಂಡಂದಿರಿದ್ದಾರೆ ಎಂದು ಭಾವಿಸಿಕೊಂಡು ನಟಿಸಲು ಪ್ರಾರಂಭಿಸಿದೆ ಎಂದಿದ್ದರು
ಇದೀಗ ನಟಿ 2ನೇ ಮದ್ವೆಗೆ ಸಜ್ಜಾಗಿದ್ದಾರೆ. ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೋನ ಜಗತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಮೊದಲ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್. ಇವರ ಜೊತೆ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು.