ಕರಾವಳಿಯಲ್ಲಿ ಹೆಚ್ಚಾದ ಮಳೆ ಪ್ರವಾಸಿತಾಣಗಳಿಗೆ ನಿರ್ಭಂಧ
1 min readಕರಾವಳಿಯಲ್ಲಿ ಹೆಚ್ಚಾದ ಮಳೆ ಪ್ರವಾಸಿತಾಣಗಳಿಗೆ ನಿರ್ಭಂಧ
ಚಿಕ್ಕಬಳ್ಳಾಪುರದತ್ತ ಹರಿದು ಬರುತ್ತಿರುವ ಪ್ರವಾಸಿಗರ ದಂಡು
ನoದಿಗಿರಿಧಾಮದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು
ಪ್ರಕೃತಿ ಸೌಂದರ್ಯಕ್ಕೆ ಫುಲ್ ಪಿಧಾ ಆದ ಪ್ರವಾಸಿಗರು
ಕರುನಾಡಲ್ಲಿ ಮುಂಗಾರು ಅಬ್ಬರಿಸುತ್ತಿದೆ, ಇದರ ಜೊತೆಗೆ ಪ್ರಸ್ತುತ ಚಂಡಮಾರುತ ಆತಂಕವೂ ಕಾಡುತ್ತಿದೆ. ಇನ್ನು ಕರಾವಳಿಯಲ್ಲಂತೂ ನದಿ, ಜಲಪಾತ, ಸಮುದ್ರ ಬೋರ್ಗರೆಯುತ್ತಿವೆ, ಕರಾವಳಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹುಚ್ಚಾಟ ತಾರಕಕ್ಕೇರಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಪ್ರವಾಸಿ ತಾಣಗಳಿಗೆ ನಿರ್ಭಂಧ ಹೇರಲಾಗಿದೆ, ಇದ್ರಿಂದ ಬೆಂಗಳೂರಿಗೆ ಸಮೀಪ ಇರೋ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಇದರಿಂದಾಗಿ ಪ್ರವಾಸಿ ತಾಣಗಳು ಜನರಿಂದ ಹೌಸ್ ಫುಲ್ ಆಗಿವೆ. ಅಷ್ಟಕ್ಕೂ ಆ ಪ್ರವಾಸಿ ತಾಣ ಯಾವುದು ಅಂತಿರಾ ಈ ಸ್ಟೋರಿ ನೋಡಿ.
ಹೀಗೆ ಮುಂಜಾನೆ ವೇಳೆ ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತ ವಾಹನಗಳು, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಹೆಣಗಾಡುತ್ತಿರುವ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು, ತೇಲಾಡುವ ಮಂಜಿನ ಮೋಡಗಳೊಂದಿಗೆ ಸ್ಟೆಪ್ ಹಾಕುತ್ತಿರುವ ಪ್ರಕೃತಿ ಪ್ರಿಯರು, ತಂಪಾದ ವಾತಾವರಣ ಆಸ್ವಾಧಿಸುತ್ತಾ ಕೈ ಕೈ ಹಿಡಿದು ಮೆಲ್ಲನೆ ಹೆಜ್ಜೆ ಹಾಕುತ್ತಿರುವ ಪ್ರೇಮ ಪಕ್ಷಿಗಳು, ಈ ದೃಶ್ಯಗಳು ಕಂಡುಬoದಿದ್ದು ರಾಜಧಾನಿಗೆ ಸಮೀಪ ಇರೋ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂಧಿಗಿರಿಧಾಮದಲ್ಲಿ.
ಕರ್ನಾಟಕಲ್ಲಿ ಮುಂಗಾರು ಅಬ್ಬರಿಸುತಿದೆ. ನದಿ, ಜಲಪಾತ, ಸಮುದ್ರ ಉಕ್ಕಿ ಹರಿಯುತಿವೆ, ಹರಿಯುವ ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಉತ್ತರಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಗಳ ಹಲವು ಪ್ರವಾಸಿ ತಾಣಗಳಿಗೆ ಅಲ್ಲಿನ ಜಿಲ್ಲಾಡಳಿತಗಳು ನಿರ್ಭಂಧ ಹೇರಿವೆ. ಇದರಿಂದ ಬೆಂಗಳೂರಿಗೆ ಸಮೀಪ ಇರೋ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದ ಕಡೆ ಪ್ರಾವಾಸಿಗರ ದಂಡೇ ಹರಿದು ಬಂದಿದೆ. ಇಂದರಿoದ ನಂದಿ ಬೆಟ್ಟದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿತ್ತು, ಹೇಗೋ ಕಷ್ಟಪಟ್ಟು ಬೆಟ್ಟದ ಮೇಲೆ ಹೋದ ಪ್ರವಾಸಿಗರಿಗೆ ನಂದಿ ಸ್ವರ್ಗದ ಬಾಗಿಲು ತೆರದಿತ್ತು.
ನಂದಿಗಿರಿಧಾಮಲದಲ್ಲಿ ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ, ಅಲ್ಲಿನ ಗ್ಯಾಲರಿಯಲ್ಲಿ ಸೂರ್ಯೋದಯ ನೋಡುವುದೇ ಒಂದು ಖುಷಿ. ಹಾಗಾಗಿ ಮುಂಜಾನೆ 5 ಗಂಟೆಗೆ ನಂದಿ ಗಿರಿಧಾಮದ ತಪ್ಪಲಿಗೆ ಬಂದು, ಬೆಳಗ್ಗೆ 6 ಗಂಟೆಗೆ ಗಿರಿಧಾಮಕ್ಕೆ ಪ್ರವೇಶ ಕಲ್ಪಿಸುತ್ತಿದ್ದಂತೆ, ನಾ ಮುಂದು ತಾ ಮುಂದು ಎಂಬoತೆ ಜನರು ಮುಗಿಬಿದ್ದರು. ಇನ್ನೂ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟರು. ನಂದಿಗಿರಿಧಾಮಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಮಂಜಿನ ಜೊತೆಗೆ ಜಿಟಿ ಜಿಟಿ ಹನಿಗಳಿಗೆ ಜನರು ಮೈಯೊಡ್ಡಿ ಪ್ರಕೃತಿ ಸೌಂದರ್ಯ ಸವಿದರು. ಜೊತೆಗೆ ಸೆಲ್ಫಿ ಗ್ಯಾಲರಿಗೆ ತೆರಳಿ ಸೆಲ್ಫಿ ಕಿಕ್ಕಿರಿಸಿಕೊಂಡರು. ಇದೇ ಮೊದಲ ಬಾರಿಗೆ ಬಂದಿದ್ದ ಪ್ರವಾಸಿಗರು ನಂದಿ ಗಿರಧಾಮದ ಸೌಂದರ್ಯಕ್ಕೆ ಮನಸೋತರು. ಮೋಡ ಕವಿದ ವಾತಾವತಣವಿದ್ದ ಕಾರಣ ಸೂರ್ಯೋದಯ ನೋಡಲು ಆಗದಿದ್ದರೂ ಪ್ರೇಮಿಗಳು, ಸ್ನೇಹಿತರು,ಕುಟುಂಬಸ್ಥರು ಸಖತ್ ಎಂಜಾಯ್ ಮಾಡಿದ್ದಂತೂ ನಿಜ.
ಒಟ್ಟಾರೆ ವೀಕೆಂಡ್ ಹಿನ್ನಲೆ ಒಂಡೇ ಟ್ರಿಪ್ ಪ್ಲಾನ್ ಮಾಡಿಕೊಂಡಿದ್ದವರು ಇಂದು ನಂದಿಗಿರಿಧಾಮದಲ್ಲಿ ಸಖತ್ ಎಂಜಾಯ್ ಮಾಡುವ ಮೂಲಕ ವೀಕೆಂಡ್ ಎಂಜಾಯ್ ಮಾಡಿದರು. ಕುಟುಂಬಸ್ಥರು ದೂರದ ಪ್ರವಾಸಿತಾಣಗಳಿಗೆ ತೆರಳಿ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ನಂದಿಗಿರಿಧಾಮ ಸೇಫ್ ಎಂದು ಪ್ರಕೃತಿ ಸೌಂದರ್ಯ ಸವಿದರು.