ಹಾಸನ ಜಿಲ್ಲೆಯಲ್ಲಿ ಅತಿಯಾದ ಮಳೆ ಅವಾಂತರ
1 min readಹಾಸನ ಜಿಲ್ಲೆಯಲ್ಲಿ ಅತಿಯಾದ ಮಳೆ ಅವಾಂತರ
ಮನೆ ಕುಸಿತ, ಮಹಿಳೆ ಪ್ರಾಣಾಪಾಯದಿಂದ ಪಾರು
ಅರಸೀಕೆರೆ ನಗರದ ಮಟನ್ ಮಾರ್ಕೆಟ್ ಚಪ್ಪಡಿ ಕಲ್ಲು ಬೀದಿ ಪ್ರದೇಶದಲ್ಲಿ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಸೊಗರಾ ಬೇಗಂ ಎಂಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಸೀಕೆರೆ ನಗರದ ಮಟನ್ ಮಾರ್ಕೆಟ್ ಚಪ್ಪಡಿ ಕಲ್ಲು ಬೀದಿ ಪ್ರದೇಶದಲ್ಲಿ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಸೊಗರಾ ಬೇಗಂ ಎಂಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಮನೆಯ ಗೋಡೆಗಳು ಶಿಥಿಲಗುಂಡು, ಬೆಳಗಿನ ಜಾವ ಮನೆಯ ಚಾವಣಿ ಹಾಗೂ ಗೋಡೆಗಳು ಕುಸಿದು ಬಿದ್ದಿವೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆ ಶಬ್ದ ಕೇಳಿ ಹೊರಗೆ ಓಡಿ ಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಕ್ಕ ಪಕ್ಕದ ನಿವಾಸಿಗಳು ಆಗಮಿಸಿ ಆ ಮಹಿಳೆಯನ್ನು ಆರೈಕೆ ಮಾಡಿ ಸಮಾಧಾನಪಡಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ವಿಚಾರ ತಿಳಿದು ನಗರಸಭೆ ಮಾಜಿ ಅಧ್ಯಕ್ಷ ಎಂ ಸಮಿವುಲ್ಲಾ, ನಗರಸಭೆ ಸದಸ್ಯ ರೇಷ್ಮಾ ಯೂನುಸ್ ಸ್ಥಳಕ್ಕೆ ಆಗಮಿಸಿ, ಮನೆ ಕಳೆದುಕೊಂಡAತ ಮಹಿಳೆ ಕಣ್ಣೀರು ಹಾಕಿ ಅಳಲು ತೋಡಿಕೊಂಡರು. ಮಹಿಳೆಯನ್ನು ಸಮಾಧಾನ ಪಡಿಸಿ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ನಗರ ಗ್ರಾಮ ಆಡಳಿತಾಧಿಕಾರಿ ಶಿವಾನಂದ ನಾಯಕ್, ರಾಜಸ್ವ ನಿರೀಕ್ಷಕ ಓಬಲೇಶ್ ಅವರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ಕೊಡಿಸಲು ಸಹಕಾರ ನೀಡುವುದಾಗಿ ತಿಳಿಸಿದರು.