ಭಾರೀ ಮಳೆಗೆ ಬ್ರಿಮ್ಸ್ ಆಸ್ಪತ್ರೆಗೆ ವಿದ್ಯುತ್ ಕಡಿತ
1 min readಭಾರೀ ಮಳೆಗೆ ಬ್ರಿಮ್ಸ್ ಆಸ್ಪತ್ರೆಗೆ ವಿದ್ಯುತ್ ಕಡಿತ
ಲಿಫ್ಟ್ ಇಲ್ಲದೆ ರೋಗಿಗಳು, ವೃದ್ಧರ ಪರದಾಟ
ಎನ್‌ಐಸಿಯುಯಿಂದ ನವಜಾತ ಶಿಶುಗಳು ಶಿಫ್ಟ್
ಬೀದರ್ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬ್ರಿಮ್ಸ್ನಲ್ಲಿ ವಿದ್ಯುತ್ ಕೈಕೊಟ್ಟು ತೀವ್ರ ಪರದಾಟ ಎದುರಾಗಿದೆ. ಬ್ರಿಮ್ಸ್ ಆಸ್ಪತ್ರೆ ನೆಲಮಡಿಯಲ್ಲಿ ನೀರು ತುಂಬಿಕೊ0ಡು ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟ ಹಿನ್ನೆಲೆ ರೋಗಿಗಳ ಪರದಾಡುವಂತಾಯಿತು.
ಬೀದರ್ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬ್ರಿಮ್ಸ್ನಲ್ಲಿ ವಿದ್ಯುತ್ ಕೈಕೊಟ್ಟು ತೀವ್ರ ಪರದಾಟ ಎದುರಾಗಿದೆ. ಬ್ರಿಮ್ಸ್ ಆಸ್ಪತ್ರೆ ನೆಲಮಡಿಯಲ್ಲಿ ನೀರು ತುಂಬಿಕೊ0ಡು ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟ ಹಿನ್ನೆಲೆ ರೋಗಿಗಳ ಪರದಾಡುವಂತಾಯಿತು. ಅಲ್ಲದೆ ನವಜಾತ ಳಿಳುಗಳನ್ನು ಎನ್‌ಐಸಿಯುಯಿಂದ ಸ್ಥಳಾಂತರ ಮಾಡಲಾಯಿತು.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿದ್ಯುತ್ ಕೈಕೊಟ್ಟಿದ್ದು, ಇದರಿಂದ ಎನ್‌ಐಸಿಯು ವಿಭಾಗದಿಂದ 17 ಮಕ್ಕಳನ್ನು ಶಿಫ್ಟ್ ಮಾಡಲಾಗಿದೆ. ಎನ್‌ಐಸಿಯು ವಾರ್ಡ್ನಲ್ಲಿದ್ದ ನವಜಾತ ಶಿಶುಗಳು ಹಳೆ ಆಸ್ಪತ್ರೆ ಕಟ್ಟಡದ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಬ್ರಿಮ್ಸ್ ಆಸ್ಪತ್ರೆ ಹಳೇ ಬಿಲ್ಡಿಂಗ್ ಹಾಗೂ ಓಲ್ಡ್ ಸಿಟಿಯ ನೂರು ಹಾಸಿಗೆ ಆಸ್ಪತ್ರೆಗೆ ನವಜಾತ ಶಿಶುಗಳು ಶಿಫ್ಟ್ ಮಾಡಿ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.
ಇಂದು ನಸುಕಿನ ಜಾವ ಕರೆಂಟ್ ಹೋಗಿದ್ದರಿಂದ ಆಸ್ಪತ್ರೆಯಲ್ಲಿ ರೋಗಿಗಳು ತೀವ್ರ ಪರದಾಡಿದ್ದು, ಕರೆಂಟ್ ಇಲ್ಲದೇ ಆಸ್ಪತ್ರೆಯಲ್ಲಿ ರೋಗಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದರು. ಮಹಿಳೆಯರು, ವೃದ್ದರು ಮೆಟ್ಟಿಲು ಏರಲು ಮತ್ತು ಇಳಿಯಲು ಲಿಫ್ಟ್ ಇಲ್ಲದೆ ಪರದಾಡಿದ ಘಟನೆಯೂ ನಡೆಯಿತು.
ನೆಲ ಮಹಡಿಯಿಂದ ನೀರು ಹೊರಹಾಕಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುವಂತಾಯಿತು. ರೋಗಿಗಳ ಮೆಟ್ಟಿಲು ಹತ್ತಿ ಇಳಿಯಲು ಹರಸಾಹಸ ಪಡುವಂತಾದರೆ ಬ್ರಿಮ್ಸ್ ಆಸ್ಪತ್ರೆ ಅಧಿಕಾರಿಗಳ ವಿರುದ್ದ ರೋಗಿಗಳು ಮತ್ತು ಸಂಬ0ಧಿಕರು ತೀವ್ರ ಅಸಮಧಾನ ಹೊರಹಾಕಿದ ಘಟನೆಯೂ ನಡೆಯಿತು.