ಅಧಿಕ ಭಾರ, ಅತಿ ವೇಗದಿಂದ ಸಂಚರಿಸುವ ಗಣಿ ಟಿಪ್ಪರ್‌ಗಳು
1 min readಅಧಿಕ ಭಾರ, ಅತಿ ವೇಗದಿಂದ ಸಂಚರಿಸುವ ಗಣಿ ಟಿಪ್ಪರ್‌ಗಳು
ಕಡಿವಾಣ ಹಾಕುವಲ್ಲಿ ವಿಫಲವಾದ ಆರ್‌ಟಿಒ, ಪೊಲೀಸ್ ಇಲಾಖೆ
ಅತಿ ವೇಗದ ಪರಿಣಾಮ ಹೆಚ್ಚಾಗುತ್ತಿರುವ ಅಪಘಾತಗಳು
ಕಲ್ಲು ಗಣಿಗಾರಿಕೆ ಅಡ್ಡೆಯಾಗಿರುವ ಚಿಕ್ಕಬಳ್ಳಾಪುರ ತಾಲೂಕು ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಜಲ್ಲಿ, ಎಂ ಸ್ಯಾಂಡ್ ಹೊತ್ತ ಟಿಪ್ಪರ್‌ಗಳು ಸಂಚಾರ ಮಾಡುತ್ತಿವೆ. ಅದ್ರೆ ಚಾಲಕರ ನಿರ್ಲಕ್ಷದಿಂದ ಅಡ್ಡಾ ದಿಡ್ಡಿ ಓಡಿಸಿ ಅಪಘಾತಗಳಾಗುತ್ತಿದ್ದು, ಸಾವು ನೋವಿನ ಪ್ರಕರಣಗಳು ಹೆಚ್ಚಾಗುತ್ತಿವೆ.
ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಗಣಿಗಾರಿಕೆ ಮಿತಿಮೀರಿದೆ. ಮುದ್ದೇನಹಳ್ಳಿ, ಪೇರೆಸಂದ್ರ ಭಾಗದ ಲಾರಿ ಮಾಲೀಕರು, ಚಾಲಕರನ್ನು ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಅವರದ್ದೇ ರಾಜ್ಯ, ಅವರದೇ ಸಾಮ್ರಾಜ್ಯ ಎಂಬ0ತೆ ಎದ್ವಾ ತದ್ವಾ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಪ್ರತಿಷ್ಠಿತ ರಾಜಕೀಯ ನಾಯಕರ ಮತ್ತು ಉದ್ದಿಮಿಗಳ ಗಣಿಗಾರಿಕೆಗಳಿದ್ದು, ಇಲ್ಲಿಂದ ಸಾವಿರಾರು ಲೋಡ್ ಎಂ ಸ್ಯಾಂಡ್, ಜೆಲ್ಲಿ ಟಿಪ್ಪರ್‌ಗಳ ಮೂಲಕ ಆಂಧ್ರ, ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ರವಾನೆಯಾಗುತ್ತೆ.
ಅದ್ರೆ ಗಣಿಗಾರಿಕೆ ಟಿಪ್ಪರ್ ಲಾರಿಗಳಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ರಾತ್ರಿಯಾದ್ರೆ ರಾಷ್ಟಿಯ ಹೆದ್ದಾರಿಗಳಲ್ಲಿ ನೂರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಾಗುವ ಟಿಪ್ಪರ್ ಚಾಲಕರಿಗೆ ಕಡಿವಾಣ ಹಾಕಲು ಯಾರು ಮುಂದಾಗುತ್ತಿಲ್ಲ. ಜೆಲ್ಲಿ ಅಥವಾ ಎಂ.ಸ್ಯಾ0ಡ್ ಟಿಪ್ಪರ್‌ಗಳು ಅಧಿಕ ಭಾರ ಹೊತ್ತು ಸಾಗುತ್ತಿದ್ದರೂ ಅರ್‌ಟಿ.ಒ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕ್ರಶರ್‌ಗಳಿಂದ ಎಂ ಸ್ಯಾಂಡ್, ಜೆಲ್ಲಿ ಹೊತ್ತು ಬರುವ ಟಿಪ್ಪರ್‌ಗಳು ನೂರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಾರೆ. ರಾಷ್ಟಿಯ ಹೆದ್‌ರಿಯಲ್ಲಿ ಸಾರ್ವಜನಿಕರು ಸಂಚಾರ ಮಾಡಬೇಕಾದ್ರೆ ಬಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕೆದು ತಿಂಗಳಿ0ದ ಟಿಪ್ಪರ್ ಚಾಲಕರ ನಿರ್ಲಕ್ಷದಿಂದ ಅಪಘಾತಗಳಾಗಿ ಸಾವು ನೋವಾಗಿವೆ. ಗುರುವಾರ ರಾತ್ರಿ ಪೇರೆಸಂದ್ರ ಕಡೆಯಿಂದ ರಾಷ್ಟಿಯ ಹೆದ್ದಾರಿ ೪೪ರಲ್ಲಿ ಅತೀ ವೇಗದಲ್ಲಿ ಬಂದ ಕೆಎ 53, ಡಿ 6147 ನಂಬರಿನ ಟಿಪ್ಪರ್, ಜೆಲ್ಲಿ ತುಂಬಿಕೊ0ಡು ಬಂದು ಬನ್ನಿಕುಪ್ಪೆ ಗೇಟ್ ಬಳಿ ರಸ್ತೆ ಬದಿ ಇರುವ ಗುಂಡಿಯೊಳಗೆ ಪಲ್ಟಿ ಹೊಡೆದಿದೆ. ಅದೃಶ್ಯವಾಥ್ ಯಾವುದೇ ಸಾವು ನೋವಿನ ಪ್ರಕರಣಗಳು ಆಗಿಲ್ಲ. ಅದ್ರೆ ಸ್ಥಳೀಯ ಜನ ಮಾತ್ರ ಲಾರಿ ಚಾಲಕರ ಅತೀ ವೇಗದಿಂದ ಈ ರೀತಿ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ಗಣಿಗಾರಿಕೆಯಿಂದ ಪರ್ಮಿಟ್ ಗಿಂತ ಅಧಿಕ ಎಂ.ಸ್ಯಾ0ಡ್ ಮತ್ತು ಜಲ್ಲಿ ಹೊತ್ತು ಸಾಗುವ ಟಿಪ್ಪರ್‌ಗಳಿಂದ ಆಗುತ್ತಿರುವ ಅಪಘಾತಗಳಿಂದ ಸಾವು ನೋವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ರೆ ಅರ್‌ಟಿಒ ಮತ್ತು ಪೋಲಿಸ್ ಅಧಿಕಾರಿಗಳು ಮಾತ್ರ ಕಣ್ ಮುಚ್ಚಿ ಕುಳಿತಂತೆ ಇದ್ದಾರೆ. ಅದ್ರೆ ಟಿಪ್ಪರ್ ಹಾವಳಿಯಿಂದ ಚಿಕ್ಕಬಳ್ಳಾಪುರ ಜನ ಬೇಸತ್ತು ಹೋಗಿದೆ. ಇದಕ್ಕೆ ಕಡಿವಾಣ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದ್ದಾರೆ.