ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಮನುಷ್ಯನಿಗೆ ಸಂಪತ್ತಿಗಿ0ತ ಆರೋಗ್ಯ ಮುಖ್ಯ

1 min read

ಮನುಷ್ಯನಿಗೆ ಸಂಪತ್ತಿಗಿ0ತ ಆರೋಗ್ಯ ಮುಖ್ಯ

ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮ

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಭಿಮತ

ಪ್ರತಿಯೊಬ್ಬರು ಆಹಾರ ಪದ್ದತಿಯಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದು ಮುಖ್ಯ, ಉತ್ತಮ ಸಮತೋಲನ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಸರ್‌ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮಕ್ಕೆ ಸಿರಿಧಾನ್ಯಗಳ ಮಹತ್ವದ ಕುರಿತು ಜಾಗೃತಿ ಕರಪತ್ರö್ರಗಳನ್ನು ಬಿಡುಗಡೆಗೊಳಿಸಿ, ನಂತರ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಬೆಂಗಳೂರಿನಲ್ಲಿ ಅಂತಾರಾಷ್ಟಿçÃಯ ಸಮ್ಮೇಳನ ನಡೆಯುತ್ತಿದ್ದು, ಅದಕ್ಕೆ ಪೂರ್ವಧಾವಿಯಾಗಿ ಜಿ¯್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈಗಾಗಲೇ ಜಿಲ್ಲೆಯ ಮಹಿಳೆಯರು ಮತ್ತು ಪುರುಷರಿಗೆ ಮಿಲೆಟ್ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕಲಿ, ನಿಪ್ಪಟ್ಟು, ಪಾಯಸ, ಉಂಡೆ ಹಾಗೂ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಲಾಗಿತ್ತು. ಸಿರಿಧಾನ್ಯಗಳ ಬೆಳೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹಿಸಬೇಕು. ಸಿರಿಧಾನ್ಯಗಳು ಪರಿಸರಕ್ಕೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪರಿಸರಕ್ಕೆ ತಕ್ಕಂತೆ ಸಿರಿಧಾನ್ಯದ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಮನುಷ್ಯನಿಗೆ ಸಂಪತ್ತಿಗಿ0ತ ಆರೋಗ್ಯ ಮುಖ್ಯ, ಆದರೆ ಆರೋಗ್ಯ ಕಳೆದುಕೊಂಡರೆ ಜೀವನವೇ ವ್ಯರ್ಥವಾಗುತ್ತದೆ. ಮನುಷ್ಯನ ಜೀವನ ಅತ್ಯಅಮೂಲ್ಯವಾದದ್ದು, ಅದನ್ನು ಅರಿತವರೇ ಭಾಗ್ಯವಂತರು. ಪ್ರತಿ ದಿನ ಯಾರು ಸಿರಿಧಾನ್ಯ ಸೇವಿಸುತ್ತಾರೊ ಅವರ ದೇಹ ಮತ್ತು ಮನಸ್ಸು ಸಧೃಡವಾಗುತ್ತದೆ. ಸಿರಿಧಾನ್ಯಗಳನ್ನು ಸೇವನೆ ಮಾಡುವುದರಿಂದ ನಿಧಾನವಾಗಿ ಜೀರ್ಣಕ್ರಿಯೆ ನಡೆಯುತ್ತದೆ. ಮನುಷ್ಯನ ಸುಸ್ಥಿರ ಆರೋಗ್ಯ ಕಾಪಾಡಲು ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲು, ಊದಲು, ಸಜ್ಜೆ, ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಠಿಕಾಂಶಗಳು ಸಹಕಾರಿಯಾಗಿವೆ ಎಂದರು.

ಕ್ಯಾಲ್ಸಿಯ0 ಮತ್ತು ಆರೋಗ್ಯಯುಕ್ತ ಇತರೆ ಖನಿಜಾಂಶಗಳಿರುವ ಸಿರಿಧನ್ಯಗಳ ಸೇವನೆ ಶ್ರೀಮಂತ ವರ್ಗದ ಜನರು ಆಹಾರದ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಿರಿಧಾನ್ಯಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಸುಮಾರು 400 ಹೆಕ್ಟೇರ್ ಭೂಮಿಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವುದಕ್ಕೆ ಕೃಷಿ ಇಲಾಖೆ ಪ್ರೋತ್ಸಾಹ ನೀಡಿದೆ. ರೈತರು ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಸಿರಿಧಾನ್ಯಗಳ ಬೆಳೆ ಬೆಳೆಯುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಾಸಿಮ್ ಖಾನಂ ಮಾತನಾಡಿ, ಪ್ರತಿಯೊಬ್ಬರು ದಿನನಿತ್ಯ ಸಿರಿ ಧಾನ್ಯಗಳನ್ನು ಆಹಾರದಲ್ಲಿ ಸೇವಿಸಿದರೇ ಉತ್ತಮ ಆರೋಗ್ಯ ಹೊಂದಬಹುದು. ಪ್ರತಿ ವರ್ಷದಂತೆ ಈ ಧಾರಿಯೂ ಸಿರಿದಾನ್ಯ ನಡಿಗೆ ಆರೋಗ್ಯದ ಕಡೆ ಎಂಬ ಕಾರ್ಯಕ್ರಮ ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಇಲಾಖೆಯಿಂದ ಸಾರ್ವಜನಿಕರಿಗೆ ಹಲವಾರು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ವರ್ಷದ ಮೊದಲ ಮಿಲೆಟ್ ವಾರ ಸ್ಪರ್ಧೆ ನಡೆಸಿ, ಆ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಂತಾರಾಷ್ಟಿಯ ಮಿಲೆಟ್ ವಾರ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯಗಳ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಿರಿಧಾನ್ಯಗಳಿಗೆ ಹಿಂದಿನಿ0ದ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳುಬೇನೆ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ತಡೆಯಬಹುದಾಗಿದೆ. ಸಿರಿಧಾನ್ಯಗಳಿಂದ ರೋಗನಿರೋಧಕ ಶಕ್ತಿ ಆರೋಗ್ಯಕ್ಕೆ ಸಿರಿ ಧಾನ್ಯಗಳ ಆರೋಗ್ಯಕ್ಕೆ ಒಳ್ಳೆಯದು. ಅಂತಾರಾಷ್ಟಿಯ ಸಿರಿಧಾನ್ಯ ಜಾಗೃತಿ ಕಾರ್ಯಕ್ರಮವನ್ನು ಜನವರಿ ೨೩ ರಿಂದ ೨೫ ರ ವರಗೆ ಸಿರಿಧಾನ್ಯ ಮೇಳಕ್ಕೆ ಜಿಲ್ಲೆಯ ಎಲ್ಲಾ ಜನತೆ ಆಗಮಿಸಬೇಕು ಎಂದು ಮನವಿ ಮಾಡಿದರು.

೨೦೨೩ನೇ ವರ್ಷವನ್ನು ಅಂತಾರಾಷ್ಟಿಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿರುವುದರಿಂದ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಮಟ್ಟದ ಸಿರಿಧಾನ್ಯ ವಾಕ್‌ಥಾನ್ ನಡೆಯಿತು. ಸರ್‌ಎಂವಿ ಕ್ರೀಡಾಂಗಣದಿ0ದ ಜಾಗೃತಿ ಜಾಥಾ ಆರಂಭವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶಿಡ್ಲಘಟ್ಟ ವೃತ್ತ ಹಾಗೂ ನಗರದ ಮುಖ್ಯ ರಸ್ತೆ ಮೂಲಕ ಬಿಬಿ ರಸ್ತೆ ಮತ್ತೆ ಕೊನೆಯದಾಗಿ ಸರ್‌ಎಂ ವಿ ಕ್ರೀಡಾಂಗಣವರೆಗೂ ಸಾಗಿತು.

ಚಿಂತಾಮಣಿ ತಾಲೂಕಿನ ಕೃಷಿ ವಿಶ್ವ ವಿದ್ಯಾಲಯ ಮತ್ತು ಕುರುಬೂರು ರೇವ್‌ಶಿಬಿರಾರ್ಥಿಗಳು, ಪತಂಜಲಿ ಯೋಗ ಸಮಿತಿ ಸದಸ್ಯರು ಭಗವಹಿಸಿದ್ದರು. ನಗರಸಭೆ ಅಧ್ಯಕ್ಷ ಗಜೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶ್ ಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಗಾಯಿತ್ರಿ ನಗರ ಸಭೆ ಪೌರಯುಕ್ತ ಮನ್ಸೂರ್ ಆಲಿ, ಹಿರಿಯ ಕೃಷಿ ವಿಜ್ಞಾನಿ ಪಾಪಿ ರೆಡ್ಡಿ, ತಹಶೀರ್ಲ್ದಾ ಅನಿಲ್ ಇದ್ದರು.

About The Author

Leave a Reply

Your email address will not be published. Required fields are marked *