‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ
1 min read”ಘೋಸ್ಟ್ ‘ ಸಿನಿಮಾ ನೋಡಿ ಶಿವಣ್ಣನ ವಿಭಿನ್ನ ಅಭಿನಯದ ಗುಂಗಿನಲ್ಲಿಯೇ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗದೆ ಥಿಯೇಟರ್ ನಿಂದ ಹೊರಗೆ ಬರುವ ಪ್ರೇಕ್ಷಕರಿಗೆ ನಿರ್ದೇಶಕ ಶ್ರೀನಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ‘ಘೋಸ್ಟ್ 2’ ಸಿನಿಮಾ ಮಾಡುವುದಾಗಿ ಅವರು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ಮಾತ್ರವಲ್ಲದೆ, ಈಗಿನ ‘ಘೋಸ್ಟ್’ ಸಿನಿಮಾದಲ್ಲಿ ಉತ್ತರ ನೀಡದೇ ಬಿಟ್ಟಿದ್ದ ಹಲವು ಪ್ರಶ್ನೆಗಳಿಗೆ ‘ಘೋಸ್ಟ್ 2.0’ ಸಿನಿಮಾದಲ್ಲಿ ಉತ್ತರ ನೀಡುವುದಾಗಿಯೂ ಹೇಳಿದ್ದಾರೆ. ದಳವಾಯಿ ಬದುಕಿದ್ದಾನ ?, ಅಂಡರ್ಪಾಸ್ ಒಳಗಡೆ ಕಾರು, ಬೈಕ್ಗಳು ಹೆಂಗೆ ಬಂದವು ? ಶಿವಣ್ಣ, ಆ ವಿಗ್ರಹದ ಒಳಗಡೆ ಹೇಗೆ ಹೋದರು? ಬೋಟ್ಗಳನ್ನು ಆಪರೇಟ್ ಮಾಡಿದ್ದು ಯಾರು? ದಳವಾಯಿ ಮಗ ಯಾರು ? ಈ ಎಲ್ಲ ಪ್ರಶ್ನೆಗಳಿಗೂ ‘ಘೋಸ್ಟ್ 2.0’ ನಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.