ಹಾವೇರಿ ಅಡುಗೆ ಅನಿಲ ಸೋರಿಕೆ ಭೀತಿ ಜಿಲ್ಲಾಸ್ಪತ್ರೆಯಿಂದ ಹೊರಗೆ ಓಡಿಬಂದ ರೋಗಿಗಳು
1 min readಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿರುವ ಭೀತಿ ಉಂಟಾಗಿದ್ದರಿಂದ, ರೋಗಿಗಳು ಹಾಗೂ ಸಂಬಂಧಿಕರು ಕಟ್ಟಡದಿಂದ ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತುಕೊಂಡಿದ್ದರು.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ರೋಗಿಗಳು, ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾರ್ಡ್‌ವೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಇರಿಸಲಾಗಿತ್ತು. ರೋಗಿಯೊಬ್ಬರು ಸಿಲಿಂಡರ್‌ಗೆ ಒದ್ದಿದ್ದರೆಂದು ಗೊತ್ತಾಗಿದೆ. ಇದರಿಂದಾಗಿ ಸಿಲಿಂಡರ್ ಉರುಳಿಬಿದ್ದು, ವಾಸನೆ ಬರಲಾರಂಭಿಸಿತ್ತು.
ಆತಂಕಗೊಂಡ ರೋಗಿಗಳು, ಬೆಡ್ ಮೇಲಿಂದ ಎದ್ದು ಸಂಬಂಧಿಕರ ಸಮೇತ ಹೊರಗೆ ಓಡಿ ಬಂದಿದ್ದರು. ಕೆಲ ನಿಮಿಷಗಳಲ್ಲಿ ಜಿಲ್ಲಾಸ್ಪತ್ರೆಯ ಎದುರಿನ ರಸ್ತೆ, ರೋಗಿಗಳು ಹಾಗೂ ಸಂಬಂಧಿಕರಿಂದ ತುಂಬಿತ್ತು.
ಕೆಲವರು, ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ಓಡಿಬಂದಿದ್ದರು. ಬಾಣಂತಿಯರು, ಅಪಘಾತದಲ್ಲಿ ಗಾಯಗೊಂಡವರು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಹೊರಗೆ ಓಡಿ ಬಂದು ರಸ್ತೆಯಲ್ಲಿ ನಿಂತಿದ್ದರು. ಕೆಲವರು ಡ್ರಿಪ್ಸ್ ಸಮೇತವೇ ಹೊರಗೆ ಬಂದಿದ್ದರು.
ಜಿಲ್ಲಾಸ್ಪತ್ರೆ ಸಿಬ್ಬಂದಿಯೇ ಸಿಲಿಂಡರ್ ಅನ್ನು ಹೊರಗೆ ತಂದು ಬೇರೆಡೆ ಸಾಗಿಸಿದರು. ಇದಾದ ನಂತರ, ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆ ಒಳಗೆ ಹೋಗಿದ್ದಾರೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday