ಹಮೂನ್ : ೭ ಜಿಲ್ಲೆಗಳಲ್ಲಿ ಭಾರೀ ಮಳೆ
1 min readಅ.೨೫-ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ “ಹಮೂನ್’ ಚಂಡಮಾರುತವು ಭಾರೀ ಚಂಡಮಾರುತವಾಗಿ ತೀವ್ರತೆ ಪಡೆದುಕೊಂಡಿದ್ದು, ಹಮೂನ್ ಎಫೆಕ್ಟ್ ಎಂಬಂತೆ ಪಶ್ಚಿಮ ಬಂಗಾಲ, ಒಡಿಶಾ, ಮಣಿಪುರ, ಮಿಜೋರಾಂ ಸೇರಿ ೭ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ಈ ಚಂಡಮಾರುತ ಇಂದು ಸಂಜೆ ವೇಳೆಗೆ ಬಾಂಗ್ಲಾ ಕರಾವಳಿಯನ್ನು ಹಾದುಹೋಗಲಿದೆ. ಬಾಂಗ್ಲಾ ಕರಾವಳಿಗೆ ಅಪ್ಪಳಿಸುವ ಮುನ್ನ ಚಂಡಮಾರುತ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆದರೆ ಹಮೂನ್ ಎಫೆಕ್ಟ್ ಎಂಬಂತೆ ಪಶ್ಚಿಮ ಬಂಗಾಲ, ಒಡಿಶಾ, ಮಣಿಪುರ, ಮಿಜೋರಾಂ ಸೇರಿ ೭ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರದಲ್ಲೂ ದಟ್ಟ ಅಲೆಗಳು ಏಳಲಿದ್ದು, ಸಮುದ್ರ ಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಇನ್ನೊಂದೆಡೆ ಹಿಂದೂ ಮಹಾಸಾಗರದಲ್ಲಿ ಎದ್ದಿರುವ ತೇಜ್ ಚಂಡಮಾರುತವು ಯೆಮೆನ್ ಕರಾವಳಿಯನ್ನು ದಾಟಿದ್ದು, ಈಗಾಗಲೇ ಈ ಚಂಡಮಾರುತ ದುರ್ಬಲಗೊಂಡಿದೆ.