ಹೆಚ್.ಡಿ.ಕೆ. ಚಿಕ್ಕಬಳ್ಳಾಪುರದಲ್ಲಿ ಹೀನಾಯವಾಗಿ ಸೋತರು ಮಾಜಿ ಸಂಸದ ವೀರಪ್ಪ ಮೊಯ್ಲಿ ವ್ಯಂಗ್ಯ
1 min readರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ಹೆಚ್.ಡಿ.ಕೆ. ಚಿಕ್ಕಬಳ್ಳಾಪುರದಲ್ಲಿ ಹೀನಾಯವಾಗಿ ಸೋತರು ಮಾಜಿ ಸಂಸದ ವೀರಪ್ಪ ಮೊಯ್ಲಿ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು, ಫಲಿತಾಂಶದಲ್ಲಿ ಮೂರನೇ ಸ್ಥಾನಕ್ಕೆ ಬಂದು ಠೇವಣಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಂಸದ ವೀರಪ್ಪಮೊಯ್ಲಿ ಲೇವಡಿ ಮಾಡಿದ್ದಾರೆ.
ಅಂತಹವರಿಗೆ 20 ಸೀಟು ಬರುತ್ತೆ ಅಂದ್ರೆ ಅದಕ್ಕೆ ನೀವು ಬೆಲೆ ಕೋಡ್ತೀರಾ? ಅಥವಾ ವಾಸ್ತವಿಕವಾಗಿ ಏನಾಗಿದೆ ಅದಕ್ಕೆ ಬೆಲೆ ಕೊಡ್ತೀರಾ ಎಮದು ಪ್ರಶ್ನಿಸಿದರು. ಪಾಪ ಕುಮಾರಸ್ವಾಮಿ ಸೋತರೂ ಹೇಳ್ಕೋತಾರೆ, ಗೆದ್ದರೂ ಹೇಳ್ಕೋತಾರೆ. ಅವರ ವಿಚಾರ ಗಂಭಿರವಾಗಿ ಪರಿಗಣಿಸಲಾಗುವುದಿಲ್ಲ ಎಂದರು.
ಚಿಕ್ಕಬಳ್ಳಾಪುರದ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ರದ್ದತಿ ಹೇಳಿಕೆ ಬಗ್ಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ,
ಜಾತೀಯ, ಮತೀಯ, ಪಂಗಡಗಳ ದ್ವೇಷ, ಮಾಡುವುದೇ ಬಿಜೆಪಿಯ ಅಜೆಂಡಾ,
ಆ ಅಜೆಂಡಾ ಇಲ್ಲಾ ಅಂದ್ರೆ ಅವರಿಗೆ ಶಕ್ತಿನೂ ಇಲ್ಲ ತಾಕ್ಕತ್ತೂ ಇಲ್ಲ. ಜನರ ಮನಸ್ಸನ್ನ ಗಲಬೆ ಆತಂಕ ಮೂಡಿಸುವುದರಿಂದಲೇ ರಾಜಕೀಯ ಬೇಳೆ ಬೇಯಿಸಿಕೊಳ್ತಾರೆ ಎಂದು ಕಿಡಿ ಕಾರಿದರು.